Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಕಳಾಹೀನವಾಗಿದ್ದ ನರಹರಿ ಸದ್ಗುರು ಸಂಘಕ್ಕೆ ಮತ್ತೆ ಮರು ಜೀವ : ರಾಜಾರಾಂ ಶಾಸ್ತ್ರಿಗಳು

05:42 PM Mar 23, 2024 IST | suddionenews
Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

Advertisement

 

ಸುದ್ದಿಒನ್, ಚಿತ್ರದುರ್ಗ, ಮಾರ್ಚ್.23  : ನಗರ ಮತ್ತು ಆಸುಪಾಸಿನ ಊರುಗಳ ಆಸ್ತಿಕ ಜನರ ಆಧ್ಯಾತ್ಮಿಕ ಹಸಿವನ್ನು ಹಿಂಗಿಸುತ್ತಿದ್ದ ನರಹರಿ ಸದ್ಗುರು ಸಂಘವು ಕಾಲಕ್ರಮೇಣ ನಿತ್ರಾಣಗೊಂಡು ಕಳಾಹೀನವಾಗಿದ್ದ ಸಂಘ ಈಗ ಮತ್ತೆ ಪುನಶ್ಚೇತನಗೊಂಡಿದೆ ಎಂದು ಚಳ್ಳಕೆರೆಯ ನರಹರಿ ಸದ್ಗುರು ಆಶ್ರಮದ ರಾಜಾರಾಂ ಶಾಸ್ತ್ರಿಗಳು ಹೇಳಿದರು.

Advertisement

ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರ ನರಹರಿ ಸದ್ಗುರು ಸಂಘ ಉದ್ಗಾಟಿಸಿ ಆಶೀರ್ವಚನ ನೀಡಿದರು.
ಕಳಾಹೀನವಾಗಿದ್ದ ನರಹರಿ ಸದ್ಗುರು ಸಂಘಕ್ಕೆ ಮುತ್ಯಾಲ ಪ್ರಾಣೇಶ್ ಮರು ಜೀವ ನೀಡಿದ್ದಾರೆ. ಕೇವಲ ಬ್ರಹ್ಮಚರ್ಯ ಪಾಲಿಸುವವರು ಮಾತ್ರ ಸನ್ಯಾಸಿಗಳಲ್ಲ. ಫಲಾಪೇಕ್ಷೆಯಿಲ್ಲದೆ ಸತ್ಕರ್ಮದಲ್ಲಿ ತೊಡಗುವ ಗೃಹಸ್ಥರೂ ನಿಜವಾದ ಅರ್ಥದಲ್ಲಿ ಸನ್ಯಾಸಿಗಳೆ ಎಂದು ಹೇಳಿದರು.

ವಿ.ಜಿ.ಶೆಟ್ಟರು, ಮುತ್ಯಾಲ ಹನುಮಂತ ಶೆಟ್ಟರು, ಲಿಂಗಂ ಪದ್ಮನಾಭ ಶೆಟ್ಟರು, ಶಾಶಿ ನರಹರಿ ಶೆಟ್ಟರು, ಇನ್ನು ಅನೇಕರು ಸಮರ್ಪಕವಾಗಿ ಸಂಘವನ್ನು ಮುನ್ನಡೆಸುತ್ತಿದ್ದ ಹಳೆಯ ದಿನಗಳನ್ನು ಸ್ಮರಿಸಿ ಅಂತಹ ಸುವರ್ಣ ಕಾಲ ಮತ್ತೆ ನೂತನ ಸಂಘಕ್ಕೆ ಮರುಕಳಿಸಲಿ ಎಂದು ಶುಭ ಹಾರೈಸಿದರು.

ಆರ್ಯವೈಶ್ಯ ಸಂಘದ ಅಧ್ಯಕ್ಷ ಎಲ್.ಇ. ಶ್ರೀನಿವಾಸ್‍ಬಾಬು ಮಾತನಾಡಿ ನೂತನ ಸಂಘಕ್ಕೆ ಸಾಧ್ಯವಾದ ಎಲ್ಲಾ ರೀತಿಯ ನೆರವು ನೀಡುವುದಾಗಿ ಭರವಸೆ ಕೊಟ್ಟು ಧರ್ಮ ಮಾರ್ಗದಲ್ಲಿ ಸಾಗಲು ಆಸಕ್ತರಿಗೆ ಚೈತನ್ಯ ದೊರಕಲಿ ಎಂದು ಹಾರೈಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ನೂತನ ಅಧ್ಯಕ್ಷ ಕನ್ಯಕಾ ಪರಮೇಶ್ವರಿ ಸಹಕಾರಿ ಅಧ್ಯಕ್ಷ ಮುತ್ಯಾಲ ಪ್ರಾಣೇಶ್ ಮಾತನಾಡಿ ಸಮಾಜದಲ್ಲಿ ನೈತಿಕ ಮೌಲ್ಯಗಳು ಕುಸಿಯುತ್ತಿರುವ ಇಂದಿನ ಸಂದರ್ಭದಲ್ಲಿ ಸದ್ಗುರುಗಳ ಮಾರ್ಗದರ್ಶನ ಅತ್ಯವಶ್ಯಕ. ನರಹರಿ ಸದ್ಗುರು ಸಂಘವನ್ನು ಮುನ್ನಡೆಸಿಕೊಂಡು ಹೋಗಲು ಸಾರ್ವಜನಿಕರ ಸಹಕಾರ ಬೇಕು ಎಂದು ಕೋರಿದರು.
ಕೆ.ವಿ.ಮಂಜುಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಂಘದ ನೂತನ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು. ಸತ್ಯಪ್ರಭಾ ವಸಂತಕುಮಾರ್ ಪ್ರಾರ್ಥಿಸಿದರು. ಎಂ.ಎಚ್.ಮಂಜುನಾಥ್ ಸ್ವಾಗತಿಸಿದರು. ಜ್ಯೋತಿ ಲಕ್ಷ್ಮಣ್ ಮತ್ತು ಶೈಲಜಾ ನಿರೂಪಿಸಿದರು. ಎಲ್.ಆರ್.ರವಿಕುಮಾರ್ ವಂದಿಸಿದರು.
ಸಮಾರಂಭದ ನಂತರ ಪ್ರತಿ ಶುಕ್ರವಾರದಂತೆ ಕುಂಕುಮಾರ್ಚನೆ, ಪ್ರಾಕಾರೋತ್ಸವ, ಅಷ್ಠಾವಧಾನ, ಚಾಮರ ಸೇವೆ, ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ ಮತ್ತು ಧಾರ್ಮಿಕ ವಿಧಿ ವಿಧಾನಗಳು ನಡೆದವು.

Advertisement
Tags :
bengaluruchitradurgaNarahari Sadguru SanghRajaram Shastrisuddionesuddione newsಕಳಾಹೀನಚಿತ್ರದುರ್ಗನರಹರಿ ಸದ್ಗುರು ಸಂಘಬೆಂಗಳೂರುಮರು ಜೀವರಾಜಾರಾಂ ಶಾಸ್ತ್ರಿಗಳುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article