Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಮಂಡ್ಯದ ಕೆರೆಗೋಡಿನಲ್ಲಿ ಹನುಮದ್ವಜ ಪುನಃ ಸ್ಥಾಪಿಸಿ : ಚಿತ್ರದುರ್ಗದಲ್ಲಿ ವಿಶ್ವ ಹಿಂದು ಪರಿಷದ್ ಹಾಗೂ ಬಜರಂಗದಳ ಕಾರ್ಯಕರ್ತರ ಒತ್ತಾಯ

02:05 PM Feb 09, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.09 : ಮಂಡ್ಯ ಜಿಲ್ಲೆಯ ಕೆರಗೋಡಿನಲ್ಲಿ ಹನುಮ ಧ್ವಜವನ್ನು ತೆರವುಗೊಳಿಸಿರುವುದನ್ನು ವಿರೋಧಿಸಿ ವಿಶ್ವ ಹಿಂದು ಪರಿಷದ್ ಹಾಗೂ ಬಜರಂಗದಳ ಕಾರ್ಯಕರ್ತರು ಡಿಸಿಸಿ ಬ್ಯಾಂಕ್ ಎದುರುಗಡೆ ಇರುವ ಶ್ರೀರಾಮ ಮಂದಿರ

Advertisement

ಹನುಮಾನ್ ಚಾಲೀಸ್ ಪಠಣೆ ಮಾಡಿ ಹನುಮದ್ವಜ ಪುನಃ ಸ್ಥಾಪಿಸುವಂತೆ ಜಿಲ್ಲಾಧಿಕಾರಿಗೆ ಮನವಿಯನ್ನು ಸಲ್ಲಿಸಲಾಯಿತು.

ಶ್ರೀರಾಮ ಭಜನಾ ಮಂಡಳಿಯವರು ಕಳೆದ 40 ವರ್ಷಗಳಿಂದ ಕೆರೆಗೋಡು ಗ್ರಾಮದಲ್ಲಿ ಯಾವ ತೊಂದರೆಯನ್ನೂ ಮಾಡದೆ ಭಜನೆಯನ್ನು ಮಾಡುತ್ತಾ ಬಂದಿರುತ್ತಾರೆ. ಈ ಗ್ರಾಮದಲ್ಲಿ ಯಾವಾಗಲೂ ಹನುಮಧ್ವಜ ಹಾರಿಸುತ್ತಿದ್ದ ಧ್ವಜದ ಸ್ಥಂಭವು ಶಿಥಿಲಗೊಂಡ ಕಾರಣಕ್ಕೆ, ಶ್ರೀರಾಮ ಭಜನಾ ಮಂಡಳಿ ಮತ್ತಿತರ ಅರ್ಜಿಯ ಮೇರೆಗೆ ಕೆರೆಗೋಡು ಗ್ರಾಮ ಪಂಚಾಯಿತಿಯಲ್ಲಿ ಉತ್ತಮ ಧ್ವಜ ಸ್ಥಂಭವನ್ನು ಸ್ಥಾಪಿಸಿ ಅದರಲ್ಲಿ ಹನುಮಧ್ವಜವನ್ನು ಹಾರಿಸಲಾಗಿತ್ತು.

Advertisement

ಹೀಗೆ ಹಾರಿಸಿದ್ದ ಹನುಮ ಧ್ವಜವನ್ನು ಸ್ಥಳೀಯ ಸರ್ಕಾರೀ ಅಧಿಕಾರಿಗಳು ಇಳಿಸಿದ್ದು, ಎಲ್ಲರಿಗೂ ನೋವನ್ನುಂಟು ಮಾಡಿದೆ. ಹಾಗೂ ಸಮಸ್ತ ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಅವಮಾನ ಮಾಡಿದಂತಾಗಿದೆ. ಈ ಸ್ಥಳದಲ್ಲಿ ಎಂದಿನಂತೆ ಹನುಮಧ್ವಜವನ್ನು ಮತ್ತೆ ಹಾರಿಸಬೇಕೆಂದು ಬಹುಸಂಖ್ಯಾತ ಹಿಂದೂ ಸಮಾಜದ ಪರವಾಗಿ  ಆಗ್ರಹಿಸುತ್ತಿದ್ದೇವೆ.

