For the best experience, open
https://m.suddione.com
on your mobile browser.
Advertisement

ಎಸ್.ಜೆ.ಎಂ. ಪದವಿ ಕಾಲೇಜಿನಲ್ಲಿ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ : ಸವಿನೆನಪು ಮೆಲುಕು ಹಾಕಿದ ಹಳೆಯ ಗೆಳೆಯರು

05:27 PM Dec 01, 2024 IST | suddionenews
ಎಸ್ ಜೆ ಎಂ  ಪದವಿ ಕಾಲೇಜಿನಲ್ಲಿ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ   ಸವಿನೆನಪು ಮೆಲುಕು ಹಾಕಿದ ಹಳೆಯ ಗೆಳೆಯರು
Advertisement

ಚಿತ್ರದುರ್ಗ, ಡಿಸೆಂಬರ್. 01 : ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದೊಂದಿಗೆ ಉತ್ತಮ ನಾಗರೀಕರನ್ನಾಗಿ ರೂಪಿಸುವ ಶಿಕ್ಷಣ ಸಂಸ್ಥೆಯಲ್ಲಿ ಓದಿದ ವಿದ್ಯಾರ್ಥಿ ಬೆಳೆದು ದೊಡ್ಡವನಾಗಿ ಯಥಾಶಕ್ತಿ ಸ್ಥಾನ ಮತ್ತು ಉನ್ನತ ಹುದ್ದೆಗಳನ್ನು ಹೊಂದಿದಾಗ, ಆ ಸಂಸ್ಥೆಗೆ ಹೆಮ್ಮೆ ಮತ್ತು ಸಾರ್ಥಕ ಭಾವ ಮೂಡುತ್ತದೆ ಎಂದು ಪ್ರಾಚಾರ್ಯರಾದ ಡಾ. ಎಸ್.ಹೆಚ್. ಪಂಚಾಕ್ಷರಿ ಹೇಳಿದರು.

Advertisement

ನಗರದ ಚಂದ್ರವಳ್ಳಿಯ ಎಸ್.ಜೆ.ಎಂ. ಪದವಿ ಕಾಲೇಜಿನಲ್ಲಿ ಐಕ್ಯೂಎಸಿ ಮತ್ತು ಹಳೆ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ನಡೆದ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗುರುವೆಂದರೆ ಶಿಷ್ಯನ ಒಳಅರಿವನ್ನು ಜಾಗೃತಗೊಳಿಸುವ ಶಕ್ತಿ. ಗುರು-ಶಿಷ್ಯರ ಸಂಬಂಧವು ಹಾರ್ದಿಕವಾಗಿರಬೇಕು. ಉತ್ತಮ ವಿದ್ಯಾರ್ಥಿ ಸ್ವಾಧ್ಯಯನ ಹಾಗು ಬುದ್ಧಿವಂತಿಕೆಯ ಗುಣಗಳಿಂದ ಗುರುವಿನ ಮೇಲೆ ಪ್ರಭಾವ ಮೂಡಿಸುತ್ತಾನೆ. ವಿದ್ಯಾರ್ಥಿ ತನಗೆ ವಿದ್ಯಾರ್ಜನೆ ಮಾಡಿದ ಗುರು ಮತ್ತು ಸಂಸ್ಥೆಯನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಾಗುತ್ತದೆ. ಸಂಸ್ಥೆಯಲ್ಲಿ ಓದಿದ ಬಹಳಷ್ಟು ವಿದ್ಯಾರ್ಥಿಗಳು ಇಂದು ವಿಜ್ಞಾನಿಗಳು, ರಾಜಕಾರಣಿಗಳು, ಉದ್ಯಮಿಗಳಾಗಿ, ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವುದು ನಮ್ಮ ಕಾಲೇಜಿನ ಕೀರ್ತಿಯಾಗಿದೆ. ತಮ್ಮಿಂದ ಇಂಥ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಲಿ ಎಂದು ಆಶಿಸಿದರು.

Advertisement

ಹಳೆ ವಿದ್ಯಾರ್ಥಿ ಪ್ರೊ. ಗಿರೀಶ್ ಮಾತನಾಡಿ, ನನಗೆ ಈ ಮಹಾವಿದ್ಯಾಲಯವು ಬದುಕನ್ನು ಕಟ್ಟಿಕೊಳ್ಳಲು ನೆರವಾಗಿದೆ. ಈ ಸಂಸ್ಥೆಯು ರಾಷ್ಟ್ರಮಟ್ಟದಲ್ಲಿ ಬೆಳೆಯಬೇಕು ಅದಕ್ಕಾಗಿ ನನ್ನ ಸಹಕಾರ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಶಿಕ್ಷಣ ವ್ಯವಸ್ಥೆಯು ವ್ಯವಹಾರ ಆಗಿಬಿಟ್ಟಿದೆ. ಶಿಕ್ಷಕರು ಶಿಕ್ಷಣ ವ್ಯವಸ್ಥೆಯನ್ನು ಬದಲಾವಣೆ ಮಾಡಬೇಕಾಗಿದೆ ಎಂದರು.

