ರಾಜ್ಯಪಾಲರ ನಡೆ ಖಂಡಿಸಿ ಆಗಸ್ಟ್ 27 ರಂದು ರಾಜ ಭವನ ಚಲೋ : ಸಿ.ಟಿ.ಕೃಷ್ಣಮೂರ್ತಿ
ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 25 : ರಾಜ್ಯದಲ್ಲಿ ಅಧಿಕಾರವನ್ನು ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ವಿನಾಕಾರಣ ಕಿರುಕುಳವನ್ನು ನೀಡುತ್ತಿದ್ದಾರೆ. ಇದನ್ನು ಪ್ರತಿಭಟಿಸಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಲ ಒಕ್ಕೂಟದವತಿಯಿಂದ ಆ. 27 ರಂದು ರಾಜ್ಯಭವನ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಸಿ.ಟಿ.ಕೃಷ್ಣಮೂರ್ತಿ ತಿಳಿಸಿದ್ದಾರೆ.
ಚಿತ್ರದುರ್ಗ ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿನ ಮತದಾರರು ಬಿಜೆಪಿ ಸರ್ಕಾರವನ್ನು ತಿರಸ್ಕಾರ ಮಾಡಿ ಕಾಂಗ್ರೆಸ್ ಪಕ್ಷದ ಸರ್ಕಾರ ಅಧಿಕಾರಕ್ಕೆ ಬರಲು ನೆರವಾದರು. ಇದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಧಿಕಾರಕ್ಕೆ ಬಂದು ಚುನಾವಣೆ ಮುನ್ನಾ ಮತದಾರರಿಗೆ ನೀಡಿದ ಆಶ್ವಾಸನೆಯಂತೆ ಐದು ಗ್ಯಾರೆಂಟಿಗಳನ್ನು ಸ್ವಲ್ಪ ದಿನಗಳಲ್ಲಿಯೇ ನೀಡಿತ್ತು, ಇದರಿಂದ ಸಿದ್ದರಾಮಯ್ಯ ರವರು ಜನಪ್ರಿಯತೆಯನ್ನು ಸಹಿಸದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಅವರ ಮೇಲೆ ಇಲ್ಲದ ಸಲ್ಲದೆ ಆರೋಪವನ್ನು ಹೊರೆಸಿ ಅವರ ಜನಪ್ರಿಯತೆಯನ್ನು ಕುಗ್ಗಿಸುವ ಕಾರ್ಯವನ್ನು ಮಾಡಿದರು ಇದಕ್ಕೆ ಬಗ್ಗದ ಸಿದ್ದರಾಮಯ್ಯರವರ ವಿರುದ್ದ ಎಂದೋ ನಡೆದ ಮುಡಾ ಹಗರಣವನ್ನು ಬಯಲಿಗೆ ತಂದು ಅವರನ್ನು ತೋಜೋವಧೆ ಮಾಡುವ ಕಾರ್ಯವನ್ನು ಮಾಡಿದರು. ಇದರು ಸಫಲವಾಗದಿದ್ದಾಗ ಕೇಂದ್ರದಿಂದ ರಾಜ್ಯಪಾಲರ ಮೂಲಕ ಸಿದ್ದರಾಮಯ್ಯ ರವರಿಗೆ ನೋಟಿಸ್ ನೀಡುವ ಕಾರ್ಯವನ್ನು ಮಾಡಿ ಅವರನ್ನು ಕಾನೂನಿನಲ್ಲಿ ಸಿಕ್ಕಿ ಹಾಕಿಸುವ ಕಾರ್ಯವನ್ನು ಮಾಡಿದ್ದಾರೆ ಇದು ಖಂಡನೀಯವಾದದು ಎಂದರು.
ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ರಾಜ್ಯಪಾಲರ ವಿರುದ್ದ ಪ್ರತಿಭಟನೆಯನ್ನು ನಡೆಸಿ ರಾಷ್ಟ್ರಪತಿಗಳಿಗೆ ಈ ರಾಜ್ಯಪಾಲರನ್ನು ವಾಪಾಸ್ಸು ಕರೆಯಿಸಿಕೊಳ್ಳಿ ಎಂದು ಮನವಿ ಮಾಡಲಾಯಿತು. ಸಿದ್ದರಾಮಯ್ಯ ರವರ ಪರವಾಗಿ ರಾಜ್ಯ ಹಿಂದುಳಿದ, ಅಲ್ಪ ಸಂಖ್ಯಾತ, ಪರಿಶಿಷ್ಟ ಜಾತಿ ಪಂಗಡ ಸೇರಿದಂತೆ ಇತರರು ಸಹಾ ಬೆಂಬಲವಾಗಿದ್ದಾರೆ ಸಿದ್ದರಾಮಯ್ಯ ಹೆದರುವ ಅವಶ್ಯಕತೆ ಇಲ್ಲ ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ಕಳೆದ ಬಾರಿ ಉತ್ತಮವಾದ ಆಡಳಿತವನ್ನು ನೀಡಿದ್ದರು ಈಗಲೂ ಸಹಾ ಅದೇ ರೀತಿಯಾದ ಆಡಳಿತವನ್ನು ನೀಡುತ್ತಿದ್ದಾರೆ ಇದನ್ನು ಸಹಿಸದ ಬಿಜೆಪಿ ಮತ್ತು ಜೆಡಿಎಸ್. ಪಕ್ಷಗಳು ಅವರ ವಿರುದ್ದ ಹುನ್ನಾರ ಮಾಡುತ್ತಿವೆ ಎಂದು ಕೃಷ್ಣಮೂರ್ತಿ ದೂರಿದರು.
ದಸಂಸಯ ಮುಖಂಡರಾದ ದುರುಗೇಶ್ ಮಾತನಾಡಿ, ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಮೇಲೆ ಪ್ರಾಸಿಕ್ಯೊಷ್‍ನ್ನಿಗೆ ಅನುಮತಿ ನೀಡುವಾಗ ಸಂವಿಧಾನದ ಮೂಲ ತತ್ವಗಳನ್ನು ಹಾಗೂ ಪ್ರಜಾಪ್ರಭುತ್ವದ ಆಶಯಗಳನ್ನು ಸಂಪೂರ್ಣವಾಗಿ ಗಾಳಿಗೆ ತೋರಿದ್ದಾರೆ. ರಾಜಭವನವನ್ನು ಕೋಮುವಾದಿ ರಾಜಕಾರಣ ಮಾಡುತ್ತಿರುವ ಬಿಜೆಪಿ ಮತ್ತು ಜೆಡಿಎಸ್, ಕಚೇರಿಯನ್ನಾಗಿ ಮಾಡಿಕೊಂಡಿದ್ದಾರೆ. ರಾಜ್ಯಪಾಲರು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ತಾಳಕ್ಕೆ ಕುಣಿಯುತ್ತಿದ್ದಾರೆ. ಇದ್ದಲ್ಲದೆ ಪಕ್ಷಪಾತಿ ಧೋರಣೆಯನ್ನು ತಾಳಿದ್ದಾರೆ. ಇದ್ದಲ್ಲದೆ ಲೋಕಾಯುಕ್ತ ಎಸ್.ಐ.ಟಿ. ಮುಂತಾದ ತನಿಖಾ ಸಂಸ್ಥೆಗಳಲ್ಲಿ ಪ್ರಾಥಮಿಕ ತನಿಖೆಯಲ್ಲಿ ತಪ್ಪಿತಸ್ಥರು ಎಂದು ಕಂಡು ಬಂದ ಕುಮಾರಸ್ವಾಮಿಲ ಶಶಿಕಲಾ ಜೊಲ್ಲೆ ಜನಾರ್ಧನರೆಡ್ಡಿ ನಿರಾಣಿ ಯವರ ಬ್ರಷ್ಠಾಚಾರ ಕುರಿತು ಪ್ರಾಸಿಕ್ಯೂಷನ್ನಿಗೆ ಅನುಮತಿ ನೀಡದೆ ವರ್ಷಗಳಾದರು ಸಹಾ ರಾಜ್ಯಭವನದಲ್ಲಿ ಫೈಲು ಗಳು ಕೊಳೆಯುತ್ತಾ ಬಿದ್ದವೆ ಆದರೆ ಆರು ತಿಂಗಳಲ್ಲಿ ಯಾರೂ ನೀಡಿದ ದೂರಿನ್ವಯ ಸಿದ್ದರಾಮಯ್ಯ ರವರ ಮೇಲೆ ಕಾನೂನು ಕ್ರಮಕ್ಕೆ ಅನುಮತಿ ನೀಡಿರುವುದು ಖಂಡನೀಯ ಎಂದರು.
