Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗದಲ್ಲಿ ಅಕ್ಟೋಬರ್ 13 ರಂದು ವಕೀಲರಿಂದ ರಾಜವೀರ ಮದಕರಿ ನಾಯಕ ನಾಟಕ ಪ್ರದರ್ಶನ : ಶಿವುಯಾದವ್

04:44 PM Oct 08, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಚಿತ್ರದುರ್ಗ ಅ. 08 : ಜಿಲ್ಲಾ ವಕೀಲರ ಸಂಘ ಚಿತ್ರದುರ್ಗ ಹಾಗೂ ಜಿಲ್ಲಾ ವಕೀಲರ ಸಾಂಸ್ಕೃತಿಕ ಬಳಗ ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ಅಕ್ಟೋಬರ್ 13 ರಂದು ನ್ಯಾಯಾಲಯದ ಆವರಣದಲ್ಲಿ ಮದಕರಿ ನಾಯಕ ಜಯಂತಿ ಹಾಗೂ ದಸರಾ ಹಬ್ಬದ ಅಂಗವಾಗಿ ರಾಜವೀರ ಮದಕರಿ ನಾಯಕ ಎಂಬ ಐತಿಹಾಸಿಕ ನಾಟಕವನ್ನು ಪ್ರದರ್ಶನ ಮಾಡಲಾಗುತ್ತದೆ ಇದರ ಮೂಲಕ ನ್ಯಾಯಾವಾದಿಗಳಲ್ಲಿ ಅಡಗಿರುವ ಸಪ್ತವಾದ ಪ್ರತಿಭೆಯನ್ನು ಹೂರ ಹಾಕುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ವಕೀಲರ ಸಂಘದ ಮಾಜಿ ಅಧ್ಯಕ್ಷ ಶಿವುಯಾದವ್ ತಿಳಿಸಿದ್ದಾರೆ.

Advertisement

ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು ಸಂಗೀತ ಶಿಕ್ಷಕರಾಗಿ ಜಿ.ಮೂಗಬಸಪ್ಪ, ನಾಟಕ ತರಬೇತುದಾರರಾಗಿ, ಎಂ.ಎಚ್ ಮರಿಸ್ವಾಮಿ ಅವರ ನೇತೃತ್ವದಲ್ಲಿ ಅಕ್ಟೋಬರ್ 13 ರಂದು ಸಂಜೆ 8 ಗಂಟೆಗೆ ತುಮಕೂರಿನ ಶ್ರೀ ಲತಾ ಹೈಡ್ರಾಲಿಕ್ ಆಟೋಮೇಟಕ್ ಎಲ್.ಇ.ಡಿ.ಡ್ರಾಮ ಸೀನರಿಯಲ್ಲಿ ಡಿ.ಟಿ.ಎಸ್ ಧ್ವನಿವರ್ಧಕ ಯಂತ್ರಗಳಿಂದ ವಿದ್ಯುತ್ ದೀಪಗಳಿಂದ ಅಲಂಕೃತವಾದ ಭವ್ಯ ರಂಗ ಸಜ್ಜಿಕೆಯಲ್ಲಿ ವಕೀಲರು ರೋಚಕ ಇತಿಹಾಸದ ನಾಟಕವನ್ನು ಪ್ರಪ್ರಥಮ ಬಾರಿಗೆ ಚಿತ್ರದುರ್ಗದ ವಕೀಲರು ರಂಗಭೂಮಿಯಲ್ಲೂ ಖಡಕ್ ಪ್ರದರ್ಶನ ನೀಡಲು ತಯಾರಾಗಿದ್ದಾರೆ ಎಂದರು.

ಜಿಲ್ಲೆಯ ಜನರಿಗೆ ಮತ್ತು ತಮ್ಮ ಕುಟುಂಬಸ್ಥರು ಮತ್ತು ಸಮಸ್ತ ಸಾರ್ವಜನಿಕರಿಗೆ ಮನರಂಜನೆ ನೀಡಲು ಮತ್ತು ವಕೀಲರು ತಾವೂ ಕಲಾವಿದರು ಎಂದು ತಮ್ಮ ಪ್ರತಿಭೆ ಅನಾವರಣ ಮಾಡಲು ತಯಾರಿದ್ದಾರೆ. ಹೀಗಾಗಿ ನ್ಯಾಯಾಲಯ ಇದೀಗ ಕಲಾ ರಂಗಭೂಮಿಯಾಗಿ ಸಿದ್ದವಾಗಿದೆ. ನ್ಯಾಯವಾದಿಗಳ ರಾಜವೀರ ಮದಕರಿನಾಯಕ ನಾಟಕ ತೀವ್ರ ಕುತೂಹಲ ಕೆರಳಿಸಿದೆ ಎಂದ ಅವರು ಹೈಕೋರ್ಟ್ ನ್ಯಾಯಮೂರ್ತಿಗಳಾದ ಖಿ ವೆಂಕಟೇಶ ನಾಯ್ಕ್ ನಾಟಕವನ್ನು ಉದ್ಘಾಟಿಸಲಿದ್ದಾರೆ. ಜಿಲ್ಲಾ ನ್ಯಾಯಾದೀಶರಾಧ ರೋಣ್ ವಾಸುದೇವ್, ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾದೀಶರಾದ ನಿಂಬಣ್ಣಕಲ್ಕಣಿ ಎರಡನೇ ಹೆಚ್ಚುವರಿ ಜಿಲ್ಲಾ ನ್ಯಾಯಾದೀಶರಾದ ಗಂಗಾಧರ ಹಡಪದ್ ಸೇರಿದಂತೆ ಜಿಲ್ಲೆಯ ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರು ನ್ಯಾಯಾವಾದಿಗಳು ಸಾರ್ವಜನಿಕರು ಹಿತೈಷಿಗಳು ಅಭಿಮಾನಿಗಳು ಭಾಗವಹಿಸಲಿದ್ದಾರೆ. ಎಂದು ಶಿವುಯಾದವ್ ತಿಳಿಸಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ವೈ.ತಿಪ್ಪೇಸ್ವಾಮಿ ಮಾತನಾಡಿ, ಎಸ್. ವಿಜಯಕುಮಾರ್ ಅಧ್ಯಕ್ಷರಾಗಿ ದ್ದಾಗ ಆಶಾಲತಾ ಎಂಬ ಸಾಮಾಜಿಕ ನಾಟಕ, ನಂತರ ಸಿ. ಶಿವುಯಾದವ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕುರುಕ್ಷೇತ್ರ ಪೌರಾಣಿಕ ನಾಟಕ ಎರಡು ಬಾರಿ ಅದ್ಭುತವಾಗಿ ಮಾಡಿದ್ದು ಇದೀಗ ನನ್ನ ಅವಧಿಯಲ್ಲಿ ರಾಜವೀರ ಮದಕರಿನಾಯಕ ನಾಟಕವನ್ನು ಮದಕರಿನಾಯಕ ಜಯಂತಿ ಮತ್ತು ದಸರಾ ಹಬ್ಬದ ಅಂಗವಾಗಿ ಅಕ್ಟೋಬರ್ 13 ರ ಭಾನುವಾರ ಪ್ರದರ್ಶನ ಮಾಡಲಿದ್ದಾರೆ ಎಂದರು.