ಉದ್ಯಮಿ ಶಂಶೀರ್ ಮಾತನಾಡಿ, ಸಮಾಜದಲ್ಲಿ ಈ ದಿನ ನಾವು ಬದುಕನ್ನು ಕಟ್ಟಿಕೊಂಡಿದ್ದೇವೆ ಅಂದರೆ ಅದಕ್ಕೆ ಕಾರಣ ಇಲ್ಲಿನ ಶಿಕ್ಷಕ ವರ್ಗ ಹಾಗು ಈ ಮಹಾವಿದ್ಯಾಲಯ. ನನ್ನ ಬ್ಯಾಚಿನ 40ಕ್ಕು ಹೆಚ್ಚು ಸಹಪಾಠಿಗಳು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನಮಗೆಲ್ಲ ಜೀವನವನ್ನು ರೂಪಿಸಿ ಧೈರ್ಯವನ್ನು ತುಂಬಿದಂತಹ ಕಾಲೇಜು ಎಂದು ಸ್ಮರಿಸಿದರು.

ತರೀಕೆರೆಯ ಎಸ್.ಜೆ.ಎಂ. ಕಾಲೇಜು ದೈಹಿಕಶಿಕ್ಷಣ ನಿರ್ದೇಶಕ ರಘು ಮಾತನಾಡಿ, ಈ ಸಂಸ್ಥೆಯಲ್ಲಿ ನನ್ನ ಜತೆ ಓದಿದ ಬಹಳಷ್ಟು ವಿದ್ಯಾರ್ಥಿಗಳು ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ. ಇದೇ ಸಂಸ್ಥೆಯಲ್ಲಿ ಓದಿ, ಇದೇ ಸಂಸ್ಥೆಯಲ್ಲಿ ದೈಹಿಕ ನಿರ್ದೇಶಕನಾಗಿ ಸೇವೆ ಸಲ್ಲಿಸಲು ಅವಕಾಶ ಒದಗಿಬಂದದ್ದು ನನ್ನ ಸೌಭಾಗ್ಯ ಎಂದು ಹೇಳಿದರು.
ಪ್ರಥಮದರ್ಜೆ ಗುತ್ತಿಗೆದಾರ ಹಳೆಯ ವಿದ್ಯಾರ್ಥಿ ರಮೇಶ್ ಕೋಟಿ ಮಾತನಾಡಿ, ವಿದ್ಯಾರ್ಥಿ ಜೀವನದ ಹಿಂದಿನ ದಿನಗಳನ್ನು ನೆನೆದುಕೊಂಡರೆ ಒಂದು ಕಡೆ ಸಂತೋಷ ಇನ್ನೊಂದು ಕಡೆ ದುಃಖ ಆಗುತ್ತದೆ. ತುಂಬಾ ಕಷ್ಟದ ದಿನಗಳನ್ನು ಕಳೆದಿz್ದÉೀನೆ. ಈ ವಿದ್ಯಾಲಯವು ಅಕ್ಷರ ಜ್ಞಾನವನ್ನು ನೀಡಿದೆ. ಈಗ ಪ್ರಥಮದರ್ಜೆ ಗುತ್ತಿಗೆದಾರನಾಗಿದ್ದೇನೆ ಇದಕ್ಕೆಲ್ಲ ಕಾರಣ ಈ ಮಹಾವಿದ್ಯಾಲಯ ಎಂದು ಸ್ಮರಿಸಿದರು.

