ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕ್ವಾರಿ ಅಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್‍ಗೆ ಶಕ್ತಿ ತುಂಬಬೇಕಾಗಿದೆ : ಅಬ್ದುಲ್ ಮಾಜಿದ್
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 28 : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಭೆ ನಡೆಸಿ ಹೊಸ ಅಸೋಸಿಯೇಷನ್‍ಗೆ ಶಕ್ತಿ ತುಂಬಬೇಕಾಗಿದೆ ಎಂದು ಯೂನಿಯನ್ ಆಫ್ ಕರ್ನಾಟಕ ಕ್ವಾರಿ ಅಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಅಬ್ದುಲ್ ಮಾಜಿದ್ ಹೇಳಿದರು.
ದುರ್ಗದ ಸಿರಿಯಲ್ಲಿ ಗುರುವಾರ ನಡೆದ ಕ್ವಾರಿ ಅಂಡ್ ಸ್ಟೋನ್ ಕ್ರಷರ್ ಓನರ್ಸ್‍ಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೆಂಗಳೂರಿನಲ್ಲಿ ಪ್ರಥಮ ಸಭೆ ನಡೆಸಿ ಸರ್ಕಾರ ಹೊರಡಿಸಿರುವ ಒಂದು ಸುತ್ತೋಲೆಯನ್ನು ಹಿಡಿದು ನ್ಯಾಯಾಲಯಕ್ಕೆ ಹೋದ ಪರಿಣಾಮ ಸರ್ಕಾರಕ್ಕೆ ಮುಜುಗರವಾಗಿದೆ. ಎರಡು ಕಡೆ ರಾಯಲ್ಟಿ ವಸೂಲಿ ಮಾಡುತ್ತಿದೆ. ನೂತನ ಅಸೋಸಿಯೇಷನ್ ಕಾನೂನಾತ್ಮಕವಾಗಿರಬೇಕಾಗಿರುವುದರಿಂದ ಪ್ರತಿ ಜಿಲ್ಲೆಗಳಲ್ಲಿ ಸಭೆ ಕರೆದು ಯೂನಿಯನ್ ಆಫ್ ಕರ್ನಾಟಕ ಕ್ವಾರಿ ಅಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ಬಲಪಡಿಸಬೇಕಿದೆ. ಇದಕ್ಕೆ ಎಲ್ಲರ ಸಹಕಾರ ಬೇಕು ಎಂದು ಕೋರಿದರು.
ಯೂನಿಯನ್ ಆಫ್ ಕರ್ನಾಟಕ ಕ್ವಾರಿ ಅಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ಸಂಘಟನಾ ಕಾರ್ಯದರ್ಶಿ ಸಿ.ಎಸ್.ಭಾಸ್ಕರ್ ಮಾತನಾಡಿ ನಮ್ಮ ಹೋರಾಟದ ಪ್ರತಿಫಲವಾಗಿ ಇಪ್ಪತ್ತು ವರ್ಷ ಸಿ.ಫಾರಂ ಆಯಿತು. ನಮ್ಮ ಬೇಡಿಕೆಗಳನ್ನು ಮೊದಲಿನಿಂದಲೂ ಸರ್ಕಾರದ ಮುಂದಿಡುತ್ತ ಬರುತ್ತಿದ್ದೇವೆ. ಕಾನೂನು ತಿದ್ದುಪಡಿಗಳ ಅವಶ್ಯಕತೆಯಿದೆ.
ಕಾನೂನಾತ್ಮಕವಾಗಿರಬೇಕೆಂಬುದು ನಮ್ಮ ಉದ್ದೇಶ. ಒಂದೊಂದು ಜಿಲ್ಲೆಯಿಂದ 1200-1300 ಅರ್ಜಿಗಳು ಹೋಗಿವೆ. ಇನ್ನು ಯಾವುದು ಸರಿ ಹೋಗಿಲ್ಲ. ಒಗ್ಗಟ್ಟಿನಿಂದ ಹೋರಾಡೋಣ ಎಂದರು.
