Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಾಲುಕ್ಯರ ಕಾಲದ ಮೈಲಾರಲಿಂಗೇಶ್ವರ ದೇವಸ್ಥಾನ ಪುನರ್ನಿರ್ಮಾಣ : ಸೆಪ್ಟೆಂಬರ್ 1 ರಂದು ಸಮುದಾಯ ಭವನ ಉದ್ಘಾಟನೆ : ಎಂ.ನಿಶಾನಿ ಜಯಣ್ಣ

02:16 PM Aug 27, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 27 : ನಗರದ ಬುರುಜನಹಟ್ಟಿಯ ಉಪ್ಪುನೀರುಭಾವಿ ರಸ್ತೆಯಲ್ಲಿನ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನ ಜೀರ್ಣೋದ್ದಾರ ಅಭಿವೃದ್ದಿ ಸಮಿತಿವತಿಯಿಂದ ಇದೇ ಆಗಸ್ಟ್ 30 ರಿಂದ ಸೆಪ್ಟಂಬರ್ 1 ರವರೆಗೆ ಶ್ರೀ ಮೈಲಾರಲಿಂಗೇ ಶ್ವರಸ್ವಾಮಿ,ಗಂಗಾಮಾಳಮ್ಮ ದೇವಿಯ ದೇವಸ್ಥಾನ ಹಾಗೂ ಸಮುದಾಯ ಭವನದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನ ಜೀರ್ಣೋದ್ದಾರ ಅಭಿವೃದ್ದಿ ಸಮಿತಿಯ ಕಾರ್ಯದರ್ಶಿ  ಎಂ.ನಿಶಾನಿ ಜಯ್ಯಣ್ಣ ತಿಳಿಸಿದ್ದಾರೆ.

Advertisement

ನಗರದ ಪತ್ರಿಕಾ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿನ ಮೈಲಾರಲಿಂಗೇಶ್ವರ ದೇವಸ್ಥಾನ ಚಾಲುಕ್ಯರ ಕಾಲದ್ದಾಗಿದ್ದು, ನಮ್ಮ ಮನೆತನ ಇದಕ್ಕೆ ನಡೆದುಕೊಂಡು ಬರುತ್ತಿದೆ. ಶಿಥಿಲಗೊಂಡಿದ್ದ ದೇವಸ್ಥಾನವನ್ನು ಪುನರ್ ನಿರ್ಮಾಣ ಮಾಡಲಾಗಿದೆ. ಇದಲ್ಲದೆ ಸುತ್ತಮುತ್ತಲಿನ ವಾರ್ಡ್‍ಗಳ ಜನತೆಯ ಅನುಕೂಲಕ್ಕಾಗಿ ಸುಮಾರು 2 ಕೋಟಿ ರೂ ವೆಚ್ಚದಲ್ಲಿ ಸಮುದಾಯ ಭವನವನ್ನು ನಿರ್ಮಾಣ ಮಾಡಲಾಗಿದ್ದು, ಇದರ ಉದ್ಘಾಟನೆ ಸೆ.1 ರಂದು ನಡೆಯಲಿದೆ ಎಂದರು.

ಆ. 30ರ ಶುಕ್ರವಾರ ಸಂಜೆ 6.00 ರಿಂದ ಶ್ರೀ ಮಹಾ ಗಣಪತಿ ಪೂಜೆ, ಆಚಾರ್ಯಾದಿ ಋತ್ವಿಕ್ ವರುಣಂ, ಪ್ರಸಾದ ಶುದ್ಧಿ, ಸ್ಥಳ ಶುದ್ಧಿ, ರಾಕ್ಷೇಘ್ರ ಹೋಮ, ಸುದರ್ಶನ ಹೋಮ, ವಾಸ್ತುಶಾಂತಿ ಹೋಮ, ವಾಸ್ತು ಬಲಿ ಆ,31ರ ಶನಿವಾರಪೂಜೆ, ಪಂಚಗವ್ಯ ಮೇಳನ, ಬಿಂಬಶುದ್ಧಿ, ರಕ್ಷಾ ಬಂಧನ, ಅಧಿವಾಸ ಪೂಜೆ, ಕಲಶಾರಾಧನೆ, ಗ್ರಹಾರಾಧನೆ, ಶ್ರೀ ಮಹಾಗಣಪತಿ ಹೋಮ, ನವಗ್ರಹ ಹೋಮ, ಹಾಗೂ ಹಲವಾರು ಹೋಮ ನಡೆಯಲಿದ್ದು, ಸಂಜೆ 6.30 ರಿಂದ ಕಲಶಾರಾಧನೆ, ತತ್ವ ಕಲಾ ಪೂಜೆಗಳು, ಶಯ್ಯಾದಿವಾಸ, ನಿದ್ರಾಕಲಕ ಪೂಜೆ, ಪೀಠ ಪೂಜೆ, ರತ್ನನ್ಯಾಸ, ಅಷ್ಠಬಂದ ಸ್ಥಾಪನೆ ಕಾರ್ಯ ನಡೆಯಲಿದೆ.  ಸೆ . 01 ನೇ ಭಾನುವಾರ ಬೆಳಿಗ್ಗೆ 6.00 ರಿಂದ ಕಳಾನ್ಯಾಸ, ಪ್ರಾಣಪ್ರತಿಷ್ಠಾಪನೆ, ನೇತ್ರೋಲನ, ಶ್ರೀ ರುದ್ರಹೋಮ, ಕಲಶಾಭಿಷೇಕ ಬೆಳಿಗ್ಗೆ 7.15 ರವರೆಗೆ ಸಲ್ಲುವ ಶುಭ ಸಿಂಹ ಲಗ್ನದ ಶುಭ ಮುಹೂರ್ತದಲ್ಲಿ ಸಪರಿವಾರ ಸಹಿತವಾಗಿ ಶ್ರೀ ಗಂಗಮಾಳಮ್ಮ ಸಹಿತ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ಪ್ರತಿಷ್ಠಾಪನೆ. ನಂತರ ರುದ್ರಹೋಮ, ಕಲಶಾಭಿಷೇಕ, ಪುರ್ಣಾಹುತಿ, ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗವಿರುತ್ತದೆ.

