For the best experience, open
https://m.suddione.com
on your mobile browser.
Advertisement

ಗುರುಗಳು ಮತ್ತು ಭಕ್ತರು ಸೌಹಾರ್ದತೆಯಿಂದ ಹೆಜ್ಜೆ ಹಾಕಿದರೆ ಮಾತ್ರ ಮೀಸಲಾತಿಯನ್ನು ಪಡೆಯಲು ಸಾಧ್ಯ : ಶಾಂತವೀರ ಮಹಾಸ್ವಾಮೀಜಿ

03:40 PM Oct 11, 2024 IST | suddionenews
ಗುರುಗಳು ಮತ್ತು ಭಕ್ತರು ಸೌಹಾರ್ದತೆಯಿಂದ ಹೆಜ್ಜೆ ಹಾಕಿದರೆ ಮಾತ್ರ ಮೀಸಲಾತಿಯನ್ನು ಪಡೆಯಲು ಸಾಧ್ಯ   ಶಾಂತವೀರ ಮಹಾಸ್ವಾಮೀಜಿ
Advertisement

ಸುದ್ದಿಒನ್, ತುಮಕೂರು, ಅಕ್ಟೋಬರ್. 11 : ಕುಂಚಿಟಿಗ ಸಮಾಜದ ಅಭಿವೃದ್ಧಿಗೆ ಸಂಘಟನೆಗೆ ಗುರುಗಳು ಮತ್ತು ಭಕ್ತರು ಪರಸ್ಪರ ಸೌಹಾರ್ದತೆಯಿಂದ ಹೆಜ್ಜೆ ಹಾಕಿದರೆ ಮಾತ್ರ ಕುಂಚಿಟಿಗ ಸಮಾಜ ಸಂಘಟನೆಯಾಗಿ ಸಾಮಾಜಿಕ ನ್ಯಾಯ ಮೀಸಲಾತಿಯನ್ನು ಪಡೆಯಲು ಸಾಧ್ಯ ಎಂದು ಹೊಸದುರ್ಗ ಜಗದ್ಗುರು ಶ್ರೀಕ್ಷೇತ್ರ ಕುಂಚಗಿರಿ ಸಂಸ್ಥಾನ ಮಠದ ಶಾಂತವೀರ ಮಹಾಸ್ವಾಮೀಜಿಯವರು ಹೇಳಿದರು.

Advertisement

ಅವರು ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಲಕ್ಷ್ಮೀದೇವಿಪುರ ಗ್ರಾಮದಲ್ಲಿ ನಡೆದ ಕಳಸ ಪ್ರತಿಷ್ಠಾಪನ ಮಹದ್ವಾರ ಉದ್ಘಾಟನಾ ಹಾಗೂ ಧಾರ್ಮಿಕ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಕುಂಚಿಟಿಗ ಸಮಾಜದ ಅನೇಕ ಸಮಸ್ಯೆಗಳು ಪರಿಹಾರವಾಗದೆ ಇರಲು ಗುರುಗಳು ಮತ್ತು ಭಕ್ತರ ಮಧ್ಯೆ ಇರುವ ಗುಂಪುಗಾರಿಕೆಯಿಂದ ಪ್ರತಿಷ್ಠೆಗಳಿಂದ, ಪೈಪೋಟಿಯಿಂದ, ಸಮಾಜ ನಲುಗುತ್ತಿದೆ. ಒಂದು ಬಣ ಚಾಡಿ ಹೇಳಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಮಠಾಧೀಶರನ್ನು ಬಳಸಿಕೊಂಡು ಕುಂಚಿಟಿಗ ಸಮಾಜದ ಸಂಘಟನೆಯ ಕೊರತೆ ಎದ್ದು ಕಾಣುತ್ತಿದೆ. ಕುಂಚಿಟಿಗರು ಒಗ್ಗಟ್ಟಾಗಲು ಭಕ್ತರು ಮತ್ತು ಸ್ವಾಮಿಗಳು ಪರಸ್ಪರ ರಾಗ, ದ್ವೇಷಗಳನ್ನು ಬಿಟ್ಟು ಸಮಾಜದ ಏಳಿಗೆಗೆ ಕಂಕಣ ತೊಡಲು ಇದು ಸರಿಯಾದ ಸಮಯ. ಸಣ್ಣಪುಟ್ಟ ಸಮುದಾಯಗಳು ಗೊಂದಲವಿಲ್ಲದೆ ಸಂಘಟನೆ ಆಗುತ್ತಿವೆ. ಇದನ್ನು ನೋಡಿಯೂ ಸಂಘಟನೆಯಾಗದಿದ್ದರೆ ಸ್ವಾಮಿಗಳಾದ ನಾವುಗಳು ಪ್ರತಿಷ್ಠೆ ಬಿಡದಿದ್ದರೆ ನಮ್ಮಲ್ಲಿರುವಂಥ ಬಡವರಿಗೆ ನಾವೇ ದ್ರೋಹ ಮಾಡಿದಂತೆ. ಇದನ್ನು ಕುಂಚಿಟಿಗ ಸಮಾಜದ ಸಂಘಟನೆಗಳು ಅರ್ಥೈಸಿಕೊಂಡು ಸ್ವಾಮಿಗಳನ್ನು ಪರಸ್ಪರ ಸೇರಿಸುವ ಮಹತ್ಕಾರ್ಯ ಮಾಡಬೇಕೆ ಹೊರತು ಸ್ವಾಮಿಗಳ ಮಧ್ಯೆ ಕಲಹ ತಂದಿಟ್ಟು ವಿಕೃತ ಸಂತೋಷ ಪಡಬೇಡಿ ಎಂದು ಹೇಳಿದರು.

