Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಪಾವಗಡ - ಮಡಕಶಿರಾ ಹೊಸ ರೈಲು ಮಾರ್ಗಕ್ಕೆ ರೂ.265.00 ಕೋಟಿ : ಸಂಸದ ಗೋವಿಂದ ಕಾರಜೋಳ

01:21 PM Aug 23, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 23 :  ತುಮಕೂರು - ರಾಯದುರ್ಗ ನೂತನ ರೈಲುಮಾರ್ಗ ಈ ಭಾಗದ ಅತ್ಯಂತ ಮಹತ್ವದ ಯೋಜನೆಯಾಗಿದೆ. ಈ ಯೋಜನೆಯ ಭಾಗವಾಗಿ ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಪಾವಗಡದಿಂದ ಮಡಕಶಿರಾ ನಡುವಿನ 22 ಕಿ.ಮೀ ಉದ್ದದ ಹೊಸ ಬ್ರಾಡ್‍ಗೇಜ್ ರೈಲುಮಾರ್ಗ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ ರೂ.265.92 ಕೋಟಿ ಅನುದಾನ ಒದಗಿಸುವ ಮೂಲಕ ತುಮಕೂರು-ರಾಯದುರ್ಗ ಹೊಸ ಬ್ರಾಡ್‍ಗೇಜ್ ರೈಲು ಮಾರ್ಗಕ್ಕೆ ವೇಗ ನೀಡಿದೆ.

Advertisement

ಈಗಾಗಲೇ ಈ ಬಗ್ಗೆ ನೈರುತ್ಯ ರೈಲ್ವೆ ವಲಯದಿಂದ ಟೆಂಡರ್ ಕರೆಯಲಾಗಿದೆ,   ದಿನಾಂಕ: 11.09.2024 ರಂದು ಈ ಕಾಮಗಾರಿಯ ಬಿಡ್ ತೆರೆಯಲಿದ್ದು, ಕಾಮಗಾರಿ ನಿರ್ವಹಿಸುವ ಏಜೆನ್ಸಿ ಅಂತಿಮಗೊಳ್ಳಲಿದೆ. ಒಟ್ಟಾರೆಯಾಗಿ ಈ ಯೋಜನೆಯನ್ನು 18 ತಿಂಗಳಲ್ಲಿ ಪೂರ್ಣಗೊಳಿಸುವ ಗುರಿಯನ್ನು ರೈಲ್ವೆ ಇಲಾಖೆ ಹೊಂದಿದೆ.

ಈ ಯೋಜನೆಯಡಿ ಪಾವಗಡ ಮತ್ತು ಮಡಕಶಿರಾ ನಗರಗಳಲ್ಲಿ 510 ಚದುರ ಮೀಟರ್ ವಿಸ್ತೀರ್ಣದ ಸುಸಜ್ಜಿತ ರೈಲ್ವೆ ನಿಲ್ದಾಣಗಳು ನಿರ್ಮಾಣವಾಗಲಿವೆ, ಹಾಗೂ ಈ ಮಾರ್ಗದಲ್ಲಿ ತಡೆರಹಿತ ರೈಲು ಸಂಚಾರಕ್ಕೆ 3 ಪ್ರಮುಖ ಸೇತುವೆಗಳು, 32 ಸಣ್ಣ ಸೇತುವೆಗಳು, 21 RUB (Riad under bridge) ಗಳು  ಹಾಗೂ 4 ROB (Road over bridge) ಗಳು ನಿರ್ಮಾಣವಾಗಲಿವೆ.

Advertisement

ಒಟ್ಟಾರೆಯಾಗಿ ಯಾವುದೇ ಅಡೆತಡೆಯಿಲ್ಲದೇ ರೈಲುಗಳು ಪ್ರತಿಗಂಟೆಗೆ 110 ಕಿ.ಮೀ ವೇಗದಲ್ಲಿ ಚಲಿಸಲು ಯಾವ ಅಗತ್ಯ ಮೂಲಸೌಕರ್ಯಗಳು ಬೇಕೋ ಆ ಎಲ್ಲವನ್ನೂ ಈ ಯೋಜನೆ ಒಳಗೊಂಡಿದೆ. ತುಮಕೂರು-ರಾಯದುರ್ಗ ನೂತನ ರೈಲು ಮಾರ್ಗ ಪೂರ್ಣಗೊಂಡರೆ ಈ ಭಾಗದಲ್ಲಿ ಆರ್ಥಿಕ ಚಟುವಟಿಕೆಗಳು ಗರಿಗೆದರಲಿವೆ.

Advertisement
Tags :
bengaluruchitradurgaGovind KarjolaMP Govinda Karajolanew railway linePavagada-MadakashiraRs.265.00 croresuddionesuddione newsಗೋವಿಂದ ಕಾರಜೋಳುಚಿತ್ರದುರ್ಗಪಾವಗಡ - ಮಡಕಶಿರಾಬೆಂಗಳೂರುರೂ.265.00 ಕೋಟಿಸಂಸದ ಗೋವಿಂದ ಕಾರಜೋಳಸುದ್ದಿಒನ್ಸುದ್ದಿಒನ್ ನ್ಯೂಸ್ಹೊಸ ರೈಲು ಮಾರ್ಗ
Advertisement
Next Article