 

ಸೆ. 1 ರಂದು ನಡೆಯುವ ಧಾರ್ಮಿಕ ಸಭೆಯ ಸಾನಿಧ್ಯವನ್ನು ಕಾಗೀನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಸ್ವಾಮಿಜಿ  ಹಾಗೂ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮಿಜಿ ವಹಿಸಲಿದ್ದಾರೆ. ಜಿಲ್ಲಾ ಸಾಂಸ್ಕೃತಿಕ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ, ಸಚಿವರು,  ಹಾಗೂ ಡಿ.ಸಿ.ಸಿ. ಬ್ಯಾಂಕ್, ಅಧ್ಯಕ್ಷರಾದ ಡಿ. ಸುಧಾಕರ್, ಲೋಕಸಭಾ ಸದಸ್ಯರು, ಹಾಗೂ ಮಾಜಿ ಉಪಮುಖ್ಯ ಮಂತ್ರಿಗಳಾದ ಗೋವಿಂದ ಎಂ. ಕಾರಜೋಳರವರು  ಶ್ರೀ ಮೈಲಾರಲಿಂಗೇಶ್ವರ ಸಮುದಾಯ ಭವನವನ್ನು ಉದ್ಘಾಟಿಸಲಿದ್ದಾರೆ. ದೇವಸ್ಥಾನದ ಸಂಸ್ಥಾಪಕರಾದ ದಿ|| ನಿಶಾನಿ ಲಕ್ಷ್ಮಮ್ಮ, ದಿ| ನಿಶಾನಿ ಮಲ್ಲಪ್ಪ ಜಿ.ಎನ್. ಅವರ ಭಾವಚಿತ್ರಗಳನ್ನು  ಅನಾವರಣವನ್ನು ಶಾಸಕರು, ಹಾಗೂ ಆಹಾರ ಅಭಿವೃದ್ಧಿ ನಾಗರೀಕ ಸರಬರಾಜು ನಿಗಮದ ಅದ್ಯಕ್ಷರಾದ ಬಿ.ಜಿ. ಗೋವಿಂದಪ್ಪ, ಶಾಸಕರು, ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ. ರಘುಮೂರ್ತಿ ನೇರವೇರಿಸಲಿದ್ದಾರೆ.

ಸಮಾರಂಭದ ಅಧ್ಯಕ್ಷತೆಯನ್ನು ಶಾಸಕರಾದ ಕೆ.ಸಿ.ವಿರೇಂದ್ರ ವಹಿಸಲಿದ್ದಾರೆ. ಆದಿಜಾಂಬವ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಬ್ರಾಹ್ಮಣ ಸಂಘ ಹಾಗೂ ಶ್ರೀ ಗಾಯಿತ್ರಿ ಕೋ.ಆಪರೇಟಿವ್ ಸೊಸೈಟಿ, ಅಧ್ಯಕ್ಷರಾದ  ಪಿ.ಎಸ್. ಮಂಜುನಾಥ್, ಕೆ.ಸಿ.ನಾಗರಾಜ್, ಹೆಚ್.ಮಹದೇವಪ್ಪ, ನಗರಸಭೆ ಸದಸ್ಯರಾದ ಮೀನಾಕ್ಷಿ, ಶಶಿಧರ್, ಶ್ರೀ ರಂಗನಾಥ ಜ್ಯೂಯಲರ್ಸ್‍ನ ಕೆ. ಕೃಷ್ಣಪ್ಪ  ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

 

ಪತ್ರಿಕಾಗೋಷ್ಠಿಯಲ್ಲಿ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನ ಜೀರ್ಣೋದ್ದಾರ ಅಭಿವೃದ್ದಿ ಸಮಿತಿವತಿಯ ಅಧ್ಯಕ್ಷರಾದ ಸುರೇಶ್ ಬಾಬು, ಗೌರವಾಧ್ಯಕ್ಷ ಕೃಷ್ಣಮೂರ್ತಿ, ಉಪಾಧ್ಯಕ್ಷ ವಿಜಯಕುಮಾರ್, ನಿರ್ದೆಶಕರಾದ ಶಿವಕುಮಾರ್, ನಾಗರಾಜ್ ಬೇದ್ರೆ, ನಿಂಗರಾಜ್ ಉಪಸ್ಥಿತರಿದ್ದರು.

Advertisement
Tags :
bengaluruChalukya erachitradurgaCommunity BhavaninaugurationM. Nishani JayannaMylaralingeshwar TempleReconstructionsuddionesuddione newsಎಂ.ನಿಶಾನಿ ಜಯಣ್ಣಚಾಲುಕ್ಯರ ಕಾಲಚಿತ್ರದುರ್ಗಪುನರ್ನಿರ್ಮಾಣಬೆಂಗಳೂರುಮೈಲಾರಲಿಂಗೇಶ್ವರ ದೇವಸ್ಥಾನಸಮುದಾಯ ಭವನ ಉದ್ಘಾಟನೆಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article