ರೇಣುಕಾಸ್ವಾಮಿ ಕೊಲೆ ಕೇಸ್ : ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ : ಬಿಸಿ ಪಾಟೀಲ್
ಸುದ್ದಿಒನ್, ಚಿತ್ರದುರ್ಗ, ಜುಲೈ. 05 : ರೇಣುಕಾಸ್ವಾಮಿ ಕೊಲೆ ಆರೋಪದ ಮೇಲೆ ದರ್ಶನ್ ಅಂಡ್ ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಅತ್ತ ರೇಣುಕಾಸ್ವಾಮಿ ಮನೆಗೆ ರಾಜಕಾರಣಿಗಳು, ಸೆಲೆಬ್ರೆಟಿಗಳು, ಸೆಲೆಬ್ರೆಟಿಗಳ ಅಭಿಮಾನಿಗಳು ಸೇರಿದಂತೆ ಹಲವರು ಭೇಟಿ ನೀಡಿ ಸಾಂತ್ವನ ಹೇಳುತ್ತಿದ್ದಾರೆ. ಇಂದು ಮಾಜಿ ಸಚಿವ ಬಿ.ಸಿ.ಪಾಟೀಲ್ ಅವರು ಭೇಟಿ ನೀಡಿ, ಸಾಂತ್ವನ ಹೇಳಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದೇ ಆಗ್ರಹಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸನ್ನು ನಿಷ್ಪಕ್ಷಪಾತ ತನಿಖೆ ಮಾಡಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ, ಮೃತ ಪತ್ನಿಗೆ ಉದ್ಯೋಗ ಕೊಡಬೇಕು. ಈ ಪ್ರಕರಣದಲ್ಲಿ ಯಾರಾದ್ರೂ ಭಾಗಿ ಆದ್ರೂ ತಪ್ಪಿತಸ್ಥರು, ತಪ್ಪಿತಸ್ಥರೇ ಇಲ್ಲಿ ಕಾನೂನಿಗಿಂತ ದೊಡ್ಡವರು ಯಾರು ಇಲ್ಲ ಎಂದರು. ಮಾಡ್ರನ್ ಜಗತ್ತಲ್ಲಿ ಟೆಕ್ನಾಲಜಿ ಹೆಚ್ಚಾದ ಮೇಲೆ ಸೈಬರ್ ಕ್ರೈಮ್ ಜಾಸ್ತಿಯಾಗಿದೆ. ಮೃತ ರೇಣುಕಾ ಸ್ವಾಮಿ ಮೇಲೆ ಸಣ್ಣ ದೂರು ಕೊಟ್ಟಿದ್ರೆ ವಿಚಾರಣೆ ನಡೆಸಬಹುದಿತ್ತು. ಆದರೆ ಅದಕ್ಕೆ ಮರಣ ದಂಡನೆ ಕೊಡುವಂತ ಅಪರಾಧ ಅಲ್ಲ, ನಟ ದರ್ಶನ್ ಪೊಲೀಸರಿಗೆ ಕರೆ ಮಾಡಿ ಹೇಳಿದ್ರೆ ಮುಗಿದು ಹೋಗುತ್ತಿತ್ತು. ಅದರ ಬಗ್ಗೆ ತನಿಖೆ ಮಾಡಲಿ ಪೊಲೀಸರು ಇದ್ದಾರೆ. ನಾವು ಯಾವುದು ಸುಳ್ಳು ಯಾವುದು ನಿಜ ಅಂತ ಹೇಳೋಕೆ ಆಗಲ್ಲ, ದರ್ಶನ್ ಒಳ್ಳೆ ವ್ಯಕ್ತಿ, ಒಳ್ಳೆಯ ನಟ ಆಗಿದ್ದ. ಈಗ ಅವರ ಮೇಲೆ ಕೊಲೆ ಆರೋಪ ಬಂದಿದೆ. ಕೋರ್ಟ್ ನಲ್ಲಿ ಕೇಸ್ ಎದುರಿಸುತ್ತಿದ್ದಾರೆ ತನಿಖೆ ಆದ್ಮೇಲೆ ಗೊತ್ತಾಗುತ್ತೆ ಎಂದಿದ್ದಾರೆ.
ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅಂಡ್ ಗ್ಯಾಂಗ್ ಗೆ ಮತ್ತೆ ನ್ಯಾಯಾಂಗ ಬಂಧನವಾಗಿದೆ. ಹದಿನಾಲ್ಕು ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಇರಲಿದ್ದಾರೆ.