ಕರ್ನಾಟಕದಲ್ಲೇ ಹುಟ್ಟಿದ, ವೀರತೆಯ ಸಂಕೇತವಾಗಿರುವ, ರಾಜ್ಯದ ಯುವ ಜನತೆಗೆ ಬುದ್ಧಿ, ಯಶಸ್ಸು, ಶಕ್ತಿ, ಶೌರ್ಯ, ಪರಾಕ್ರಮ, ಇತ್ಯಾದಿ ಸದ್ಗುಣಗಳಿಗೆ ಪ್ರೇರಣೆ ನೀಡುವ ವೀರಾಗ್ರೇಸರನಾದ ಹನುಮಂತನ ಶಕ್ತಿಯ ಸಂಕೇತವಾದ ಹನುಮಧ್ವಜವನ್ನು ಗೌರವಿಸುವುದು ನಮ್ಮೆಲ್ಲರ ಮತ್ತು ನಾವು ಚುನಾಯಿಸುವ ಸರ್ಕಾರದ ಕರ್ತವ್ಯವಾಗಿದ್ದು, ಅದು ಎಲ್ಲೇ ಹಾರಲಿ ಅದಕ್ಕೆ ಹಾನಿಯಾಗದಂತೆ ಸರಕಾರ ಸಂಬಂಧಿತ ಎಲ್ಲಾ ಇಲಾಖೆಗಳಿಗೆ ಆದೇಶ ನೀಡಬೇಕೆಂದು ವಿಶ್ವಹಿಂದೂ ಪರಿಷದ್ ಜಿಲ್ಲಾ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ  ಪ್ರಭಜಂನ್ ದಕ್ಷಿಣ ಪ್ರಾಂತ ಸಹ ಸಂಯೋಜಕರು ಬಜರಂಗದಳ, ಪಿ ರುದ್ರೇಶ್ ಜಿಲ್ಲಾ ಕಾರ್ಯದರ್ಶಿ ವಿಶ್ವ ಎಂದು ಪರಿಷದ್, ಕೇಶವ್ ಜಿಲ್ಲಾ ಸಹ ಕಾರ್ಯದರ್ಶಿ ವಿಶ್ವ ಹಿಂದೂ ಪರಿಷದ್, ಬಾಲಕೃಷ್ಣ ಜಿಲ್ಲಾ ಸಹ ಸಂಯೋಜಕರು ಬಜರಂಗದಳ, ರಂಗಸ್ವಾಮಿ ನಗರ ಸಹ ಕಾರ್ಯದರ್ಶಿ ವಿಶ್ವ ಹಿದೂ ಪರಿಷದ್, ಶಶಿಧರ್ ಗ್ರಾಮಾಂತರ ಅಧ್ಯಕ್ಷರು ವಿಶ್ವ ಹಿಂದೂ ಪರಿಷದ್, ಹಾಗೂ ಪ್ರಮುಖರಾದ ವಿಠಲ್, ತೇಜು ,ಪ್ರಮೋದ ,ರಾಜೇಶ್, ದಿನೇಶ್, ದೀಪಕ್ ರಾಜ್ ಇತರರು ಇದ್ದರು.

Advertisement
Tags :
Bajrang DalchitradurgademandmandyaRe-install HanumdwajaVishwa Hindu Parishadಕೆರೆಗೋಡುಚಿತ್ರದುರ್ಗಬಜರಂಗದಳ ಕಾರ್ಯಕರ್ತರ ಒತ್ತಾಯಮಂಡ್ಯವಿಶ್ವ ಹಿಂದು ಪರಿಷದ್ಹನುಮದ್ವಜ ಪುನಃ ಸ್ಥಾಪಿಸಿ
Advertisement
Next Article