Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ರಸ್ತೆ ಸುರಕ್ಷತಾ ಸಪ್ತಾಹ |  ಜನಜಾಗೃತಿ ಎಲ್.ಇ.ಡಿ. ವಾಹನಕ್ಕೆ ಜಿಲ್ಲಾಧಿಕಾರಿ ವೆಂಕಟೇಶ್.ಟಿ ಚಾಲನೆ

01:12 PM Feb 13, 2024 IST | suddionenews
Advertisement

 

Advertisement

ಚಿತ್ರದುರ್ಗ. ಫೆ.13: ಅತಿಯಾದ ಪೆಟ್ರೋಲ್ ಇಂಧನಗಳ ಬಳಕೆಯಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಅದರಲ್ಲೂ ಶುದ್ದಗಾಳಿ ಗುಣಮಟ್ಟ ಕಡಿಮೆಯಾಗಿ ವಾಯುಮಾಲಿನ್ಯ ಹೆಚ್ಚುತ್ತಿದೆ. ಸಾಂಪ್ರದಾಯಕ ಇಂಧನಗಳ ಬದಲಿಗೆ ಎಲೆಕ್ಟ್ರಿಕಲ್ ವಾಹನ ಹಾಗೂ ಸಮೂಹ ಸಾರಿಗೆ ಬಳಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಾರಿಗೆ ಇಲಾಖೆ ವತಿಯಿಂದ ಪರಿಸರ ರಕ್ಷಣೆಯ ಧ್ಯೇಯದೊಂದಿಗೆ, ರಸ್ತೆ ಸುರಕ್ಷತಾ ಸಪ್ತಾಹ ಆಚರಿಸಲಾಗುತ್ತಿದೆ.

ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಅವರಣದಲ್ಲಿ ಜಿಲ್ಲಾಧಿಕಾರಿ ವೆಂಕಟೇಶ್.ಟಿ ಜನಜಾಗೃತಿ ಎಲ್.ಇ.ಡಿ ವಾಹನಕ್ಕೆ ಹಸಿರು ನಿಶಾನೆ ತೋರುವುದರ ಮೂಲಕ ಚಾಲನೆ ನೀಡಿದರು.

Advertisement

ಎಲ್.ಇ.ಡಿ ವಾಹನ ಜಿಲ್ಲೆಯಾಧ್ಯಂತ ಸಂಚರಿಸಿ, ಸಾರ್ವಜನಿಕರಲ್ಲಿ ಪರಿಸರ ರಕ್ಷಣೆ, ರಸ್ತೆ ಸುರಕ್ಷತಾ ಸೂಚನೆಗಳು, ಸಂಚಾರ ನಿಯಮಗಳ ಕುರಿತು ಜಾಗೃತಿ ಮೂಡಿಸಲಿದೆ. ಸಾರಿಗೆ ಇಲಾಖೆ ವತಿಯಿಂದ 6 ವಿವಿಧ ಬಗೆಯ ಕಿರುಚಿತ್ರಗಳನ್ನು ನಿರ್ಮಿಸಲಾಗಿದೆ.  ಜಾತ್ರೆ, ಸಂತೆ, ಪಟ್ಟಣ, ನಗರ ಸೇರಿದಂತೆ ಜನದಟ್ಟಣೆ ಹೆಚ್ಚಿರುವ ಸ್ಥಳಗಳಲ್ಲಿ ಎಲ್.ಇ.ಡಿ ಪರದೆಯ ಮೇಲೆ ಈ ಕಿರುಚಿತ್ರಗಳನ್ನು ಪ್ರದರ್ಶಿಸಲಾಗುವುದು.

ಜನಜಾಗೃತಿ ಎಲ್.ಇ.ಡಿ ವಾಹನಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೆಂದ್ರಕುಮಾರ್ ಮೀನಾ, ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ ಕಾಳೇಸಿಂಗ್, ಲೋಕೋಪಯೋಗಿ ಇಲಾಖೆ ರಾಜೇಶ್, ಸಾರಿಗೆ ಅಧಿಕಾರಿಗಳಾದ ಸಿ.ಡಿ.ಹೇಮಂತ್ ಕುಮಾರ್, ಪ್ರಸನ್ನ ಹಾಗೂ ಇತರೆ ಸಿಬ್ಬಂದಿ ಇದ್ದರು.

Advertisement
Tags :
chitradurgaCollector Venkatesh.TLedpublic awarenessRoad Safety Weeksuddionesuddione newsvehicleಎಲ್.ಇ.ಡಿ. ವಾಹನಚಾಲನೆಚಿತ್ರದುರ್ಗಜನಜಾಗೃತಿಜಿಲ್ಲಾಧಿಕಾರಿ ವೆಂಕಟೇಶ್.ಟಿರಸ್ತೆ ಸುರಕ್ಷತಾ ಸಪ್ತಾಹಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article