For the best experience, open
https://m.suddione.com
on your mobile browser.
Advertisement

ರೇಣುಕಾಸ್ವಾಮಿ ಕೊಲೆ ಕೇಸ್ : ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮಾಜಿ ಶಾಸಕ ತಿಪ್ಪಾರೆಡ್ಡಿಗೆ ಬೆದರಿಕೆ..!

04:57 PM Jun 13, 2024 IST | suddionenews
ರೇಣುಕಾಸ್ವಾಮಿ ಕೊಲೆ ಕೇಸ್   ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮಾಜಿ ಶಾಸಕ ತಿಪ್ಪಾರೆಡ್ಡಿಗೆ ಬೆದರಿಕೆ
Advertisement

Advertisement

ಸುದ್ದಿಒನ್, ಚಿತ್ರದುರ್ಗ, ಜೂ.13  : ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಖಂಡಿಸಿ ನಿನ್ನೆ (ಬುಧವಾರ) ಚಿತ್ರದುರ್ಗದಲ್ಲಿ ಪ್ರತಿಭಟನೆ ಮಾಡಲಾಗಿತ್ತು. ಕೊಲೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದರು. ಈ ಪ್ರತಿಭಟನೆಯಲ್ಲಿ ಮಾಜಿ ಶಾಸಕ ತಿಪ್ಪಾರೆಡ್ಡಿ ಅವರು ಕೂಡ ಭಾಗಿಯಾಗಿದ್ದರು. ಈ ಸಂಬಂಧ ತಿಪ್ಪಾರೆಡ್ಡಿ ಅವರು ಪ್ರತಿಭಟನೆ ಮಾಡಿದ್ದಕ್ಕೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

Advertisement

ಚಿತ್ರದುರ್ಗದಲ್ಲಿ ಬುಧವಾರ ನಟ ದರ್ಶನ್ ವಿರುದ್ಧ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು ಈ ಪ್ರತಿಭಟನೆಯಲ್ಲಿ ಮಾಜಿ ಶಾಸಕ ತಿಪ್ಪಾರೆಡ್ಡಿ ಭಾಗಿಯಾಗಿ ನಟ ದರ್ಶನ್ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಇದಕ್ಕೆ ಸಂಬಂಧಿಸಿದಂತೆ ಅನಾಮಿಕ ವ್ಯಕ್ತಿಯೊಬ್ಬರು ಮಾಜಿ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಅವರಿಗೆ ಕರೆ ಮಾಡಿ ನೀವು ದರ್ಶನ್ ವಿರುದ್ಧ ಏಕೆ ಪ್ರತಿಭಟಿಸುತ್ತಿದ್ದೀರಿ ದರ್ಶನ್ ಕೊಲೆ ಮಾಡಿರುವುದಕ್ಕೆ ನಿಮಗೆ ಏನಾದರೂ ಸಾಕ್ಷಿಗಳು ಇದಾವೆ. ಹೇಗೆ ಎಂದು ಪ್ರಶ್ನಿಸಿದ್ದಾರೆಂತೆ. ಇದಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿ ತಿಳಿದು ಬರಬೇಕಿದೆ. ಕೆರೆ ಮಾಡಿದ ವ್ಯಕ್ತಿ ಯಾರು, ಯಾಕೆ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂಬ ಸ್ಪಷ್ಟ ಮಾಹಿತಿ ಲಭ್ಯವಾಗಬೇಕಿದೆ.

Advertisement

ಚಿತ್ರದುರ್ಗದಿಂದ ರೇಣುಕಾ ಸ್ವಾಮಿ ಅವರನ್ನು ಕರೆದುಕೊಂಡು ಹೋಗಿ ಕೊಲೆ ಮಾಡಿರುವ ಆರೋಪಿಗಳಿಂದ ಸ್ಥಳ ಮಹಜರು ನಡೆಯಲಿದೆ. ನಾಲ್ವರು ಆರೋಪಿಗಳನ್ನ ಬೆಂಗಳೂರಿನಿಂದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಚಿತ್ರದುರ್ಗಕ್ಕೆ ಕರೆದುಕೊಂಡು ಬಂದು ಸ್ಪಾಟ್ ವೆರಿಫಿಕೇಷನ್ ಮಾಡಿಸಲಿದ್ದಾರೆ. ಎ3 ಆರೋಪಿಯ ಸಲಹೆ ಮೇರೆಗೆ ಕಿಡ್ನಾಪ್ ಮಾಡಿದ್ದ ರಾಘವೇಂದ್ರ, ಕಾರ್ತಿಕ್ , ನಂದಿಶ್, ಪವನ್‌ನಿಂದ ಕಾಮಾಕ್ಷಿ ಪಾಳ್ಯ ಪೊಲೀಸರು ಕಿಡ್ನಾಪ್ ಸ್ಥಳದಲ್ಲಿ ಮಹಜರು ಮಾಡಿಸಲಿದ್ದಾರೆ. ಈಗಾಗಲೇ ಕೊಲೆ ಮಾಡಿದ ಶೆಡ್ ನಲ್ಲಿ ಪರಿಶೀಲನೆ ನಡೆಸಲಾಗಿದೆ. ಅಲ್ಲಿಯೂ ಹಲವು ಸಾಕ್ಷ್ಯಗಳು ಸಿಕ್ಕಿವೆ. ಅಲ್ಲಿನ ಸಿಸಿಟಿವಿಯನ್ನು ವಶಕ್ಕೆ ಪಡೆಯಲಾಗಿದೆ.

Advertisement

Advertisement
Tags :
Advertisement