ಎಸ್.ಜೆ.ಎಂ. ದಂತ ಮಹಾವಿದ್ಯಾಲಯದ 34ನೇ ಪದವಿ ಪ್ರದಾನ ಸಮಾರಂಭ
05:40 PM Oct 02, 2024 IST
|
suddionenews
Advertisement
ಸುದ್ದಿಒನ್, ಚಿತ್ರದುರ್ಗ, ಅ. 02 : ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಅನುಭವ ಮಂಟಪದಲ್ಲಿ ದಿ.1-10-24ರಂದು ಮಂಗಳವಾರ ಎಸ್.ಜೆ.ಎಂ. ದಂತ ಮಹಾವಿದ್ಯಾಲಯದ 34ನೇ ಪದವಿ ಪ್ರದಾನ ಸಮಾರಂಭ ನೆರವೇರಿತು. ಕಾರ್ಯಕ್ರಮದಲ್ಲಿ ಬಿ.ಡಿ.ಎಸ್. ಪದವಿಯನ್ನು ಪೂರೈಸಿದ 55 ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರಗಳನ್ನು ಸ್ವೀಕರಿಸಿದರು.
Advertisement
ರಾಜೀವಗಾಂಧಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಕೆ. ರಮೇಶ್, ಬೆಂಗಳೂರು ರಾಜರಾಜೇಶ್ವರಿ ದಂತ ಮಹಾವಿದ್ಯಲಯದ ಪ್ರಾಂಶುಪಾಲರಾದ ಡಾ. ಹೆಚ್.ಸಿ. ಗಿರೀಶ್, ಎಸ್.ಜೆ.ಎಂ. ವಿದ್ಯಾಪೀಠ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳು, ಡಾ. ಎಂ.ಹೆಚ್. ರಘುನಾಥರೆಡ್ಡಿ, ಪ್ರಾಚಾರ್ಯರು, ಎಸ್‍ಜೆಎಂ ದಂತ ಮಹಾವಿದ್ಯಲಯ ಇವರುಗಳು ವೇದಿಕೆಯಲ್ಲಿದ್ದರು.
ಡಾ. ಕೋದಂಡರಾಮ, ಡಾ. ಹರಿಣಿ, ಡಾ. ದೀಪಾ, ಡಾ. ಕೇಶವರೆಡ್ಡಿ, ಡಾ. ಹರೀಶ, ಡಾ. ಅಬ್ದುಲ್ ಮುಜೀಬ್, ಡಾ. ಜಯಚಂದ್ರ, ಡಾ. ತನ್ವೀರ ಅಹಮದ್ ಮೊದಲಾದವರಿದ್ದರು.
Advertisement
Advertisement
Next Article