Advertisement

ಸಮಾಜಕ್ಕೆ ತನ್ನದೇ ಆದ ಪರಂಪರೆ, ಬುಡಕಟ್ಟು, ಕುಲ, ಬೆಡಗುಗಳು ಇರುವ ಕಾರಣ ಸಮಾಜ ಜಾಗೃತರಾಗಬೇಕು ಶಿಕ್ಷಣವಂತರಾಗಬೇಕು. ಸಂಸ್ಕಾರವಂತರಾಗಬೇಕು. ಆಗ ಸಮಾಜದಲ್ಲಿ ಪೈಪೋಟಿ ನಡೆಸಲು ಸಾಧ್ಯ ಕುಂಚಿಟಿಗ ಸಮಾಜದ ಕುಲಶಾಸ್ತ್ರ ಅಧ್ಯಯನಕ್ಕೆ ನಮ್ಮ ಕೋರಿಕೆಯಂತೆ ಅಂದಿನ 2015 ರ ಸಿದ್ದರಾಮಯ್ಯನವರ ಸರ್ಕಾರದ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ಸಚಿವರಾದ ಎಚ್. ಆಂಜನೇಯನವರು ತಮ್ಮ ಹೊಳಲ್ಕೆರೆ ಕ್ಷೇತ್ರದಲ್ಲಿ ಅತಿ ಹೆಚ್ಚು ಕುಂಚಿಟಿಗರು ಇರುವುದರಿಂದ ಸಮುದಾಯದ ಸ್ಥಿತಿ ಮನಗಂಡು ಕುಲಶಾಸ್ತ್ರ ಅಧ್ಯಯನಕ್ಕೆ ಹಣ ಬಿಡುಗಡೆ ಮಾಡಿ ಕುಲಶಾಸ್ತ್ರವನ್ನು ನಡೆಸಿ ಈಗಾಗಲೇ ಸರ್ಕಾರದ ಕೈಯಲ್ಲಿದೆ. ಆ ಕುಲಶಾಸ್ತ್ರ ಅಧ್ಯಯನ ಯಥವತ್ ಜಾರಿಗೆ ಸಮಾಜದ ಸಂಘಟನೆಗಳು ಮಠಗಳು ಪ್ರಯತ್ನಿಸಬೇಕು ಇವತ್ತಿನ ಪರಿಸ್ಥಿತಿಯಲ್ಲಿ ಸಂಘಟನೆಯಾಗಿ ಸಮಾವೇಶಗಳನ್ನು ನಡೆಸಿ ಒತ್ತಡವನ್ನು ತರದೆ ಇದ್ದರೆ ಯಾರೂ ಕರೆದು ಮೀಸಲಾತಿಯನ್ನು ನೀಡುವುದಿಲ್ಲ.

ಇದನ್ನು ಅರ್ಥೈಸಿಕೊಂಡು ಸಮಾಜದ ಬಾಂಧವರು ಸಂಘಟಿತರಾಗಬೇಕು. ಸಮಾಜಕ್ಕೆ ಗುರುಗಳಿದ್ದು ಅವರನ್ನು ಬಳಸಿಕೊಂಡು ಸಾಮಾಜಿಕ ನ್ಯಾಯ ಪಡೆಯುವ ಹಿನ್ನೆಲೆಯಲ್ಲಿ ಜಾಗೃತರಾಗಬೇಕು. ಮೊದಲು ಕುಂಚಿಟಿಗ ಸಮುದಾಯದಲ್ಲಿ ಐದಾರು ಜನ ಶಾಸಕರು ಇಬ್ಬರು ಸಂಸದರು ಇರುತ್ತಿದ್ದರು. ಸಮಾಜದ ಸಂಘಟನೆ ಕೊರತೆಯಿಂದ ನಮ್ಮನ್ನು ಬೇರೆ ಸಮುದಾಯಗಳು ಬಳಸಿಕೊಳ್ಳುತ್ತಿರುವುದರಿಂದ ದೊಡ್ಡ ದೊಡ್ಡ ಸಮುದಾಯಗಳ ಬೆನ್ನತ್ತಿರುವ ಸಂಘಟನೆಗಳು ನಮ್ಮ ಸಮುದಾಯದ ಅಸ್ತಿತ್ವವನ್ನೇ ಬುಡಮೇಲು ಮಾಡುವ ಅಪಾಯವಿದೆ.

