Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಶೈಕ್ಷಣಿಕ ಸಾರ್ಥಕತೆಗಾಗಿ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದೇವೆ : ಎಂ.ಸಿ.ರಘುಚಂದನ್

04:11 PM Dec 20, 2023 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.20 : ಗುಣಮಟ್ಟದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರುಗಳಿದ್ದಾಗ ಮಾತ್ರ ರ್ಯಾಂಕ್ ಪಡೆಯಲು ಸಾಧ್ಯ ಎಂದು ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸಿ.ರಘುಚಂದನ್ ಹೇಳಿದರು.

Advertisement

ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ, ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಮಧುರ ಕ್ಷಣಗಳು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿ ಬೀಳ್ಕೊಡುಗೆ ಸಮಾರಂಭ ಉದ್ಗಾಟಿಸಿ ಮಾತನಾಡಿದರು.

ಜ್ಞಾನ ಎನ್ನುವುದು ಪವಿತ್ರ ಶ್ರೇಷ್ಟವಾದುದು. ಪರಮಾತ್ಮನ ಸ್ವರೂಪವಿದ್ದಂತೆ. ಶಿಕ್ಷಕರುಗಳು ವೃತ್ತಿ ಧರ್ಮದ ಪಾವಿತ್ರತೆಯನ್ನು ಕಾಪಾಡಿಕೊಳ್ಳಬೇಕು. ಶಿಕ್ಷಕರುಗಳಲ್ಲಿ ತಾಳ್ಮೆಯಿರಬೇಕು. ನಿರ್ಧಿಷ್ಠವಾದ ಗುರಿಯಿಟ್ಟುಕೊಂಡು ಮುಂದಿನ ಹೆಜ್ಜೆಯಿಡಬೇಕು. ಗುಣಮಟ್ಟದ ವಿದ್ಯಾರ್ಥಿಗಳು ಕಡಿಮೆಯಾಗುತ್ತಿರುವುದರಿಂದ ಬಹಳ ದಿನಗಳಿಂದ ನಮ್ಮ ಸಂಸ್ಥೆಗೆ ರ್ಯಾಂಕ್ ಬಂದಿರಲಿಲ್ಲ. ಕಳೆದ ಜುಲೈ/ಆಗಸ್ಟ್‌ನಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದಿಂದ ನಡೆದ ಬಿ.ಕಾಂ. ಅಂತಿಮ ಪದವಿ ಪರೀಕ್ಷೆಯಲ್ಲಿ ಕವಿತಾ ಪ್ರಥಮ ರ್ಯಾಂಕ್ ಗಳಿಸಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಪಿ.ಯು.ಸಿ.ಯಲ್ಲಿ ರಾಜ್ಯಕ್ಕೆ ಆರನೆ ರ್ಯಾಂಕ್ ಗಳಿಸಿದ್ದರು. ಎಸ್.ಎಸ್.ಎಲ್.ಸಿ.ಯಲ್ಲಿ ಅತಿ ಹೆಚ್ಚು ಗಳಿಸಿದ ಪರಿಣಾಮ ಉಚಿತ ಶಿಕ್ಷಣ ನೀಡಿದ್ದೇವೆ ಎಂದರು.

ತೆಲಂಗಾಣ, ರಾಜಸ್ಥಾನ, ಮಧ್ಯಪ್ರದೇಶ ಸೇರಿದಂತೆ ದೇಶದ ನಾನಾ ರಾಜ್ಯಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ಬಂದು ನಮ್ಮ ಸಂಸ್ಥೆಯಲ್ಲಿ ಶಿಕ್ಷಣ ಪಡೆದು ನಾನಾ ಕಡೆ ಉದ್ಯೋಗದಲ್ಲಿರುವುದು ನಿಜವಾಗಿಯೂ ನಮಗೆ ಖುಷಿ ಕೊಟ್ಟಿದೆ. ಸರ್ಕಾರದ ಗ್ರಾಂಟ್‍ಗಾಗಿ ಹದಿನೆಂಟು ವರ್ಷಗಳ ಕಾಲ ಕಾದು ಕೆಲಸ ಮಾಡಿದ ಸಿಬ್ಬಂದಿಗಳು ನಮ್ಮ ಸಂಸ್ಥೆಯಲ್ಲಿದ್ದಾರೆ. ಕೇವಲ ಹಣ ಗಳಿಕೆಯಷ್ಟೆ ನಮ್ಮ ಸಂಸ್ಥೆಯ ಉದ್ದೇಶವಲ್ಲ. ಶೈಕ್ಷಣಿಕ ಸಾರ್ಥಕತೆಗಾಗಿ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದೇವೆ. ವಿದ್ಯಾರ್ಥಿಗಳಲ್ಲಿ ಹುಡುಗಾಟ, ಉಡಾಫೆ ಇರಬಾರದು.

ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಜಿ.ಈ.ಭೈರಸಿದ್ದಪ್ಪ, ಆರ್.ಎಸ್.ರಾಜು, ಡಾ.ಬಿ.ಸಿ.ಅನಂತರಾಮು, ಎಂ.ವಿ.ಗೋವಿಂದರಾಜು, ಡಾ.ಕೆ.ಪಿ.ನಾಗಭೂಷಣ, ಡಾ.ಬಿ.ಚಂದ್ರಪ್ಪ, ಡಾ.ಜಿ.ಬಿ.ರಾಜಪ್ಪ, ವಿ.ಪ್ರಕಾಶ್, ಡಾ.ಲಿಂಗರಾಜು, ಆರ್.ಹಂಚಿನಮನೆ, ಬಸವರಾಜ್ ಸಿ. ಎಮ್.ಜಿ.ಪರಶುರಾಮ್, ಜಿ.ಜೆ.ಸೂರಯ್ಯ, ಸ್ವಾಲೇಹ ಬೇಗಂ, ಕು.ಕಲ್ಪನಾ ಎಂ.ಆರ್, ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರುಗಳು, ಬೋಧಕ, ಬೋಧಕೇತರ ಸಿಬ್ಬಂದಿಯವರು ಈ ಸಂದರ್ಭದಲ್ಲಿ ಹಾಜರಿದ್ದರು.

Advertisement
Tags :
academic excellencechitradurgaeducational institutionMC Raghuchandansuddioneಎಂ.ಸಿ.ರಘುಚಂದನ್‌ಚಿತ್ರದುರ್ಗಶಿಕ್ಷಣ ಸಂಸ್ಥೆಶೈಕ್ಷಣಿಕಸಾರ್ಥಕತೆಸುದ್ದಿಒನ್
Advertisement
Next Article