For the best experience, open
https://m.suddione.com
on your mobile browser.
Advertisement

ರೇಣುಕಾಸ್ವಾಮಿ ಕೊಲೆ : ಚಿತ್ರದುರ್ಗ ಅನಿಲ್ ಅರೆಸ್ಟ್..! ತಾಯಿಯ ಕಣ್ಣೀರು

04:10 PM Jun 14, 2024 IST | suddionenews
ರೇಣುಕಾಸ್ವಾಮಿ ಕೊಲೆ   ಚಿತ್ರದುರ್ಗ ಅನಿಲ್ ಅರೆಸ್ಟ್    ತಾಯಿಯ ಕಣ್ಣೀರು
Advertisement

ಚಿತ್ರದುರ್ಗ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನೇ ದಿನೇ ಶಾಕಿಂಗ್ ಡೆವಲಪ್ಮೆಂಟ್ ಆಗುತ್ತಿವೆ. ಈ ಕೇಸಲ್ಲಿ ಅಭಿಮಾನಿಗಳು ಕೀಡ ತಗಲಾಕಿಕೊಳ್ಳುತ್ತಿದ್ದಾರೆ. ಈಗಾಗಲೇ ಹದಿನಾಲ್ಕು ಜನ ಈ ಕೇಸಲ್ಲಿ ಅರೆಸ್ಟ್ ಆಗಿದ್ರು, ಈಗ ಚಿತ್ರದುರ್ಗ ಮೂಲದ ಅನು ಕೂಡ ಅರೆಸ್ಟ್ ಆಗಿದ್ದಾನೆ.

Advertisement

ಅನು ಅಲಿಯಾಸ್ ಅನಿಲ್ ಕುಮಾರ್. ಈತ ಮೂಲತಃ ಚಿತ್ರದುರ್ಗದವನು. ಸಿಹಿ ನೀರು ಹೊಂಡದ ರಸ್ತೆಯಲ್ಲಿಯೇ ಈತನ ಮನೆಯಿದೆ. ಜಯಮ್ಮ ಹಾಗೂ ಚಂದ್ರಪ್ಪ ಎಂಬ ದಂಪತಿಯ ಮಗ. ಮೊದಲು ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದ. ಮೂರು ವರ್ಷದಿಂದ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ. ತಾನಾಯ್ತು ತನ್ನ ಸಂಸಾರವಾಯ್ತು ಎಂಬ ಜವಾಬ್ದಾರಿಯುತ ಹುಡುಗನಾಗಿದ್ದ. ಆದರೆ ದರ್ಶನ್ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷನಾಗಿರುವ ರಾಘವೇಂದ್ರ ಮಾತು ಕೇಳಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

Advertisement

ಮನೆಗೆ ಇದ್ದ ಮಗ ಜೈಲು ಸೇರಿರುವುದಕ್ಕೆ ಅನು ಮನೆಯವರು ಕಣ್ಣೀರು ಹಾಕುತ್ತಾ ಕುಳಿತಿದ್ದಾರೆ. ಅದನ್ನು ಬಿಟ್ಟರೆ ಬೇರೆ ದಾರಿ ಕಾಣಿಸುತ್ತಿಲ್ಲ. ನನ್ನ ಮಗನಿಗೆ ಏನು ಗೊತ್ತಿಲ್ಲ. ಬಡವರ ಮಕ್ಕಳಿಗೆ ಅನ್ಯಾಯ ಮಾಡಿದ್ದಾರೆ. ನಟ ದರ್ಶನ್ ಭೇಟಿ ಮಾಡಿಸುವ ನೆಪವೊಡ್ಡಿ ಇಲ್ಲಿಂದ ಕರೆದುಕೊಂಡು ಹೋಗಿದ್ದರು. ಅನು ಮನೆಯ ಆಧಾರಸ್ತಂಭವಾಗಿದ್ದ ಎಂದು ತಾಯಿ ಜಯಮ್ಮ ಕಣ್ಣೀರು ಹಾಕಿದ್ದಾರೆ.

Advertisement

ಇನ್ನು ತಾಯಿ ಜಯಮ್ಮ ಕೂಡ ಮನೆಯ ಕೆಲಸ ಮಾಡುತ್ತಾ ಬದುಕಿಗೆ ಸಹಾಯವಾಗಿ ನಿಂತಿದ್ದರು. ಈಗ ಮನೆಯಲ್ಲಿ ನಾಲ್ಕೈದು ದಿನಗಳಿಂದ ಆತಂಕ ಶುರುವಾಗಿದೆ. ದೊಡ್ಡವರೆಲ್ಲಾ ಹೇಗೋ ಬಚಾವ್ ಆಗಿ ಬಿಡುತ್ತಾರೆ. ಆಟೋ ಚಾಲನೆ ಮಾಡಿ ಅಂದಿನ ಜೀವನಕ್ಕೆ ಹಣ ಒದಗಿಸಿಕೊಳ್ಳುತ್ತಿದ್ದ ಅನಿಲ್ ಏನು ಮಾಡುವುದಕ್ಕೆ ಸಾಧ್ಯ ಎಂಬ ಭಯ ಅವರ ಪೋಷಕರದ್ದಾಗಿದೆ.

Advertisement

Advertisement
Tags :
Advertisement