Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗದಲ್ಲಿ ಸುರಿಯುತ್ತಿರುವ ಮಳೆ : ತಂಪಾದ ಇಳೆ

10:48 PM May 10, 2024 IST | suddionenews
Advertisement

 

Advertisement

ಸುದ್ದಿಒನ್, ಚಿತ್ರದುರ್ಗ, ಮೇ.10 : ಮಳೆಗಾಗಿ ಕಾದಿದ್ದ ಕೋಟೆ ನಾಡಿನ ಜನತೆಗೆ ಮಳೆರಾಯ ಕೃಪೆ ತೋರಿದ್ದಾನೆ. ಬುಧವಾರ ಸ್ವಲ್ಪ ಮಳೆ ಬಂದಿತ್ತು. ಆದರೆ ಇಂದು (ಶುಕ್ರವಾರ) ರಾತ್ರಿ 10 ಗಂಟೆ ಸುಮಾರಿಗೆ ಮಳೆ ಆರಂಭವಾಗಿದ್ದು, ಗಾಳಿ, ಗುಡುಗು ಸಮೇತವಾಗಿ ಜೋರಾಗಿ ಮಳೆ ಸುರಿಯುತ್ತಿದೆ.

Advertisement

ರಣಬಿಸಿಲಿಗೆ ತತ್ತರಿಸಿದ್ದ ಜನತೆಗೆ ಮಳೆ ತಂಪೆರದಿದೆ.
ಕಳೆದ ಒಂದು ವಾರದಿಂದ ಹವಾಮಾನ ಇಲಾಖೆ ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿತ್ತು. ಇದೀಗ ಚಿತ್ರದುರ್ಗ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗುತ್ತಿದ್ದು ಜನರಲ್ಲಿ ತುಸು ನೆಮ್ಮದಿ ಮೂಡಿಸಿದೆ.

Advertisement
Tags :
bengaluruchitradurgarainingsuddionesuddione newsಚಿತ್ರದುರ್ಗತಂಪಾದ ಇಳೆಬೆಂಗಳೂರುಮಳೆಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article