For the best experience, open
https://m.suddione.com
on your mobile browser.
Advertisement

ಬೆಂಬಲ ಬೆಲೆಯಲ್ಲಿ ಹೆಸರು ಕಾಳು ಖರೀದಿ: ನೋಂದಣಿಗೆ ಅವಕಾಶ

05:39 PM Sep 21, 2024 IST | suddionenews
ಬೆಂಬಲ ಬೆಲೆಯಲ್ಲಿ ಹೆಸರು ಕಾಳು ಖರೀದಿ  ನೋಂದಣಿಗೆ ಅವಕಾಶ
Advertisement

ಚಿತ್ರದುರ್ಗ. ಸೆಪ್ಟೆಂಬರ್.21: ಜಿಲ್ಲಾಧಿಕಾರಿಗಳ ನಿರ್ದೇಶನದಂತೆ 2024-25ನೇ ಸಾಲಿನ ಕರ್ನಾಟಕ ಸರ್ಕಾರದ ಬೆಂಬಲಬೆಲೆ ಯೋಜನೆಯಡಿಯಲ್ಲಿ ರೈತರಿಂದ ಹೆಸರು ಕಾಳು ಖರೀದಿ ಮಾಡಲು ಜಿಲ್ಲಾ ಟಾಸ್ಕ್ ಪೋರ್ಸ್ನಲ್ಲಿ ತೀರ್ಮಾನಿಸಲಾಗಿದ್ದು, ಪ್ರೂಟ್ಸ್ ಐಡಿಯೊಂದಿಗೆ ರೈತರು ಬಯೋಮೆಟ್ರಿಕ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಜಿಲ್ಲಾ ವ್ಯವಸ್ಥಾಪಕರು ಕೋರಿದ್ದಾರೆ.

Advertisement

ಬೆಂಬಲಬೆಲೆ ಯೋಜನೆಯಡಿಯಲ್ಲಿ ರೈತರಿಂದ ಹೆಸರು ಕಾಳು ಖರೀದಿ ಮಾಡಲು “ಎನ್‌ಸಿಸಿಎಫ್” ಸಂಸ್ಥೆಯ ಪರವಾಗಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ನಿಯಮಿತ ಚಿತ್ರದುರ್ಗ ಶಾಖೆಯ ಹೊಸದುರ್ಗ ತಾಲ್ಲೂಕಿನಲ್ಲಿ ಪಿಎಸಿಎಸ್ ಹೊಸದುರ್ಗ ರಸ್ತೆ ಮತ್ತು ಪಿಎಸಿಎಸ್ ಶ್ರೀರಾಂಪುರ ಹಾಗೂ ಹಿರಿಯೂರು ತಾಲ್ಲೂಕಿನಲ್ಲಿ ಪಿಎಸಿಎಸ್ ಐಮಂಗಲ ಮತ್ತು ಪಿಎಸಿಎಸ್ ಬಬ್ಬೂರು ಸಹಕಾರ ಸಂಘದಲ್ಲಿ ಹೆಸರು ಕಾಳು ನೋಂದಣಿಗೆ ಅವಕಾಶವಿದ್ದು, ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಸರ್ಕಾರದ ಆದೇಶದಂತೆ ಪ್ರತಿ ರೈತರಿಂದ ಪ್ರತಿ ಎಕರೆಗೆ 2 ಕ್ವಿಂಟಾಲ್‌ನAತೆ ಗರಿಷ್ಟ 10 ಕ್ವಿಂಟಾಲ್ ಹೆಸರು ಕಾಳು ಖರೀದಿ ಮಾಡಲು ಜಿಲ್ಲಾ ಟಾಸ್ಕ್ಪೋರ್ಸ್ನಲ್ಲಿ ತೀರ್ಮಾನಿಸಲಾಗಿದೆ. ಪ್ರೂಟ್ಸ್ ಐಡಿಯೊಂದಿಗೆ ರೈತರು ಬಯೋಮೆಟ್ರಿಕ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು.

Advertisement

ಹೆಚ್ಚಿನ ಮಾಹಿತಿಗಾಗಿ ಪಿಎಸಿಎಸ್ ಹೊಸದುರ್ಗ ರಸ್ತೆ ಸಹಕಾರ ಸಂಘದ ಕಾರ್ಯದರ್ಶಿ-9008558668, ಪಿಎಸಿಎಸ್ ಶ್ರೀರಾಂಪುರ ಸಹಕಾರ ಸಂಘದ ಕಾರ್ಯದರ್ಶಿ-9844820821, ಪಿಎಸಿಎಸ್ ಐಮಂಗಲ ಸಹಕಾರ ಸಂಘದ ಕಾರ್ಯದರ್ಶಿ-9986182809, ಪಿಎಸಿಎಸ್ ಬಬ್ಬೂರು ಸಹಕಾರ ಸಂಘದ ಕಾರ್ಯದರ್ಶಿ-8088146803 ಗೆ ಸಂಪರ್ಕಿಸುವAತೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಚಿತ್ರದುರ್ಗ ಶಾಖಾ ವ್ಯವಸ್ಥಾಪಕರು ತಿಳಿಸಿದ್ದಾರೆ.

Tags :
Advertisement