ಕುಂಚಿಟಿಗ ಸಮಾಜವು ತನ್ನದೇ ಆದ ಪರಂಪರೆ ಬಂದಿದ್ದು ಆ ಪಥದಲ್ಲಿ ಸಾಗಿ ನಾವುಗಳು ಸಮಾಜವನ್ನು ಸಂಘಟಿಸಬೇಕಿದೆ. ಪ್ರಾಂತ್ಯಭೇದವನ್ನು ಮರೆತು ಸಂಪ್ರದಾಯಗಳನ್ನು ಮರೆತು ಸಮುದಾಯವನ್ನು ಸಂಘಟಿಸಿ ಸಮುದಾಯದ ಬಡವರ ಬಗೆಗೆ ನಮ್ಮ ಕರುಣೆ ಬೀಳಬೇಕು. ನಮ್ಮ ಸಮುದಾಯಗಳನ್ನು ಬಳಸಿಕೊಂಡ ರಾಜಕೀಯ ನಾಯಕರು ನಮ್ಮ ಸಂಘಟನೆಗೆ ಸಹಕರಿಸದೆ ಇರುವುದು ಸಂಘಟನೆಯ ಲೋಪ. ಈ ಲೋಪವನ್ನು ಸರಿಪಡಿಸಿಕೊಂಡರೆ ಸರ್ಕಾರಗಳು ಜನಪ್ರತಿನಿಧಿಗಳು ಸಮುದಾಯ ಮದ ಮಾತನ್ನು ಕೇಳಲು ಸಾಧ್ಯ.

ಶ್ರೀ ನಂಜಾವಧೂತ ಸ್ವಾಮೀಜಿಯವರನ್ನು ಶ್ರೀ ಹನುಮಂತನಾಥ ಸ್ವಾಮೀಜಿ ಅವರನ್ನು ದೂರುವ ಬದಲು ಅವರೊಂದಿಗೆ ಕುರಿತು ಸಮಾಜದ ಸ್ಥಿತಿಗತಿಗಳನ್ನು ಭಿನ್ನಸಿಕೊಂಡು ಭಿನ್ನಾಭಿಪ್ರಾಯಗಳನ್ನು ಭಿನ್ನ ನಿಲುವುಗಳನ್ನು ಸರಿಪಡಿಸುವ ಹಿನ್ನೆಲೆಯಲ್ಲಿ ಕುಂಚಿಟಿಗ ಸಮಾಜದ ನಾಯಕರುಗಳು ರಾಜಕಾರಣಿಗಳು ಭಕ್ತರು ಶ್ರಮವಹಿಸಿ ಇಲ್ಲದಿದ್ದರೆ ಸಮಾಜ ಒಂದು ದಿಕ್ಕಿನಲ್ಲಿ ಹೋಗಲು ಸಾಧ್ಯವಿಲ್ಲ. ಆದರೆ ಒಬ್ಬರ ಮಧ್ಯೆ ಒಬ್ಬರಿಗೆ ಜಗಳ ತಂದಿಡುವ ಕೆಲಸವನ್ನು ಮಾಡಬೇಡಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಲಕ್ಷ್ಮಿ ದೇವಸ್ಥಾನದ ಟ್ರಸ್ಟಿನ ಪದಾಧಿಕಾರಿಗಳು ಭಕ್ತರು ಇದ್ದರು. ಶತಾಯುಷಿ ಲಕ್ಷ್ಮಮ್ಮನವರನ್ನು ಸ್ವಾಮೀಜಿಯವರಿಂದ ಸನ್ಮಾನಿಸಲಾಯಿತು. ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ 625 ಕ್ಕೆ 623 ಚರಿತ ವಿದ್ಯಾರ್ಥಿಯನ್ನು ಸ್ವಾಮಿಜಿಯವರಿಂದ ಸನ್ಮಾನಿಸಲಾಯಿತು.

Tags :
Advertisement