Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಜವಗೊಂಡನಹಳ್ಳಿ ಚೆಕ್‌ ಪೋಸ್ಟ್ ನಲ್ಲಿ ರೂ.1.44 ಕೋಟಿ ಜಪ್ತಿ : ದಾಖಲೆಗಳ ಪರಿಶೀಲನೆ

06:06 PM Mar 23, 2024 IST | suddionenews
Advertisement

 

Advertisement

ಚಿತ್ರದುರ್ಗ, ಮಾರ್ಚ್. 23 :  ಹಿರಿಯೂರು ತಾಲ್ಲೂಕಿನ ಜೆ.ಜೆ.ಹಳ್ಳಿ (ಜವನಗೊಂಡನಹಳ್ಳಿ) ಗಡಿ ಬಳಿ ಪರಿಶೀಲನೆ ನಡೆಸುವ ವೇಳೆ ಅನಧಿಕೃತವಾಗಿ ರೂ.1.44 ಕೋಟಿ ಸಾಗಟ ಮಾಡುತ್ತಿದ್ದ ಸಿಎಂಎಸ್ ಕಂಪನಿಯ ವಾಹನ ದೊರಕಿದೆ. ಹಿರಿಯೂರು ತಹಶೀಲ್ದಾರ್ ರಾಜೇಶ್, ಹಿರಿಯೂರು ಸರ್ಕಲ್ ಇನ್ಸ್ಪೆಕ್ಟರ್ ಹಾಗೂ ಸಂಚಾರಿ ಜಾರಿ ದಳದ ಅಧಿಕಾರಿಗಳು ಹಣ ಜಪ್ತಿಮಾಡಿ ವಾಹನ ವಶಕ್ಕೆ ಪಡೆದಿದ್ದಾರೆ. ವಿಚಾರಣೆ ಪ್ರಗತಿಯಲ್ಲಿದೆ.

ಎಟಿಎಂ‌ಗಳ ಹಣ ನಿರ್ವಹಣೆ ಮಾಡವ ಸಿಎಂಎಸ್ ಕಂಪನಿಯ ತುಮಕೂರಿನಿಂದ ಶಿರಾ ತಾಲ್ಲೂಕಿನವರೆಗೆ ಮಾತ್ರ ಎಟಿಎಂಗಳಿಗೆ ಹಣ ತುಂಬಲು ಅನುಮತಿ ಪಡೆದಿತ್ತು. ಆದರೆ ಶಿರಾ ತಾಲ್ಲೂಕು ಹೊರತು ಪಡಿಸಿ ಹಿರಿಯೂರು ತಾಲ್ಲೂಕು ಗಡಿ ಪ್ರವೇಶಿಸಿದೆ.  ಈ ಕುರಿತು ವಿಚಾರಿಸಿದಾಗ  ಹಿರಿಯೂರು ಗಡಿ ಪ್ರವೇಶಿಸಿದ್ದಕ್ಕೆ ಯಾವುದೇ ಸೂಕ್ತ ದಾಖಲೆ ಪ್ರಸ್ತುತ ಪಡಿಸಿರುವುದಿಲ್ಲ. ಲೋಕಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಹಿನ್ನಲೆಯಲ್ಲಿ  ಚಿತ್ರದುರ್ಗ ಜಿಲ್ಲೆಯ ಎಟಿಎಂಗಳಿಗೆ ಹಣ ತುಂಬಲು ಚಿತ್ರದುರ್ಗ ಜಿಲ್ಲಾಧಿಕಾರಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಆದ್ದರಿಂದ ರೂ.1.44 ಕೋಟಿ ಹಣ ಹಾಗೂ ವಾಹನ ಜಪ್ತಿ ಮಾಡಿ ವಶಪಡಿಸಿಕೊಂಡಿದ್ದಾಗಿ ತಹಶೀಲ್ದಾರ್ ರಾಜೇಶ್ ತಿಳಿಸಿದ್ದಾರೆ.

Advertisement

ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ವಶ ಪಡಿಸಿಕೊಂಡ ಹಣವನ್ನು ಸೂಕ್ತ ವಿಚಾರಣೆಯ ಬಳಿಕೆ ಜಿ.ಪಂ.ಸಿಇಓ ನೇತೃತ್ವದಲ್ಲಿ ನಗದು ಜಪ್ತಿ ಸಮಿತಿ ವಶಕ್ಕೆ ನೀಡಲಾಗುವುದು.

Advertisement
Tags :
bengalurucheck postchitradurgacroreJ.J.Halliseizedsuddionesuddione newsಕೋಟಿಚಿತ್ರದುರ್ಗಚೆಕ್ ಪೋಸ್ಟ್ಜಪ್ತಿಜವಗೊಂಡನಹಳ್ಳಿದಾಖಲೆಗಳ ಪರಿಶೀಲನೆಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article