For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ | ಎಸ್.ಆರ್.ಎಸ್ ಶಿಕ್ಷಣ ಮಹಾವಿದ್ಯಾಲಯಕ್ಕೆ ದಾಖಲೆ ಫಲಿತಾಂಶ

02:06 PM Jan 27, 2024 IST | suddionenews
ಚಿತ್ರದುರ್ಗ   ಎಸ್ ಆರ್ ಎಸ್ ಶಿಕ್ಷಣ ಮಹಾವಿದ್ಯಾಲಯಕ್ಕೆ ದಾಖಲೆ ಫಲಿತಾಂಶ
Advertisement

Advertisement

ಸುದ್ದಿಒನ್, ಚಿತ್ರದುರ್ಗ, ಜನವರಿ.27 : ದಾವಣಗೆರೆ ವಿಶ್ವವಿದ್ಯಾನಿಲಯದ 2022-23ನೇ ಶೈಕ್ಷಣಿಕ ಸಾಲಿನ ಬಿ.ಇಡಿ., ಕೋರ್ಸ್ ನ ದ್ವಿತೀಯ ಮತ್ತು ನಾಲ್ಕನೇ ಸೆಮಿಸ್ಟರ್ ಫಲಿತಾಂಶ ಪ್ರಕಟವಾಗಿದ್ದು ಚಿತ್ರದುರ್ಗ ನಗರದ ಎಸ್.ಆರ್.ಎಸ್.ಶಿಕ್ಷಣ ಮಹಾವಿದ್ಯಾಲಯಕ್ಕೆ ದ್ವಿತೀಯ ಸೆಮಿಸ್ಟರ್‍ನಲ್ಲಿ 100% ರಷ್ಟು ಮತ್ತು ನಾಲ್ಕನೇ ಸೆಮಿಸ್ಟರ್‍ನಲ್ಲಿ 100% ರಷ್ಟು ಫಲಿತಾಂಶ ಬಂದಿದೆ.

Advertisement

ದ್ವಿತೀಯ ಸೆಮಿಸ್ಟರ್‍ನಲ್ಲಿ ಒಟ್ಟು ಪರೀಕ್ಷೆಗೆ ಹಾಜರಾದ 97 ಪ್ರಶಿಕ್ಷಣಾರ್ಥಿಗಳಲ್ಲಿ 35 ಪ್ರಶಿಕ್ಷಣಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಹಾಗೂ 62 ಪ್ರಶಿಕ್ಷಣಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ನಾಲ್ಕನೇ ಸೆಮಿಸ್ಟರ್‍ನಲ್ಲಿ ಒಟ್ಟು ಪರೀಕ್ಷೆಗೆ ಹಾಜರಾದ 63 ಪ್ರಶಿಕ್ಷಣಾರ್ಥಿಗಳಲ್ಲಿ 63 ಪ್ರಶಿಕ್ಷಣಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ದ್ವಿತೀಯ ಸೆಮಿಸ್ಟರ್‍ನಲ್ಲಿ ಚೈತ್ರಾ ಇ (ಸಿ.ಬಿ ವಿಭಾಗ) 600/538 ಅಂಕಗಳೊಂದಿಗೆ ಪ್ರಥಮ ಸ್ಥಾನ (89.66%) ಮತ್ತು ಶಶಿಕಲಾ ಕೆ (ಕೆ ಹೆಚ್ ವಿಭಾಗ) 600/531 ಅಂಕಗಳೊಂದಿಗೆ ದ್ವಿತೀಯ ಸ್ಥಾನ(88.5%) ಮತ್ತು ಅನ್ನಪೂರ್ಣ ವಿ (ಕೆ ಹಚ್ ವಿಭಾಗ) 600/530 ಅಂಕಗಳೊಂದಿಗೆ ತೃತೀಯ ಸ್ಥಾನ (88.33%) ಪಡೆದಿರುತ್ತಾರೆ.

ನಾಲ್ಕನೇ ಸೆಮಿಸ್ಟರ್‍ನಲ್ಲಿ ಅಂಬಿಕಾ.ಆರ್ (ಪಿ.ಎಂ ವಿಭಾಗ) 600/559 ಅಂಕಗಳೊಂದಿಗೆ ಪ್ರಥಮ ಸ್ಥಾನ (93.16%) , ನಾಜೀಯಾ ತಸ್ನೀಮ್ (ಇ.ಸಿ.ವಿಭಾಗ) 600/559 ಅಂಕಗಳೊಂದಿಗೆ ಪ್ರಥಮ ಸ್ಥಾನ (93.16%), ಭವ್ಯಶ್ರೀ.ಎನ್.ಪಿ (ಸಿ.ಬಿ ವಿಭಾಗ) 600/550 ಅಂಕಗಳೊಂದಿಗೆ ದ್ವಿತೀಯ ಸ್ಥಾನ (91.8%), ಸ್ರುಷ್ಠಿ.ಎಸ್ (ಪಿ.ಎಂ.ವಿಭಾಗ) 600/542 ಅಂಕಗಳೊಂದಿಗೆ ತೃತೀಯ ಸ್ಥಾನ (90.5%) ಪಡೆದಿರುತ್ತಾರೆ.

ಉತ್ತಮ ಫಲಿತಾಂಶ ಪಡೆದು ಕಾಲೇಜಿಗೆ ಕೀರ್ತಿ ತಂದ  ವಿದ್ಯಾರ್ಥಿಗಳಿಗೆ ಎಸ್.ಆರ್.ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಬಿ.ಎ.ಲಿಂಗಾರೆಡ್ಡಿ, ಹಾಗೂ ಕಾರ್ಯದರ್ಶಿಗಳಾದ ಶ್ರೀಮತಿ ಸುಜಾತ ಲಿಂಗಾರೆಡ್ಡಿ ಹಾಗೂ ಪ್ರಾಚಾರ್ಯರಾದ ಡಾ.ರವಿ.ಟಿ.ಎಸ್. ಉಪಪ್ರಾಂಶುಪಾಲರಾದ ಡಾ.ಬಿ.ಹನುಮಂತಪ್ಪ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಹರ್ಷವ್ಯಕ್ತಪಡಿಸಿ ಅಭಿನಂದನೆಗಳನ್ನು ತಿಳಿಸಿದ್ದಾರೆ.

Tags :
Advertisement