For the best experience, open
https://m.suddione.com
on your mobile browser.
Advertisement

ಮಗನಿಗೆ ಟಿಕೆಟ್ ಸಿಗದೆ ಮುನಿಸಿಕೊಂಡಿದ್ದ ಶಾಸಕ ಚಂದ್ರಪ್ಪನ ಮನವೊಲಿಸುವಲ್ಲಿ ರವಿಕುಮಾರ್ ವಿಫಲ..!

11:48 AM Mar 31, 2024 IST | suddionenews
ಮಗನಿಗೆ ಟಿಕೆಟ್ ಸಿಗದೆ ಮುನಿಸಿಕೊಂಡಿದ್ದ ಶಾಸಕ ಚಂದ್ರಪ್ಪನ ಮನವೊಲಿಸುವಲ್ಲಿ ರವಿಕುಮಾರ್ ವಿಫಲ
Advertisement

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 31 : ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಮಗನಿಗೆ ಸಿಗುತ್ತೆ ಎಂದು ಕಾಯುತ್ತಿದ್ದ ಎಂ. ಚಂದ್ರಪ್ಪನಿಗೆ ನಿರಾಸೆಯಾಗಿದೆ. ಇದರಿಂದ ಶಾಸಕ ಚಂದ್ರಪ್ಪ ಬಂಡಾಯವೆದ್ದಿದ್ದಾರೆ. ಈ ಬಂಡಾಯ ಶಮನ ಮಾಡಲು ಬಿಜೆಪಿ ನಾಯಕರು ಪ್ರಯತ್ನ ಪಡುತ್ತಿದ್ದಾರೆ. ಅದರ ಭಾಗವಾಗಿಯೇ ಎಂ ಚಂದ್ರಪ್ಪ ಅವರ ಮನೆಗೆ ಶನಿವಾರ ರಾತ್ರಿ ಎಂಎಲ್ಸಿ ರವಿಕುಮಾರ್ ಭೇಟಿ ನೀಡಿ ಸಂಧಾನ ಸಭೆ ನಡೆಸಿದ್ದರು. ಆದರೆ ಈ ಸಂಧಾನ ಸಭೆ ವಿಫಲವಾಗಿದೆ.

Advertisement

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರವಿಕುಮಾರ್, ಶಾಸಕ ಎಂ. ಚಂದ್ರಪ್ಪ ಅವರು ಪಕ್ಷದ ಹಿರಿಯ ಶಾಸಕರಾಗಿದ್ದಾರೆ. ಅವರು ಪುತ್ರನಿಗೆ ಚಿತ್ರದುರ್ಗ ಲೋಕಸಭಾ ಟಿಕೆಟ್ ಕೇಳಿದ್ದರು. ಆದರೆ ಈಗಾಗಲೇ ನಿರ್ಧಾರ ಆಗಿರುವುದರಿಂದ ಅವರ ಕುಟುಂಬದವರೊಂದಿಗೆ ಮಾತನಾಡಿದೆ. ಟಿಕೆಟ್ ಸಿಗಲಿಲ್ಲವೆಂದು ಇಮೀಡಿಯಟ್ ನಿರ್ಧಾರ ತಗೋಬೇಡಿ, ಪಾರ್ಟಿಯಲ್ಲಿ ಸಾಕಷ್ಟು ಅವಕಾಶ ಇವೆ. ಮುಂದೆ ಇನ್ನೂ ಬಹಳ ಒಳ್ಳೆ ದಿನಗಳು ಬರುತ್ತವೆ. ಹಾಗಾಗಿ ಆತುರದ ನಿರ್ಧಾರ ತೆಗೆದುಕೊಳ್ಳದಂತೆ ಹೇಳೀದೀವಿ
ಇನ್ನು ಚಂದ್ರಪ್ಪ ರವರ ಜೊತೆ ಮಾತುಕತೆ ಮುಂದುವರೆಸುತ್ತೇವೆ ಎಂದು ಹೇಳಿದರು.

