ಚಿತ್ರದುರ್ಗ ರೈತರಲ್ಲಿ ಸಂತಸ ತಂದ ಮಳೆ : ಉಳುಮೆಗೆ ಸಿದ್ಧತೆ
ಚಿತ್ರದುರ್ಗ: ಕಳೆದ ಬಾರಿ ಮಳೆಯಿಲ್ಲದೆ, ಸರಿಯಾದ ಬಿತ್ತನೆ ಮಾಡಲಾಗದೆ ಹೈರಾಣಾಗಿದ್ದ ರೈತರ ಮೊಗದಲ್ಲಿ ಈಗ ಸಂತಸ ತುಂಬಿ ತುಳುಕುತ್ತಿದೆ. ಜಿಲ್ಲೆಯಲ್ಲೂ ಮಳೆಯ ದರ್ಶನ ಭಾಗ್ಯವಾಗಿದೆ. ಹೀಗಾಗಿ ರೈತರು ಉಳುಮೆ ಮಾಡಲು ಎಲ್ಲಾ ತಯಾರಿ ನಡೆಸುತ್ತಿದ್ದಾರೆ. ಇಷ್ಟು ದಿನ ಎಲ್ಲೆಡೆ ಮಳೆಯಾದರೂ ಚಿತ್ರದುರ್ಗದಲ್ಲಿ ಮಳೆಯ ಸೂಚನೆಯೇ ಇರಲಿಲ್ಲ. ಇದೀಗ ಜಿಲ್ಲೆಯಾದ್ಯಂತ ನಿರೀಕ್ಷೆಗೂ ಮೀರಿ ಮಳೆಯಾಗಿದ್ದು, ಉಳುಮೆ ಮಾಡಲು ತಯಾರಿ ನಡೆಸುತ್ತಿದ್ದಾರೆ.
ಹೊಸದುರ್ಗ ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದೆ. ಮಾಡದಕೆರೆಯಲ್ಲಿ 42 ಮಿ.ಮೀ ಮಳೆಯಾಗಿದೆ. ಚಿತ್ರದುರ್ಗದಲ್ಲಿ 34.1 ಮಿ.ಮೀಟರ್ ಮಳೆಯಾಗಿದೆ. ಇನ್ನೆರಡು ದಿನ ಇದೇ ರೀತಿ ಮಳೆಯಾದರೆ ಬೆಳೆಯುವ ರೈತನಿಗೆ ಸಾಕಷ್ಟು ಅನುಕೂಲವಾಗಿದೆ. ಮಳೆ ಇಲ್ಲದೆ ಅಡಿಕೆ ಮರ, ತೆಂಗಿನ ಮರಗಳನ್ನು ಉಳಿಸಿಕೊಳ್ಳುವುದಕ್ಕೆ ಕಷ್ಟ ಪಡುತ್ತಿದ್ದರು. ಈಗ ಜೋರು ಮಳೆಯಿಂದ ಅಡಿಕೆ ಬೆಳೆಯ ಬುಡಕ್ಕೊಂದಿಷ್ಟು ತಂಪಾದ ವಾರಾವರಣ ನಿರ್ಮಾಣವಾಗಿದೆ.
ಜೋರು ಮಳೆಯಿಂದ ಒಂದಷ್ಟು ಅನಾಹುತವೂ ನಡೆದಿದೆ. ಮೂರು ಮನೆಗಳಿಗೆ ತೀವ್ರ ಹಾನಿಯಾಗಿದೆ. ಹದಿಮೂರು ಮನೆಗಳುಗೆ ಭಾಗಶಃ ಹಾನಿಯಾಗಿದೆ. ಆರು ಹೆಕ್ಟೇರ್ ತೋಟಗಾರಿಕಾ ಬೆಳೆ, ಒಂದು ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ. ಇನ್ನು ಚಿತ್ರದುರ್ಗದಲ್ಲಿ ಒಂಭತ್ತು ಮನೆಗಳಿಗೆ ಹಾನಿಯಾಗಿದೆ. ಹೀಗೆ ಜಿಲ್ಲೆಯ ಸುತ್ತಮುತ್ತಲಿನ ತಾಲೂಕಿನಲ್ಲಿ ಸಾಕಷ್ಟು ಹಾನಿಯಾಗಿದೆ. ಮಳೆಗಾಲ ಶಯರುವಾದಾಗ ಲೈಟ್ ಕಂಬದ ಸಮಸ್ಯೆ, ಮನೆಗಳ ಹಾನಿ, ಬೆಳೆ ಹಾನಿ ಆಗುತ್ತಲೇ ಇರುತ್ತದೆ. ಹೀಗಾಗಿ ಮಳೆಗಾಲ ಆರಂಭಕ್ಕೂ ಮುನ್ನವೇ ಒಂದಷ್ಟು ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುವುದು ಉತ್ತಮ. ಹೊರಗಡೆ ಹೋಗುವ ಜನ ಕೂಡ ಕೊಂಚ ಎಚ್ಚರ ವಹಿಸಿ, ಹೊರಗೆ ಹೋಗಬೇಕು. ಮಳೆ, ಗಾಳಿಗೆ ಸಿಲುಕದಂತೆ ಮುಂಜಾಗ್ರತೆ ವಹಿಸಬೇಕಿದೆ.