Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

120 ವರ್ಷಗಳ ಇತಿಹಾಸ ಇರುವ ರೋಟರಿ ಸಂಸ್ಥೆಯ ಮೂಲ ಉದ್ದೇಶ ಸೇವೆ : ರೊ.ಪಿ.ಹೆಚ್.ಎಫ್. ಎಂ.ಕೆ.ರವೀಂದ್ರ

06:33 PM Jul 03, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಜುಲೈ.03 : : ಕೇವಲ ನಾಲ್ಕು ಸದಸ್ಯರಿಂದ 1905 ರಲ್ಲಿ ಆರಂಭಗೊಂಡ ರೋಟರಿ ಸಂಸ್ಥೆ 119 ವರ್ಷಗಳನ್ನು ಪೂರೈಸಿ 120 ನೇ ವರ್ಷಕ್ಕೆ ಕಾಲಿಡುತ್ತಿದೆ ಎಂದು ಪದಗ್ರಹಣ ಅಧಿಕಾರಿ 2025-26 ನೇ ಸಾಲಿನ ಡಿಸ್ಟ್ರಿಕ್ಟ್ ಗೌರ್ವನರ್ ರೊ.ಪಿ.ಹೆಚ್.ಎಫ್. ಎಂ.ಕೆ.ರವೀಂದ್ರ ಹೇಳಿದರು.

Advertisement

ರೋಟರಿ ಕ್ಲಬ್ ಮತ್ತು ಇನ್ನರ್‍ವೀಲ್ಹ್ ಕ್ಲಬ್ ವತಿಯಿಂದ ಪಟ್ಟಣದಲ್ಲಿ ನಿನ್ನೆ ನಡೆದ ಹೊಸ ತಂಡದ ಪದಗ್ರಹಣ ಉದ್ಘಾಟಿಸಿ ಮಾತನಾಡಿದರು.‌ ಸೇವೆಯನ್ನೆ ಮೂಲ ಉದ್ದೇಶವನ್ನಾಗಿಸಿಕೊಂಡಿರುವ ರೋಟರಿ ಸಂಸ್ಥೆ 200 ಕ್ಕೂ ಹೆಚ್ಚು ದೇಶಗಳಲ್ಲಿದ್ದು, ಹದಿನಾಲ್ಕು ಲಕ್ಷ ಸದಸ್ಯರುಗಳನ್ನೊಳಗೊಂಡಿದೆ ಎಂದು ತಿಳಿಸಿದರು.

ನೂತನ ತಂಡದವರು 52 ವಾರಗಳ ಸಭೆ ನಡೆಸಿ ಬೋರ್ಡ್ ಆಫ್ ಡೈರೆಕ್ಟರ್ಸ್‍ಗಳ ಸಭೆಯಲ್ಲಿ ಮುಂದಿನ ಕಾರ್ಯಕ್ರಮಗಳ ಕುರಿತು ಚರ್ಚಿಸಬೇಕು. ಸದಸ್ಯತ್ವ ತುಂಬಾ ಮುಖ್ಯ. ಸದಸ್ಯರುಗಳು ಹೆಚ್ಚು ಬಂದಾಗ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ಸಿಗುತ್ತದೆ. ಸಂಸ್ಥೆಯ ಕಡೆ ಸಾರ್ವಜನಿಕರು ಗಮನಿಸುತ್ತಿರುತ್ತಾರೆ. ಸಣ್ಣ ತಪ್ಪು ಆಗದಂತೆ ಎಚ್ಚರ ವಹಿಸಬೇಕು. ಕ್ಲಬ್‍ನಲ್ಲಿ ಐದು ಪಿಲ್ಲರ್‍ಗಳಿವೆ. ಅವುಗಳನ್ನು ಕಾಪಾಡಿಕೊಂಡು ಹೋಗುವುದು ಮುಖ್ಯ ಎಂದು ತಿಳಿಸಿದರು.

ರೋಟರಿ ಕ್ಲಬ್ ಅಧ್ಯಕ್ಷ ರೊ. ಸಿ.ಪಿ.ಶ್ರೀಧರ್, ಕಾರ್ಯದರ್ಶಿ ರೊ.ಅಂಕಿತ ಡಿ.ಜೈನ್, ಶ್ರೀಮತಿ ವೀಣ ಸ್ವಾಮಿ, ಇನ್ನರ್‍ವೀಲ್ಹ್ ಕ್ಲಬ್ ಅಧ್ಯಕ್ಷೆ ಶ್ರೀಮತಿ ಮಂಗಳ ಶಂಕರಪ್ಪ, ಕಾರ್ಯದರ್ಶಿ ಶ್ರೀಮತಿ ಸುನಿತ ಪ್ರಕಾಶ್, ರೊ.ಹೆಚ್.ಪಿ.ಸುದರ್ಶನ್‍ಕುಮಾರ್, ಶ್ರೀಮತಿ ದಾಕ್ಷಾಯಿಣಿ, ಶ್ರೀಮತಿ ಜ್ಯೋತಿ ಗುರುದೇವ್, ರೊ.ಕೆ.ಕ್ಯಾತಪ್ಪ, ರೊ.ವೈ.ರಾಜಶೇಖರ್ ವೇದಿಕೆಯಲ್ಲಿದ್ದರು.

Advertisement
Tags :
120 years of history120 ವರ್ಷಗಳ ಇತಿಹಾಸbengaluruchitradurgamission ServiceRo.P.H.F. MK RavindraRotary organizationsuddionesuddione newsಚಿತ್ರದುರ್ಗಬೆಂಗಳೂರುರೊ.ಪಿ.ಹೆಚ್.ಎಫ್. ಎಂ.ಕೆ.ರವೀಂದ್ರರೋಟರಿ ಸಂಸ್ಥೆಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article