For the best experience, open
https://m.suddione.com
on your mobile browser.
Advertisement

ಕೋಡಿ ಹರಿಸುವ ಹಠ ಬಿಟ್ಟು ಹಿನ್ನೀರಿನ ರೈತರ ಕಷ್ಟಕ್ಕೆ ಸ್ಪಂದಿಸಿ; ಶಾಸಕ ಬಿ.ಜಿ. ಗೋವಿಂದಪ್ಪ

09:11 AM Nov 02, 2024 IST | suddionenews
ಕೋಡಿ ಹರಿಸುವ ಹಠ ಬಿಟ್ಟು ಹಿನ್ನೀರಿನ ರೈತರ ಕಷ್ಟಕ್ಕೆ ಸ್ಪಂದಿಸಿ  ಶಾಸಕ ಬಿ ಜಿ  ಗೋವಿಂದಪ್ಪ
Advertisement

ಚಿತ್ರದುರ್ಗ: ವಾಣಿ ವಿಲಾಸ ಸಾಗರ ಜಲಾಶಯ ಭರ್ತಿಯಾಗಲು ಕೆಲ ಅಡಿಗಳಷ್ಟೇ ಬಾಕಿಯಿದ್ದು, ಇದೀಗ ಕೋಡಿ ವಿಚಾರ ಮುನ್ನಲೆಗೆ ಬಂದಿದೆ.

Advertisement

ಹೊಸದುರ್ಗದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿರುವ ಶಾಸಕ ಬಿ.ಜಿ. ಗೋವಿಂದಪ್ಪ, 'ಹಿರಿಯೂರು ರೈತರು ಮಾತ್ರ ಸುಖವಾಗಿದ್ದರೆ ಸಾಲದು, ಹಿನ್ನೀರಿನ ರೈತರ ಕಷ್ಟಗಳಿಗೂ ಸ್ಪಂದಿಸಬೇಕು. ಈ ಗುಣ ರೈತರು ಹಾಗೂ ರಾಜಕೀಯ ನೇತಾರರಿಗೂ ಇರಬೇಕು’ ಎಂದರು.

‘ವಿವಿ ಸಾಗರದಲ್ಲಿ ನೀರು 130 ಅಡಿಗಿಂತ ಹೆಚ್ಚು ಬಂದಾಗ ಹಲವು ಪ್ರದೇಶಗಳು ಮುಳುಗಡೆ ಯಾಗುತ್ತವೆ. ಬಾಗಿನ ಅರ್ಪಿಸುವುದಕ್ಕೆ ಜಲಾಶಯ ತುಂಬಿ‌ಸುವ ಬದಲು, ಜನರ ಉಪಯೋಗಕ್ಕೆ ತುಂಬಿಸುವ ಅಗತ್ಯವಿದೆ' ಎಂದು ತಿಳಿಸಿದರು.

Advertisement

‘2022ರಲ್ಲಿ ವಾಣಿ ವಿಲಾಸ ಸಾಗರ ಜಲಾಶಯ ಕೋಡಿ ಹರಿದಿದ್ದರಿಂದ ಹಿನ್ನೀರಿನ ಜನರು ಸಾಕಷ್ಟು ನಷ್ಟ ಅನುಭವಿಸಿದರು. ಪ್ರತಿ ವರ್ಷ ಕೋಡಿ ಹರಿಸಬೇಕು ಎಂಬ ಹಠಕ್ಕೆ ಬೀಳಬಾರದು. ತಾಲ್ಲೂಕಿನ ರೈತರ ಸಂಕಷ್ಟಗಳಿಗೆ ಸ್ಪಂದಿಸುವುದು ಎಲ್ಲರ ಕರ್ತವ್ಯ’ ಎಂದು ತಿಳಿಸಿದರು.

'ವಿವಿ ಸಾಗರದಲ್ಲಿ ದಿನೇ ದಿನೇ ನೀರಿನ ಪ್ರಮಾಣ ಹೆಚ್ಚುತ್ತಿದೆ. ಹಿನ್ನೀರಿನ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಂತ್ರಜ್ಞರು, ಅಧಿಕಾರಿಗಳ ಸಲಹೆ ಮೇರೆಗೆ ಕಾನೂನಾತ್ಮಕವಾಗಿ ರೈತರಿಗೆ ಶಾಶ್ವತ ಪರಿಹಾರ ನೀಡಲು ಎಲ್ಲರ ಸಹಕಾರ ಅಗತ್ಯ’ ಎಂದು ತಿಳಿಸಿದರು.

‘ ಮೈಸೂರು ಮಹಾರಾಜರು ತಾಲ್ಲೂಕಿನಲ್ಲಿ ವಿವಿ ಸಾಗರ ನಿರ್ಮಾಣ ಮಾಡಿದರು. ಅದಕ್ಕಾಗಿ 25,000 ಎಕರೆ ಭೂಮಿ ನೀಡಿದ ಹೊಸದುರ್ಗ ರೈತರದು ದೊಡ್ಡಗುಣ. ಆಗ ಕೆಲವು ಹಳ್ಳಿಗಳನ್ನು ಮಾತ್ರ ಸ್ಥಳಾಂತರಗೊಳಿಸಿ ಸೂಕ್ತ ಜಾಗ ನೀಡಲಾಗಿದೆ. ಇನ್ನೂ ಕೆಲವರು ಸಂಕಷ್ಟದಲ್ಲಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ಭೂಮಿ ನೀಡಬೇಕಾಗಿದೆ’ ಎಂದರು.

Tags :
Advertisement