For the best experience, open
https://m.suddione.com
on your mobile browser.
Advertisement

ರಾಂಪುರ ಪೊಲೀಸರಿಂದ ಮನೆಗಳ್ಳನ ಬಂಧನ, ನಗದು ಮತ್ತು ಬೆಳ್ಳಿ ಆಭರಣಗಳ ವಶ

09:58 PM Feb 13, 2024 IST | suddionenews
ರಾಂಪುರ ಪೊಲೀಸರಿಂದ ಮನೆಗಳ್ಳನ ಬಂಧನ  ನಗದು ಮತ್ತು ಬೆಳ್ಳಿ ಆಭರಣಗಳ ವಶ
Advertisement

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.13 :  ಜಿಲ್ಲೆಯ ರಾಂಪುರ ಪೊಲೀಸರು ಓರ್ವ ಮನೆಗಳ್ಳನನ್ನು ಬಂಧಿಸಿದ್ದಾರೆ. ಬಂಧಿತನಿಂದ ನಗದು ಮತ್ತು ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ.

Advertisement

ಬಳ್ಳಾರಿ ನಗರದ ಗುಗ್ಗರಹಟ್ಟಿಯ ಲಾರಿ ಡ್ರೈವರ್,
ಲೋಕೇಶ್ (28ವರ್ಷ) ಬಂಧಿತ ಆರೋಪಿ.

ರಾಂಪುರ ಗ್ರಾಮದ ಶಾಹೀದ್ ಖಾನ್‍ರವರು ತಮ್ಮ ಮನೆಯಲ್ಲಿದ್ದ 08 ಗ್ರಾಂ ತೂಕದ ಕೊರಳ ಚೈನ್, ಬೆಳ್ಳಿ
ಬ್ರಾಸ್‍ಲೆಟ್ ಮತ್ತು 32000/- ರೂ.ಗಳ ನಗದು ಹಣ ಕಳ್ಳತನವಾಗಿರುತ್ತದೆ. ಮತ್ತು ಶಾಹೀದ್ ಖಾನ್ ರವರ ಸಂಬಂಧಿಯಾದ ನಾಸೀರ್ ಹುಸೇನ್
ರವರ ಮನೆಯಲ್ಲಿಯೂ ಸಹಾ ಕಳ್ಳತನವಾಗಿದ್ದು ಅವರ ಮನೆಯಲ್ಲಿದ್ದ 05 ಬೆಳ್ಳಿ 02 ಬಂಗಾರದ ಉಂಗುರಗಳನ್ನು
ಹಾಗೂ 24000/- ರೂ.ಗಳ ನಗದು ಹಣ ಕಳುವಾಗಿದೆ ಎಂದು
ರಾಂಪುರ ಪೊಲೀಸರಿಗೆ ದೂರು ನೀಡಿದ್ದರು.

Advertisement

ಆರೋಪಿ ಪತ್ತೆಗಾಗಿ ಚಳ್ಳಕೆರೆ ಪೊಲೀಸ್ ಉಪಾಧೀಕ್ಷಕರಾದ
ಟಿ.ಬಿ. ರಾಜಣ್ಣ ಹಾಗೂ ಮೊಳಕಾಲ್ಮೂರು ವೃತ್ತ ನಿರೀಕ್ಷಕರಾದ ವಸಂತ ವಿ ಅಸೋದೆ ಅವರ ಮಾರ್ಗದರ್ಶನದ ಮೇರೆಗೆ ರಾಂಪುರ ಠಾಣೆಯ ಪಿ.ಎಸ್.ಐ ಮಹೇಶ್ ಲಕ್ಷ್ಮಣ ಹೊಸಪೇಟೆ ರವರು ಮತ್ತು ಸಿಬ್ಬಂದಿಗಳ ತಂಡವು ಫೆಬ್ರವರಿ 11 ರಂದು ಪ್ರಕರಣದ ಆರೋಪಿಯಾದ ಲೋಕೇಶ್ ನನ್ನು ಬಂಧಿಸಿ ನಗದು ಮತ್ತು ಬೆಳ್ಳಿ ಆಭರಣಗಳ ವಶಕ್ಕೆ ಪಡೆದಿದ್ದಾರೆ.

ಈ ಪ್ರಕರಣದ ಆರೋಪಿಯು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದು, ಇದೇ ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನೂ ಇಬ್ಬರು ಆರೋಪಿಗಳು ಬೇರೆ ಠಾಣೆಯ ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಮಹೇಶ್ ಲಕ್ಷ್ಮಣ ಹೊಸಪೇಟೆ, ಪಿ.ಎಸ್.ಐ ಮತ್ತು
ಸಿಬ್ಬಂದಿಗಳಾದ ಇಮಾಮ್ ಹುಸೇನ್, ಗೋಣೆಪ್ಪ, ಬಸವರಾಜ, ಪ್ರೇಮ್‍ಕುಮಾರ್, ಗೋವಿಂದ ರವರುಗಳ
ಕಾರ್ಯವನ್ನು ಪೊಲೀಸ್ ಅಧೀಕ್ಷಕರು ಶ್ಲಾಘಿಸಿರುತ್ತಾರೆ.

Tags :
Advertisement