For the best experience, open
https://m.suddione.com
on your mobile browser.
Advertisement

ರೇಣುಕಾ ಸ್ವಾಮಿ ಕೊಲೆ ಪ್ರಕರಣ : ನಾವು ಕುಟುಂಬಕ್ಕೆ ಸಾಂತ್ವನ ಹೇಳಲು ಬಂದಿದ್ದೇವೆ : ಎನ್.ಎಂ.ಸುರೇಶ್

05:14 PM Jun 15, 2024 IST | suddionenews
ರೇಣುಕಾ ಸ್ವಾಮಿ ಕೊಲೆ ಪ್ರಕರಣ   ನಾವು ಕುಟುಂಬಕ್ಕೆ ಸಾಂತ್ವನ ಹೇಳಲು ಬಂದಿದ್ದೇವೆ   ಎನ್ ಎಂ ಸುರೇಶ್
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್,ಚಿತ್ರದುರ್ಗ ಜೂ. 15 :
ಯಾರು ತಪ್ಪು ಮಾಡಿದರು ಅದು ತಪ್ಪೇ ದೊಡ್ಡ ವ್ಯಕ್ತಿ, ಚಿಕ್ಕ ವ್ಯಕ್ತಿ ಎಂಬ ಪ್ರಶ್ನೆ ಇಲ್ಲ, ಕಾನೂನಿಗೆ ಯಾರು ದೊಡ್ಟವರಲ್ಲ, ನಾವು ಕುಟುಂಬಕ್ಕೆ ಸಾಂತ್ವನ ಹೇಳಲು ಬಂದಿದ್ದೇವೆ ಎಂದು ಫಿಲಂ ಚೇಂಬರ್ ಅಧ್ಯಕ್ಷ ಎನ್.ಎಂ.ಸುರೇಶ್ ಹೇಳಿದರು.

Advertisement

ಚಿತ್ರದುರ್ಗ ನಗರದ ರೇಣುಕಾಸ್ವಾಮಿ ಅವರ ಕುಟುಂಬಕ್ಕೆ  ಧೈರ್ಯ ತುಂಬಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಲನಚಿತ್ರ ಮಂಡಳಿಯಿಂದ ದರ್ಶನ್ ಅವರನ್ನು ಬ್ಯಾನ್ ಮಾಡುವುದು ನಮ್ಮ ಕೈಯಲ್ಲಿ ಇಲ್ಲ, ಆದರು ಕಲಾವಿದರ ಸಂಘದ ಜೊತೆ ಮಾತನಾಡಿ ತಿರ್ಮಾನ ಕೈಗೊಳ್ಳುತ್ತೇವೆ. ಚಿತ್ರರಂಗದಲ್ಲಿ ಕಾರ್ಮಿಕರು ಬಗ್ಗೆ ಚಿಂತನೆಯನ್ನು ಮಾಡಬೇಕಿದೆ. ಯಾವುದೇ ತಿರ್ಮಾನಕ್ಕೆ ಮುಂದಿನ ಎಲ್ಲಾ ಪರಿಣಾಮವನ್ನು ಯೋಚನೆ ಮಾಡುತ್ತೇವೆ. ಒಟ್ಟು ಐದು ಲಕ್ಷ ಪರಿಹಾರ ನೀಡುತ್ತೇವೆ. ಕುಟುಂಬಕ್ಕೆ ಯಾವುದಾದರೂ ಒಂದು ಶಾಶ್ವತ ಪರಿಹಾರ ಒದಗಿಸುತ್ತೇನೆ. ದರ್ಶನ್ ಅವರಿಂದ ಚಿತ್ರರಂಗದ ಚಲನಚಿತ್ರ ಮಂಡಳಿಯನ್ನು ದೂಷಣೆ ಮಾಡಬೇಡಿ.  ವಾಣಿಜ್ಯ ಮಂಡಳಿ ಎಲ್ಲಾ ಸಮಯದಲ್ಲಿ  ಕಷ್ಟದಲ್ಲಿ ಸ್ಪಂದಿಸುವ ಕೆಲಸ ಮಾಡಿದ್ದು  ಮುಂದಿನ ದಿನಗಳಲ್ಲಿ  ಉತ್ತಮ ಕೆಲಸಕ್ಕೆ ಚಲನಚಿತ್ರ ಮಂಡಳಿ ಬೆನ್ನೆಲುಬಾಗಿರುತ್ತದೆ ಎಂದು ತಿಳಿಸಿದರು.