ಶಿಕ್ಷಕ ಪ್ರದೀಪ್ ಮಾತನಾಡಿ, ಎಸ್.ಜೆ.ಎಂ. ಕಾಲೇಜಿನಲ್ಲಿ ಓದಿ ಜ್ಞಾನವನ್ನು ಮತ್ತು ವ್ಯಕ್ತಿತ್ವವನ್ನು ರೂಪಿಸಿಕೊಂಡಿz್ದÉೀನೆ. ಬಹುಶಃ ಇಂಗ್ಲಿಷ್ ಎಲ್ಲರಿಗೂ ಕಬ್ಬಿಣದ ಕಡಲೆ. ಇಂಗ್ಲಿಷ್ ಎಂದರೆ ಭಯಪಡುತ್ತಿದ್ದ ಸಂದರ್ಭದಲ್ಲಿ ಈ ಮಹಾವಿದ್ಯಾಲಯದ ಆಂಗ್ಲವಿಭಾಗದ ಪ್ರಾಧ್ಯಾಪಕರುಗಳು ನನ್ನಲ್ಲಿ ಧೆರ್ಯ ತುಂಬಿ ಇಂಗ್ಲಿಷ್ ವಿಷಯವನ್ನು ಆಯ್ಕೆ ಮಾಡಿಕೊಳ್ಳಲು ಹೇಳಿದ್ದರಿಂದ ಇಂದು ಸರ್ಕಾರಿ ಶಾಲೆಯಲ್ಲಿ ಆಂಗ್ಲ ಶಿಕ್ಷಕನಾಗಲು ಸಾಧ್ಯವಾಯಿತು ಎಂದರು.

ಐಕ್ಯುಎಸಿ ಸಂಚಾಲಕ ಡಾ. ಹರ್ಷವರ್ಧನ್ ಎ., ಹಳೆಯ ವಿದ್ಯಾರ್ಥಿಗಳಾದ ಅಭಿಲಾಷ್, ಶಿಕ್ಷಕಿ ವಿಶಾಲ, ಪೂಜಾ, ಸಸ್ಯಶಾಸ್ತ್ರ ಉಪನ್ಯಾಸಕಿ ಹೀನಾ ಕೌಸರ್, ದೀಪಾ ಮಾತನಾಡಿದರು.
ಪ್ರೊ. ಟಿ.ಎನ್. ರಜಪೂತ್, ಪ್ರೊ. ಸಿ.ಎನ್. ವೆಂಕಟೇಶ್, ಡಾ. ನಾಜಿರುನ್ನೀಸ ಎಸ್., ಪ್ರೊ. ವಿ.ಎಸ್. ನಳಿನಿ, ಡಾ. ಹೆಚ್. ಸತೀಶ್‍ನಾಯ್ಕ್, ಪ್ರೊ. ಬಿ.ಎಂ. ಸ್ವಾಮಿ, ಡಾ. ಚಿದಾನಂದಪ್ಪ, ಮಾಧುರಿ, ಅಕ್ಷತಾ, ನಯನ, ಬೋಧಕೇತರರಾದ ಶ್ರೀಮತಿ ಸಿದ್ದಮ್ಮ, ಶ್ರೀಮತಿ ವರಲಕ್ಷ್ಮಿ, ಅಧೀಕ್ಷಕ ಹೆಚ್. ಶ್ರೀನಿವಾಸಮೂರ್ತಿ ಭಾಗವಹಿಸಿದ್ದರು.

ಹಳೆ ವಿದ್ಯಾರ್ಥಿಗಳ ಸಂಘದ ಖಜಾಂಚಿ ಪ್ರೊ. ಹೆಚ್.ಎಂ. ಮಂಜುನಾಥಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡುತ್ತ, ಕಾಲೇಜಿನ ಹಳೆಯ ವಿದ್ಯಾರ್ಥಿಗಳ ದೇಣಿಗೆಯಲ್ಲಿ ಸಸಿ ನೆಡುವ ಕಾರ್ಯಕ್ರಮ, ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ, ಬಡವಿದ್ಯಾರ್ಥಿಗಳಿಗೆ ಕಾಲೇಜು ಶುಲ್ಕ, ಸಮವಸ್ತ್ರ, ಪೀಠೋಪಕರಣಗಳ ಖರೀದಿ, ವಿಶ್ವ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ವಿ.ಜಿ. ಗಿರೀಶ್ ಅವರಿಗೆ ಸನ್ಮಾನ, ಪ್ರಾಚಾರ್ಯರುಗಳಿಗೆ ಸನ್ಮಾನ, ಜಯದೇವ ಸಭಾ ಭವನ ಉನ್ನತೀಕರಿಸಲಾಗಿದೆ ಎಂದು ಹೇಳಿದರು.

ಆಂಗ್ಲ ಪ್ರಾಧ್ಯಾಪಕ ಪ್ರೊ. ಸಿ. ತಿಪ್ಪೇಸ್ವಾಮಿ ಸ್ವಾಗತಿಸಿದರು. ಕನ್ನಡ ಪ್ರಾಧ್ಯಾಪಕ ಡಾ. ಬಿ. ರೇವಣ್ಣ ನಿರೂಪಿಸಿದರು. ಸಮಾಜಶಾಸ್ತ್ರ ಪ್ರಾಧ್ಯಾಪಕ ಡಾ. ಎಸ್. ಆನಂದ್ ವಂದಿಸಿದರು.

Tags :
Advertisement