For the best experience, open
https://m.suddione.com
on your mobile browser.
Advertisement

ಎಸ್.ನಿಜಲಿಂಗಪ್ಪನವರ 25 ನೇ ವರ್ಷದ ಪುಣ್ಯಸ್ಮರಣೆ : ಇಂದಿನ ಯುವ ಪೀಳಿಗೆಗೆ ಅವರ ತತ್ವ ಆದರ್ಶ ತಿಳಿಸಬೇಕಿದೆ : ಮಾದಾರ ಚನ್ನಯ್ಯ ಸ್ವಾಮೀಜಿ

05:21 PM Aug 08, 2024 IST | suddionenews
ಎಸ್ ನಿಜಲಿಂಗಪ್ಪನವರ 25 ನೇ ವರ್ಷದ ಪುಣ್ಯಸ್ಮರಣೆ   ಇಂದಿನ ಯುವ ಪೀಳಿಗೆಗೆ ಅವರ ತತ್ವ ಆದರ್ಶ ತಿಳಿಸಬೇಕಿದೆ   ಮಾದಾರ ಚನ್ನಯ್ಯ ಸ್ವಾಮೀಜಿ
Advertisement

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 08  : ರಾಷ್ಟ್ರ ನಾಯಕ, ಹಿರಿಯ ಮುತ್ಸದಿ ಎಸ್.ನಿಜಲಿಂಗಪ್ಪನವರ ತತ್ವಾರ್ಶಗಳನ್ನು ಇಂದಿನ ಯುವ ಪೀಳಿಗೆಗೆ ತಿಳಿಸಬೇಕಿದೆ ಎಂದು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.

Advertisement

ಸೀಬಾರ ಸಮೀಪವಿರುವ ಸ್ಮಾರಕದಲ್ಲಿ ಗುರುವಾರ ನಡೆದ ಎಸ್.ನಿಜಲಿಂಗಪ್ಪನವರ 25 ನೇ ವರ್ಷದ ಪುಣ್ಯಸ್ಮರಣೆಯಲ್ಲಿ ಅವರ ಭಾಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ಪ್ರಪಂಚದ ಅಕ್ಕಪಕ್ಕದ ದೇಶಗಳಲ್ಲಿ ನಡೆಯುತ್ತಿರುವ ಅನಾಹುತಗಳನ್ನು ನೋಡುತ್ತಿದ್ದೇವೆ. ಬಾಂಗ್ಲಾದಲ್ಲಿ ಮೀಸಲಾತಿಗಾಗಿ ಭುಗಿಲೆದ್ದಿರುವ ಹಿಂಸಾಚಾರದಿಂದ ಅರಾಜಗಕತೆಯುಂಟಾಗಿರುವುದಕ್ಕೆ ಮಾರ್ಗದರ್ಶನದ ಕೊರತೆ ಕಾರಣ. ನಮ್ಮ ದೇಶದಲ್ಲಿ ಆಧ್ಯಾತ್ಮ, ಸಂಸ್ಕಾರದ ಶಿಕ್ಷಣವಿದೆ. ನಿಷ್ಕಳಂಕ ರಾಜಕಾರಣಿಯಾಗಿದ್ದ ಎಸ್.ಎನ್.ರವರ ಭವಿಷ್ಯ ಭಾರತದ ದೃಷ್ಟಿಯಿಂದ ಅವರಲ್ಲಿದ್ದ ಚಿಂತನೆಗಳನ್ನು ಎಲ್ಲರಿಗೂ ತಿಳಿಸಬೇಕಿದೆ. ಇಲ್ಲಿ ಶಾಸಕರಿಗೆ, ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಶಿಬಿರಕ್ಕೆ ಶೀಘ್ರ ಚಾಲನೆ ಕೊಡಬೇಕಾಗಿರುವುದರಿಂದ ಸರ್ಕಾರ ಮತ್ತು ಜಿಲ್ಲಾಡಳಿತ ಸಹಕಾರ ಮುಖ್ಯ ಎಂದು ತಿಳಿಸಿದರು.

ಎಸ್.ಎನ್. ಸ್ಮಾರಕದ ಕಂಬಗಳು ಒಂದವರೆ ದಶಕದಿಂದ ಶಿಥಿಲಗೊಂಡಿವೆ. ಅನಾಹುತ ಸಂಭವಿಸುವ ಮುನ್ನ ಸರ್ಕಾರ ಜಿಲ್ಲಾಡಳಿತ ಎಚ್ಚೆತ್ತುಕೊಂಡು ರಿಪೇರಿ ಮಾಡಿಸಬೇಕೆಂದು ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮನವಿ ಮಾಡಿದರು.

ಎಸ್.ಎನ್.ಸ್ಮಾರಕ ಟ್ರಸ್ಟ್ ಗೌರವ ಕಾರ್ಯದರ್ಶಿ ಹೆಚ್.ಹನುಮಂತಪ್ಪ, ಟ್ರಸ್ಟಿಗಳಾದ ಕೆ.ಇ.ಬಿ.ಷಣ್ಮುಖಪ್ಪ, ಎಂ.ಕೆ.ತಾಜ್‍ಪೀರ್, ರೋಟರಿ ಕ್ಲಬ್ ಅಧ್ಯಕ್ಷ ಜಿ.ಎನ್.ವೀರಣ್ಣ ರೊ.ವೀರಭದ್ರಸ್ವಾಮಿ, ರೊ.ಎಸ್.ವೀರೇಶ್, ಜಿ.ಎಂ.ಪ್ರಕಾಶ್, ನಾಗರಾಜ್ ಸಂಗಮ್, ಎಂ.ಕೆ.ಹಟ್ಟಿಯಲ್ಲಿರುವ ಬಸವೇಶ್ವರ ವಿದ್ಯಾಸಂಸ್ಥೆ ಹಾಗೂ ಮಹಿಳಾ ಸಹಾಯವಾಣಿ ಸಾಂತ್ವನ ಕೇಂದ್ರದ ಕಾರ್ಯದರ್ಶಿ ಶಂಕರಪ್ಪ ವಿ.ಕೆ. ತಮಟಕಲ್ಲು ಕರಿಬಸಪ್ಪ, ಧನಂಜಯ ಲಕ್ಷ್ಮಿಸಾಗರ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಜಯಣ್ಣ ಸೇರಿದಂತೆ ವಿಶ್ವಮಾನವ ಶಾಲೆಯ ನೂರಾರು ಮಕ್ಕಳು ಪುಣ್ಯಸ್ಮರಣೆಯಲ್ಲಿ ಪಾಲ್ಗೊಂಡಿದ್ದರು.

Tags :
Advertisement