ಯೂನಿಯನ್ ಆಫ್ ಕರ್ನಾಟಕ ಕ್ವಾರಿ ಅಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಹೆಚ್.ವಾಗೀಶ್ ಮಾತನಾಡಿ ಹಿಂದಿನ ಫೆಡರೇಷನ್ ಸ್ಪಂದಿಸುತ್ತಿಲ್ಲ ಕಾರಣ ಹೊಸದಾಗಿ ಅಸೋಸಿಯೇಷನ್ ಆರಂಭಿಸುತ್ತಿದ್ದೇವೆ. ಅದಕ್ಕಾಗಿ ಎಲ್ಲಾ ಜಿಲ್ಲೆಗಳಲ್ಲಿ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸಿ ನಿರ್ಣಯ ಕೈಗೊಳ್ಳಲಾಗುವುದು. ಫೆಡರೇಷನ್ ಲೆಕ್ಕ ಕೊಟ್ಟಿಲ್ಲ. ಅವ್ಯವಹಾರವಾಗಿದೆ. ಒಂದೊಂದು ಜಿಲ್ಲೆಯಲ್ಲಿ ಒಂದೊಂದು ಸಮಸ್ಯೆಯಿರುವುದರಿಂದ ಹೊಸ ಅಸೋಸಿಯೇಷನ್‍ನ್ನು ಗಟ್ಟಿಯಾಗಿ ಕಟ್ಟಬೇಕಿದೆ ಎಂದು ಹೇಳಿದರು.
ಅಸೋಸಿಯೇಷನ್ ನಿರ್ದೇಶಕ ಉಸ್ಮಾನ್ ಘನಿ ಖಾಜಿ ಮಾತನಾಡುತ್ತ ಹಣವಿಲ್ಲದೆ ಬರಿ ಬಾಯಿ ಮಾತಿನಲ್ಲಿ ನೂತನ ಸಂಘವನ್ನು ಮುನ್ನಡೆಸಿಕೊಂಡು ಹೋಗುವುದು ಕಷ್ಟ. ಹಿಂದಿನ ಫೆಡರೇಷನ್‍ನವರು ಹಣ ಲಪಟಾಯಿಸಿಕೊಂಡು ಮೂರು ನಾಮ ಹಾಕಿ ಹೋಗಿದ್ದಾರೆ. ಸರ್ಕಾರಕ್ಕೆ ಭಯವಿರುವ ರೀತಿಯಲ್ಲಿ ಯೂನಿಯನ್ ಆಫ್ ಕರ್ನಾಟಕ ಕ್ವಾರಿ ಅಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್‍ನ್ನು ಕಟ್ಟಬೇಕಿದೆ ಎಂದು ಸಭೆಯಲ್ಲಿ ಸಲಹೆ ನೀಡಿದರು.
ಯೂನಿಯನ್ ಆಫ್ ಕರ್ನಾಟಕ ಕ್ವಾರಿ ಅಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಡಿ.ಸಿದ್ದರಾಜು, ಪ್ರಧಾನ ಕಾರ್ಯದರ್ಶಿ ಡಿ.ಆರ್.ಮಹೇಶ್, ಶಿವಮೊಗ್ಗ ಮಂಜಣ್ಣ ವೇದಿಕೆಯಲ್ಲಿದ್ದರು.
ವಿಜಯಶ್ರಿ ಮಾತನಾಡಿದರು.
ಅಸೋಸಿಯೇಷನ್ ನಿರ್ದೇಶಕರುಗಳಾದ ವೆಂಕಟೇಶ್, ಮಲ್ಲಿಕಾರ್ಜುನ್, ಜಿ.ಬಿ.ಶೇಖರ್, ಸಂದೀಪ್, ಅಭಿಷೇಕ್ ಇನ್ನು ಅನೇಕರು ಸಭೆಯಲ್ಲಿ ಹಾಜರಿದ್ದರು.