Advertisement

ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಸಾರಾ ಗೋವಿಂದ್ ಮಾತನಾಡಿ ಈ ನಾಡು ಜಲ ನೆಲದ ರಕ್ಷಣೆಗಾಗಿ ಹೋರಟ ಮಾಡಿದ್ದು ನನಗೆ ಸಂತೋಷ ತಂದಿದೆ. ನಾವೆಲ್ಲರೂ ಬಂದಿರುವುದು ರೇಣುಕಾಸ್ವಾಮಿ ಕುಟುಂಬಕ್ಕೆ ಧೈರ್ಯ ತುಂಬಿ ನಿಮ್ಮ ಜೊತೆ ನಾವಿದ್ದೇವೆ ಎಂಬ ಸಂದೇಶಕ್ಕೆ ಬಂದಿದ್ದೇವೆ. ಯಾವುದೇ ಕಾರಣಕ್ಕೂ ನಾವು ರಾಜೀ ಸೂತ್ರಕ್ಕೆ ಬಂದಿದ್ದೇವೆ.

ಮನುಷ್ಯ ತಪ್ಪು ಮಾಡುವುದು ಸಹಜ ಆದರೆ ತಪ್ಪು ಈ ರೀತಿಯ ಘಟನೆ ನಡೆದಿರುವುದಕ್ಕೆ ನೇರವಾಗಿ ಚಿತ್ರರಂಗದ ಒಬ್ಬ ವ್ಯಕ್ತಿ ಮಾತ್ರ ಹೊಣೆಯಲ್ಲ, ಮುಂದಿನ ದಿನಗಳಲ್ಲಿ  ರೇಣುಕಾಸ್ವಾಮಿ ಕುಟುಂಬದ ಜೊತೆ ನಾವು ಇರುತ್ತೇವೆ ಎಂಬ ಅಭಯ ನೀಡಿದ್ದೇನೆ.  ರಾಜ್, ಅಂಬರೀಶ್, ವಿಷ್ಣು, ಶಂಕರ್ನಾಗ್, ಅನಂತ್ ನಾಗ್ ಅವರಂತಹ ಕಾಲ ಈಗ ಇಲ್ಲ. ನಮ್ಮ ನಾಯಕ ನಟರು ಏಕೆ ದಾರಿ ತಪ್ಪುತ್ತಿದ್ದಾರೆ ತಿಳಿಯುತ್ತಿಲ್ಲ.

ಕಾನೂನಿಗಿಂತ ಯಾರು ದೊಡ್ಡವರಲ್ಲ, ಸರ್ಕಾರ ಮತ್ತು ಪೋಲಿಸ್ ಇಲಾಖೆ ಉತ್ತಮವಾಗಿ ತನಿಖೆ ನಡೆಸುತ್ತಿದೆ. ಯಾರ ಮುಲಾಜಿಗೆ ಒಳಗಾಗುವುದು ಬೇಡ, ಯಾರೋ ಮಾಡಿದ ತಪ್ಪಿಗೆ ಎಲ್ಲಾರೂ ಹೊಣೆಯಾಗುವುದು ಸಾಧ್ಯವಿಲ್ಲ. ರೇಣುಕಾಸ್ವಾಮಿ ಅವರ ಹೆಂಡತಿ ಮತ್ತು ತಾಯಿ ಇಬ್ಬರನ್ನು ನೋಡಿ ಮನ ಕುಲುಕುತ್ತಿದೆ ಎಂದರು.

ನಿರ್ಮಾಪಕ ಸಂಘದ ಅಧ್ಯಕ್ಷ ಬಾಣಕರ್ ಮಾತನಾಡಿ ಶಾಮನೂರು ಶಿವಶಂಕರಪ್ಪ ಅವರ ಬಳಿ ಮಾತನಾಡಿದ್ದ ರೇಣುಕಾಸ್ವಾಮಿ ಅವರ ಕುಟುಂಬಕ್ಕೆ ಸರ್ಕಾರಿ ಕೆಲಸವನ್ನು ಸಹ ಕೊಡಿಸುವ ಭರವಸೆ ನೀಡಿದ್ದಾರೆ. ಈ ಪ್ರಕರಣಕ್ಕೆ ಚಿತ್ರರಂಗ ಕ್ಷಮೆ ಕೇಳುತ್ತದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ಎಸ್.ಎ.ಚಿನ್ನೇಗೌಡ, ಕೆ.ವಿ.ಚಂದ್ರಶೇಖರ್, ಜಿ.ವೆಂಕಟೇಶ್, ಬಾಮ ಗಿರೀಶ್, ರಾಮಕೃಷ್ಣ, ತುಶಾಲ್, ಸಿದ್ದರಾಜು, ಸುದರ್ಶನ್, ಕೆಂಪಣ್ಣ , ಜಯಸಿಂಹ ಮುಸರಿ, ಉಮೇಶ್ ಬಾಣಕರ್, ಕುಮಾರ್, ಬಿ.ಕಾಂತರಾಜ್ ಇದ್ದರು.

Tags :
Advertisement