Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ ಜಿಲ್ಲೆಯ 6 ಮತಗಟ್ಟೆಗಳ ಸ್ಥಳ ಹಾಗೂ 34 ಮತಗಟ್ಟೆಗಳ ಹೆಸರು ಪರಿಷ್ಕರಣೆ

07:31 PM Oct 16, 2024 IST | suddionenews
Advertisement

 

Advertisement

ಚಿತ್ರದುರ್ಗ. ಅ.16: ಜಿಲ್ಲೆಯ 6 ಮತಗಟ್ಟೆಗಳ ಸ್ಥಳ ಹಾಗೂ 34 ಮತಗಟ್ಟೆಗಳ ಹೆಸರು ಪರಿಷ್ಕರಣೆಗೆ ಭಾರತ ಚುನಾವಣಾ ಆಯೋಗ ಅನುಮೋದನೆ ನೀಡಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ವಿಶೇಷ ಸಂಕ್ಷಿಪ್ತ ಮತದಾರ ಪಟ್ಟಿ ಪರಿಷ್ಕೃರಣೆ ಕುರಿತು ª ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ನಡೆಸಿ ಅವರು ಮಾತನಾಡಿದರು.

Advertisement

ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2025 ಸಂಬಂಧ ಜಿಲ್ಲೆಯ ರ‍್ಯಾಷನಲೈಜೇಷನ್ ಆಫ್ ಪೊಲೀಂಗ್ ಸ್ಟೇಷನ್ ಪಟ್ಟಿ ಪ್ರಕಟಿಸಲಾಗಿದೆ. ಈ ಪಟ್ಟಿಯನ್ನು ಎಲ್ಲಾ ರಾಜಕೀಯ ಪಕ್ಷಗಳ ಏಜಂಟರುಗಳಿಗೆ ನೀಡಲಾಗುವುದು ಎಂದು ಅವರು ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು 1661 ಮತಗಟ್ಟೆಗಳು ಇದ್ದು, ಮೊಳಕಾಲ್ಮೂರು ಕ್ಷೇತ್ರದಲ್ಲಿ 285, ಚಳ್ಳಕೆರೆ 260, ಚಿತ್ರದುರ್ಗ 288, ಹಿರಿಯೂರು 287, ಹೊಸದುರ್ಗ 242 ಹಾಗೂ ಹೊಳಲ್ಕೆರೆ 299 ಮತಗಟ್ಟೆಗಳು ಇವೆ. ಈ ಪೈಕಿ ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದಲ್ಲಿ ಮಾತ್ರ 6 ಮತಗಟ್ಟೆಗಳ ಸ್ಥಳ ಬದಲಾವಣೆ ಹಾಗೂ 34 ಮತಗಟ್ಟೆಗಳ ಹೆಸರುಗಳನ್ನು ಸರಿಪಡಿಸಿ ಪ್ರಕಟಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸಭೆಯಲ್ಲಿ ಮಾಹಿತಿ ನೀಡಿದರು.

ಕಾಂಗ್ರೆಸ್ ಪಕ್ಷದ ಡಿ.ಎನ್.ಮೈಲಾರಪ್ಪ, ಜೆಡಿಎಸ್ ಪಕ್ಷದ ಡಿ.ಗೋಪಾಲಸ್ವಾಮಿ ನಾಯಕ, ಸಿಪಿಐ ಪಕ್ಷದ ಗೌಸ್ ಪೀರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement
Tags :
bengaluruchitradurgachitradurga districtlocationpolling boothsrevisionsuddionesuddione newsಚಿತ್ರದುರ್ಗಚಿತ್ರದುರ್ಗ ಜಿಲ್ಲೆಪರಿಷ್ಕರಣೆಬೆಂಗಳೂರುಮತಗಟ್ಟೆಗಳುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article