ನಗರಾಭಿವೃಧ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಆರ್.ಕೆ.ಸರ್ದಾರ್ ಮಾತನಾಡಿ, ಹೀಮದಿನ ಬಿಜೆಪಿ ಸರ್ಕಾರ ಹಲವಾರು ಹಗರಣಗಳಲ್ಲಿ ಭಾಗಿಯಾಗಿದ್ದರು ಅವರ ವಿರುದ್ದವಾಗಿ ಯಾವುದೇ ಪ್ರಾಸಿಕ್ಯೂಷನ್ ನೀಡಿಲ್ಲ, ಕರೋನ ಸಮಯದಲ್ಲಿ ಸರ್ಕಾರ ಖರೀದಿ ಮಾಡಿದ ಮಾಸ್ಕಗಳಲ್ಲಿ ಬಾರಿ ಪ್ರಮಾಣದಲ್ಲಿ ಹಗರಣವಾಗಿದೆ. ಇದರ ಬಗ್ಗೆ ನಾನು ಸಹಾ ಸರ್ಕಾರಕ್ಕೆ ಟೆಂಡರ್ ನೀಡಲು ಹೊದಾಗ ಇದರ ಬಗ್ಗೆ ಉನ್ನತ ಅಧಿಕಾರಿಯೂರ್ವರು ಮಾತನಾಡಿ ಇದ್ದೆಲ್ಲಾ ತೋರಿಕೆಗೆ ಸಾರ್ ಆಗಲೆ ಎಲ್ಲಾ ಟೆಂಡರ್ ಆಗಿ ಹೋಗಿದೆ ನೀವು ಟೆಂಡರ್ ನೀಡಿದರು ಏನು ಉಪಯೋಗ ಇಲ್ಲ ಎಂಬ ಮಾತನ್ನು ನನಗೆ ಹೇಳಿದರು, ಇಂತಹ ಸರ್ಕಾರ ನಡೆಸಿದವರು ಈಗ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಆಧಿಕಾರವನ್ನು ನಡೆಸುತ್ತಿರುವ ಸಿದ್ದರಾಮಯ್ಯ ರವರ ಮೇಲೆ ಆರೋಪ ಮಾಡಿರುವುದು ಇದಕ್ಕೆ ರಾಜ್ಯಪಾಲರು ಅನುಮತಿ ನೀಡಿರುವುದು ಎಲ್ಲಾ ರಾಜಕೀಯ ಕುತಂತ್ರವಾಗಿದೆ ಎಂದು ದೂರಿದರು.
ಪತ್ರಿಕಾ ಗೋಷ್ಟಿಯಲ್ಲಿ ನಗರಸಭೆಯ ಮಾಜಿ ಅಧ್ಯಕ್ಷರಾದ ನಿರಂಜನ ಮೂರ್ತಿ, ಹೆಚ್.ಮಂಜಪ್ಪ, ವಿಶ್ವಕರ್ಮ ಸಮಾಜದ ಪ್ರಸನ್ನ ಕುಮಾರ್, ಷಫಿವುಲ್ಲಾ, ಕೂರಚ ಸಮಾಜದ ಕೃಷ್ಣಪ್ಪ, ಬಿ.ಟಿ.ಜಗದೀಶ್, ಉಪ್ಪಾರ ಸಮಾಜದ ಮೂರ್ತಿ, ಜಾಕಿರ್ ಹುಸೇನ್, ಮಂಜುನಾಥ್, ಪ್ರಸನ್ನ ಸೇರಿದಂತೆ ಇತರರು ಭಾಗವಹಿಸಿದ್ದರು.