ಪಾತ್ರವರ್ಗದಲ್ಲಿ ರಾಜವೀರ ಮದಕರಿನಾಯಕರಾಗಿ ಎಸ್.ವಿದ್ಯಾಧರ, ದೊಡ್ಡ ಮದಕರಿನಾಯಕರಾಗಿ ಎನ್. ಶರಣಪ್ಪ, ಶಾಂತವೀರ ಮುರುಘಾ ಸ್ವಾಮಿಜಿಯಾಗಿ ಜಿ.ಸಿ.ದಯಾನಂದ, ಸಿದ್ದಪುರುಷರಾಗಿ ಟಿ. ಶಿವಾರಾಧ್ಯ, ಪರಶುರಾಮ ನಾಯಕರಾಗಿ ಎಂ.ಮೂರ್ತಿ, ಭರಮಣ್ಣ ನಾಯಕರಾಗಿ ಟಿ.ಭೋಸಯ್ಯ, ಹೈದರಾಲಿಖಾನ್ ಪಾತ್ರದಲ್ಲಿ ಶಿವುಯಾದವ್ ,ಕೃಷ್ಣಪ್ಪ ನಾಯಕರಾಗಿ ಎಂ.ಕೆ.ಲೋಕೇಶ್, ನಿಡುಗಲ್ ದೊರೆ ಕಾಮರಾಜರಾಗಿ ಟಿ.ರವಿ ಸಿದ್ದಾರ್ಥ, ಸೋಮಶೇಖರ್ ನಾಯಕರಾಗಿ ಸೋಮಶೇಖರ್ ರೆಡ್ಡಿ, ದಿವಾನ್ ಪೂರ್ಣಯ್ಯರಾಗಿ ಮಾಲತೇಶ್ ಅರಸ್ , ಲಾವಣಿ ಲಿಂಗಯ್ಯರಾಗಿ ಡಾ.ಎಂ.ಸಿ.ನರಹರಿ, ಶಕುನಿ ಶಂಕರಯ್ಯನಾಗಿ ಜೆ.ಕಿರಣ್ ಜೈನ್, ಧನ್ ಸಿಂಗ್ ಪಾತ್ರದಲ್ಲಿ ಕೆ.ಚಂದ್ರಶೇಖರಪ್ಪ, ರಾಜಮಾತೆ ಓಬವ್ವ ನಾಗತಿಯಾಗಿ ಲಕ್ಷ್ಮಿ ಶ್ರೀಧರ್, ಪದ್ಮಾಂಬಿಕೆಯಾಗಿ ಚಂದನ, ನೃತ್ಯ ಕಲಾವಿದೆಯಾಗಿ ಮೌನೇಶ್ ಬಡಿಗೇರ ಪಾತ್ರ ಮಾಡಿದ್ದಾರೆ. ಕ್ಯಾಷಿಯೋ ಪ್ರವೀಣ್, ತಬಲ ಸಾಗರ್, ರಿದಂ ಬದ್ರಿ ನಿರ್ವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಆಶೋಕ ಬೆಳಗಟ್ಟ, ಕುಮಾರ್, ವಿಜಯಕುಮಾರ್, ಲೋಕೇಶ್, ವಿದ್ಯಾಧರ, ವೆಂಕಟೇಶ್ ಮೂರ್ತಿ, ಶರಣಪ್ಪ, ಬೋಸಯ್ಯ, ವಿರೇಶ್, ದಯಾನಂದ ಸೇರಿದಂತೆ ಇತರರು ಭಾಗವಹಿಸಿದ್ದರು.

Advertisement
Tags :
Advocatebengaluruchitradurgadrama performanceRajveera Madakari NayakaShivayadavsuddionesuddione newsಚಿತ್ರದುರ್ಗನಾಟಕ ಪ್ರದರ್ಶನಬೆಂಗಳೂರುರಾಜವೀರ ಮದಕರಿ ನಾಯಕವಕೀಲರುಶಿವುಯಾದವ್ಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article