Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ರಂಜಾನ್  ತ್ಯಾಗ, ಪ್ರೀತಿ, ಶಾಂತಿಯ ಸಂಕೇತ :  ಬಿ.ಎನ್.ಚಂದ್ರಪ್ಪ

12:06 PM Apr 11, 2024 IST | suddionenews
Advertisement

ಚಿತ್ರದುರ್ಗ  : ಏ.11 :  ಚಿತ್ರದುರ್ಗದ ಜಾಮಿಯಾ ಈದ್ಗಾ, ಕೊಹಿನೂರ್ ಈದ್ಗಾ, ತಬ್ಲೀಗಿ ಜಮಾದ್ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಸೇರಿದ್ದ ಅಪಾರ ಸಂಖ್ಯೆಯ ಮುಸ್ಲಿಂ ಬಾಂಧವರ ಜೊತೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ  ಬಿ.ಎನ್.ಚಂದ್ರಪ್ಪ ಭಾಗವಹಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

Advertisement

ನಂತರ ಮಾತನಾಡಿದ  ಬಿ.ಎನ್.ಚಂದ್ರಪ್ಪ, ಎಲ್ಲ ಧರ್ಮಗಳ ಆಶಯವೂ ಶಾಂತಿ, ಸೌಹಾರ್ದದಿಂದ ಇರಬೇಕು ಎನ್ನುವುದನ್ನು ತಿಳಿಸುವುದೇ ಆಗಿದೆ. ಅದನ್ನು ಎಲ್ಲರೂ ಪಾಲಿಸಬೇಕು. ಯಾವುದೇ ಧರ್ಮವೂ ಇನ್ನೊಂದು ಧರ್ಮಕ್ಕೆ ಕೇಡು ಬಯಸುವುದಿಲ್ಲ. ಎಲ್ಲ ಧರ್ಮಗಳು ಸಹೋದರತ್ವವನ್ನೇ ಸಾರಿವೆ ಮತ್ತು ಉತ್ತಮ ವಿಚಾರಗಳನ್ನು ಹೇಳಿವೆ. ಈ ಸೌಹಾರ್ದ ಪರಂಪರೆಯನ್ನು ಎಲ್ಲರೂ ಮುಂದುವರಿಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರಲ್ಲದೆ ಸಮಾಜದಲ್ಲಿ ಪ್ರತಿಯೊಬ್ಬರೂ ಸಹಬಾಳ್ವೆಯಿಂದ ಬದುಕಬೇಕು ಎಂದರು.

Advertisement

ಈ ಸಂದರ್ಭದಲ್ಲಿ ಚಿತ್ರದುರ್ಗ ಶಾಸಕರಾದ ವೀರೇಂದ್ರ ಪಪ್ಪಿ,ಡಿಸಿಸಿ ಅಧ್ಯಕ್ಷರಾದ ತಾಜ್ ಪೀರ್  ವಕ್ಫ್ ಬೋರ್ಡ್ ಅಧ್ಯಕ್ಷರಾದ  ಅನ್ವರ್, ಎ ಸಿ ಓ ಬಾಬು,ತಾಜ್ ಪೀರ್,ಮುಹೀಬ್ ಉಲ್ಲಾ, ಅಲ್ಲಾ ಬಕ್ಷಿ, ಖಾಸಿಂ ಅಲಿ, ಅನೀಸ್,ಖುದ್ದೂಸ್ ಹಾಗು ಅನೇಕ ಮುಸ್ಲಿಂ ಮುಖಂಡರು ಉಪಸ್ಥಿತರಿದ್ದರು.

Advertisement
Tags :
B.N. ChandrappaBN ChandrappachitradurgaLovepeaceRamzan festivalRamzan is a symbolsacrificeಚಿತ್ರದುರ್ಗತ್ಯಾಗಪ್ರೀತಿಬಿ.ಎನ್.ಚಂದ್ರಪ್ಪರಂಜಾನ್ಶಾಂತಿಯ ಸಂಕೇತ
Advertisement
Next Article