Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮೂಲಕ ಭಾರತಕ್ಕೆ ಮತ್ತಷ್ಟು ಶಕ್ತಿಯನ್ನು ನೀಡಿದ್ದಾರೆ : ಎಂಕೆ ತಾಜ್ ಪೀರ್

05:00 PM Mar 15, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಮಾ. 15 : ಇಂದು ಧರ್ಮಗಳಲ್ಲಿ ವಿಷದ ಬೀಜ ಬಿತ್ತುವ ಕೆಲಸ ನಡೆಯುತ್ತಿದೆ. ಇಂತಹ ಸಮಯದಲ್ಲಿ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ಮಾಡುವ ಮೂಲಕ ಭಾರತಕ್ಕೆ ಮತ್ತಷ್ಟು ಶಕ್ತಿಯನ್ನು ಅವರ ಪಾದಯಾತ್ರೆ ನೀಡಿತು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂಕೆ ತಾಜ್ ಪೀರ್ ಹೇಳಿದರು.

Advertisement

ಪತ್ರಿಕಾ ಭವನದಲ್ಲಿ ರಾಹುಲ್ ಗಾಂಧಿ ವಿಚಾರ ಮಂಚ್‍ವತಿಯಿಂದ ನಡೆದ ಅಭಿನಂದನೆಯನ್ನು  ಸ್ವೀಕರಿಸಿ ಮಾತಾಡಿದ ಅವರು. ರಾಹುಲ್ ಗಾಂಧಿ ಅವರ ಆಲೋಚನೆಗಳು ಬಹಳಷ್ಟು ಬದಲಾಗಿವೆ. ಅವರು ಐತಿಹಾಸಿಕ ದಾಖಲೆ ಬರೆಯುವಂತ 3500 ಕಿಲೋಮೀಟರ್ ಪಾದಯಾತ್ರೆ ಮಾಡಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಐದು ದಿನಗಳ ಕಾಲ ಪಾದಯಾತ್ರೆ ಮಾಡಿದರು.

ಇಂತಹ ಪಾದಯಾತ್ರೆಯ ಸಮಯದಲ್ಲಿ ಅಜ್ಜಿಯ ಸೌತೆಕಾಯಿ ಸ್ವೀಕರಿಸಿದ್ದರು. ಮೊಳಕಾಲ್ಮೂರಿನ ನೀರಿನ ಟ್ಯಾಂಕ್ ಮೇಲೆ ಹತ್ತಿ ರಾಷ್ಟ್ರ ಧ್ವಜ ಹಿಡಿದು ಬಾಲಕರ ಜೊತೆ ಬೆರೆತಿದ್ದನ್ನು ಸ್ಮರಿಸಿದರು.ರಾಹುಲ್ ಗಾಂಧಿ ಮಣಿಪುರದಲ್ಲಿ ನಡೆದ ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ್ ಜೋಡೋ ನ್ಯಾಯ ಯಾತ್ರೆಯ ಪಾದಯಾತ್ರೆಯನ್ನು ಮಾಡುತ್ತಿದ್ದಾರೆ. ಇದರಿಂದ ಶಾಂತಿ ನೆಲೆಸುವಂತಾಗಿದೆ. ದೇಶದಲ್ಲಿ ಶಾಂತಿ ಸೌಹಾರ್ದತೆಯ ವಾತಾವರಣ ಸೃಷ್ಠಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ ಎಂದರು.

ಇದೇ ಸಮಯದಲ್ಲಿ ಮಾತಾಡಿದ  ಜಿಲ್ಲಾ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ಡಿಎನ್ ಮೈಲಾರಪ್ಪ, ಬಿಜೆಪಿಯ ಅನಂತ್ ಕುಮಾರ್ ಹೆಗಡೆ ಅವರ ಮೇಲೆ ಕೇಂದ್ರ ಸರ್ಕಾರ  ಕ್ರಮವನ್ನು ಜರುಗಿಸಬೇಕು ಎಂದು ಆಗ್ರಹಿಸಿದರು.

ಸಮಯದಲ್ಲಿ ಕಾಂಗ್ರೆಸ್ ಮುಖಂಡಾದ ಮುದಾಸರ್ ನವಾಜ್, ರೈತ ಮುಖಂಡ ಲಕ್ಷ್ಮಿಕಾಂತ್, ರಾಹುಲ್ ಗಾಂಧಿ ವಿಚಾರ ಮಂಚ್ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಲಿಂಗರಾಜ್, ಬಾಷ ಇತರರಿದ್ದರು.

Advertisement
Tags :
bengaluruBharat Jodo YatrachitradurgaIndiaMK Taj Peerrahul gandhistrengthsuddionesuddione newsಎಂಕೆ ತಾಜ್ ಪೀರ್ಚಿತ್ರದುರ್ಗಬೆಂಗಳೂರುಭಾರತಭಾರತ್ ಜೋಡೋ ಯಾತ್ರೆರಾಹುಲ್ ಗಾಂಧಿಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article