ಅವರು ಹೊರಗಡೆಯಿಂದ ಬಂದವರಿಗೆ ಟಿಕೆಟ್ ಕೊಡಬೇಡಿ ಲೋಕಲ್ ನವರಿಗೆ ಟಿಕೆಟ್ ಕೊಡಿ ಅಂದಿದ್ದಾರೆ. ಈಗಾಗಲೇ ಟಿಕೆಟ್ ನಿರ್ಧಾರವಾಗಿದ್ದು, ಮಾತುಕತೆ ಮುಂದುವರೆದಿದೆ, ಇವರು ಏಪ್ರಿಲ್ 3ನೇ ತಾರೀಕು ನಾಮಿನೇಶನ್ ಮಾಡ್ತೀನಿ ಅಂದಿದ್ದಾರೆ, ನಾನು ಮಾತಾಡ್ತೀನಿ, ಈ ಕುರಿತು ಪಕ್ಷದ ವರಿಷ್ಠರೂ ಕೂಡ ಮಾತಾಡ್ತಾರೆ.ಪಾರ್ಟಿ ದೊಡ್ಡದು, ಚಂದ್ರಪ್ಪ ಹಿರಿಯ ಶಾಸಕರು, ಪಾರ್ಟಿ ನಿರ್ಧಾರಕ್ಕೆ ಬದ್ಧ ಅಂತಾ ಜೊತೆಗಿದ್ದಾರೆ ಎಂದು ನುಡಿದರು.

Advertisement

ಇದೆ ವೇಳೆ ಮಾತನಾಡಿದ ರಘು ಚಂದನ್, ರವಿಕುಮಾರ್ ಮುಂದೆ ನಮ್ಮ ನೋವು, ಕಷ್ಟ ಹೇಳಿದೀವಿ, ಅವರಿಗೂ ನಾವು ಹೇಳಿರೊದಲ್ಲಿ ಸತ್ಯ ಇದೆ ಅಂತಾ ಅನಿಸಿದೆ. ಏಪ್ರಿಲ್ 3ರಂದು ನಾಮಪತ್ರ ಸಲ್ಲಿಸುವುದರಿಂದ ನಮ್ಮ‌ತಂದೆ ಚಳ್ಳಕೆರೆಗೆ ಹೋಗಿದ್ದಾರೆ.  3 ನೇ ತಾರೀಖು ನಾಮಪತ್ರ ಸಲ್ಲಿಸಲಾಗುತ್ತದೆ. ರವಿಕುಮಾರ್ ರವರು ಪಾರ್ಟಿ ಸಿಸ್ಟಮ್ ನಲ್ಲಿ ಈ ಕುರಿತು ಹೇಳಿದ್ದಾರೆ. ಸ್ಥಳೀಯರನ್ನು ಬಿಟ್ಟು 500 ಕಿಮಿ ದೂರದಿಂದ ಅಭ್ಯರ್ಥಿ ಕರೆತರುವ ಅವಶ್ಯಕತೆ ಇರಲಿಲ್ಲ, ಕಾರಜೋಳರನ್ನು ಕರೆತಂದ ವಿಷಯ ಹೇಳಿದ್ರು, ಆದ್ರೆ ನಾವು ಮಾಡಿದ ತೀರ್ಮಾನದ ಬಗ್ಗೆ ಹೇಳೀದಿವಿ ಯಡೆಯೂರಪ್ಪ ಮನೆಗೆ ಬಂದ್ರೆ ಬರ್ಲಿ, ಅವ್ರು ನಮ್ಮ‌ ತಂದೆ ಸಮಾನರು ಎಂದು ರಘು ಚಂದನ್ ತಿಳಿಸಿದರು. ಅವರು ಕಾಲಲ್ಲಿ ತೋರಿಸಿದ್ದನ್ನು ತಲೆ‌ ಮೇಲೆ‌ ಹೊತ್ತುಕೊಂಡು ಮಾಡೀದೀವಿ, ಯಡೆಯೂರಪ್ಪನವರ ಬಗ್ಗೆ ನಮಗಿರುವ ವಿಶ್ವಾಸ ಅಚಲ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಪ್ರಬಲ  ಆಕಾಂಕ್ಷಿಯಾಗಿದ್ದ ಎಂ.ಸಿ. ರಘುಚಂದನ್ ಹೇಳಿದರು.

Tags :
Advertisement