Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ನಿವೃತ್ತ ಪ್ರಾಂಶುಪಾಲ ಪ್ರೊ. ಪಿ.ಶಿವಲಿಂಗಪ್ಪ ನಿಧನ

09:52 PM Feb 21, 2024 IST | suddionenews
Advertisement

 

Advertisement

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 21 : ಎಸ್.ಜೆ.ಎಂ ಕಲಾ ವಾಣಿಜ್ಯ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಪಿ. ಶಿವಲಿಂಗಪ್ಪನವರು (63) ಅನಾರೋಗ್ಯದಿಂದ ಬೆಂಗಳೂರಿನ ಯಶವಂತಪುರದ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಮೃತರಿಗೆ ಪತ್ನಿ ಹಾಗೂ ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.
ಇವರ ಅಂತ್ಯಕ್ರಿಯೆ ಕೋಟೆ ಮುಂಭಾಗದ ಬಳಿ ಇರುವ ಕೆಂಚಪ್ಪನ ಬಾವಿಯ ಹತ್ತಿರ ಮುಕ್ತಿಧಾಮದಲ್ಲಿ 22 ರಂದು ಗುರುವಾರ 4 ಗಂಟೆಗೆ ನಡೆಯಲಿದೆ ಎಂದು ಮೃತರ ಪುತ್ರ ಡಾ. ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ.

Advertisement

ಮೃತರು ಈ ಹಿಂದೆ ಚಂದ್ರವಳ್ಳಿಯ ಎಸ್.ಜೆ.ಎಂ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಹಾಗೂ ಪದವಿ ಕಾಲೇಜಿನಲ್ಲಿ ಸಮಾಜ ಶಾಸ್ತ್ರ ವಿಭಾದ ಮುಖ್ಯಸ್ಥರಾಗಿ ಮತ್ತು ಮುರುಘಾಮಠದಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸಿದ್ದರು. ಪಿ.ಶಿವಲಿಂಗಪ್ಪ ನಿಧನಕ್ಕೆ ಎಸ್.ಜೆ.ಎಂ. ಕಾಲೇಜಿನ ಸಿಬ್ಬಂದಿ ವರ್ಗದವರು ಸಂತಾಪ ಸೂಚಿಸಿದ್ದಾರೆ.

Advertisement
Tags :
bengaluruchitradurgapassed awayProf. P. ShivalingappaRetired Principalsuddionesuddione newsಚಿತ್ರದುರ್ಗನಿಧನನಿವೃತ್ತ ಪ್ರಾಂಶುಪಾಲಪ್ರೊ. ಪಿ.ಶಿವಲಿಂಗಪ್ಪಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article