For the best experience, open
https://m.suddione.com
on your mobile browser.
Advertisement

ಉದ್ಯಾನವನಗಳ ನಿರ್ವಹಣೆ ಸಾರ್ವಜನಿಕರು ಸಹಕರಿಸಿ : ನಗರಸಭೆ ಅಧ್ಯಕ್ಷೆ ಸುಮಿತಾ ರಾಘವೇಂದ್ರ

04:22 PM Sep 29, 2024 IST | suddionenews
ಉದ್ಯಾನವನಗಳ ನಿರ್ವಹಣೆ ಸಾರ್ವಜನಿಕರು ಸಹಕರಿಸಿ   ನಗರಸಭೆ ಅಧ್ಯಕ್ಷೆ ಸುಮಿತಾ ರಾಘವೇಂದ್ರ
Advertisement

ಚಿತ್ರದುರ್ಗ, ಸೆಪ್ಟೆಂಬರ್. 29 : ನಗರದಲ್ಲಿನ ಉದ್ಯಾನ ವನಗಳನ್ನು ನಗರಸಭೆ ನಿರ್ಮಾಣ ಮಾಡಿದರೂ, ಸಸಿಗಳನ್ನು ಹಾಕಿದರೂ ಸ್ಥಳೀಯರು ಜವಾಬ್ದಾರಿ ತೆಗೆದುಕೊಂಡು ನಿರ್ವಹಣೆ ಮಾಡಬೇಕು ಆಗಲೇ‌ ಉದ್ಯಾನವನಗಳು ನಳನಳಿಸುತ್ತವೆ ಅಲ್ಲದೆ ನಗರದ ಸ್ವಚ್ಛತೆ, ನೈರ್ಮಲ್ಯ ಕಾಪಾಡುವಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಚಿತ್ರದುರ್ಗ ನಗರಸಭೆ ಅಧ್ಯಕ್ಷೆ ಸುಮಿತಾ ರಾಘವೇಂದ್ರ ಹೇಳಿದರು.

Advertisement
Advertisement

ನಗರದ ಐಯುಡಿಪಿ ಬಡಾವಣೆಯ ಸಾಧಿಕ್ ನಗರದ ಉದ್ಯಾನವನದಲ್ಲಿ ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಕಾರ್ಯಕ್ರಮದ ಅಂಗವಾಗಿ ತಾಯಿಯ ಹೆಸರಿನಲ್ಲಿ ಒಂದು ಗಿಡ ಎಂಬ ಘೋಷ ವಾಕ್ಯದಂತೆ ಗಿಡ ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರದ ಜತೆಯಲ್ಲಿ ಸಾರ್ವಜನಿಕರು ಇಚ್ಛಾಶಕ್ತಿಯಿಂದ ಸ್ವಯಂ ಪ್ರೇರಿತವಾಗಿ ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದಾಗ ಮಾತ್ರ ಸ್ವಚ್ಛತಾ ಅಭಿಯಾನ ಯಶಸ್ವಿಯಾಗಲು ಸಾಧ್ಯವಾಗಲಿದೆ ಎಂದು ಹೇಳಿದರು. ನಿಮ್ಮೊಂದಿಗೆ ನಗರಸಭೆ ಸದಾ ಇರುತ್ತದೆ. ಅನೇಕ ಸಂಘ ಸಂಸ್ಥೆಗಳು ಕೈ ಜೋಡಿಸುವ ಮೂಲಕ ನಗರದ ಸ್ವಚ್ಚತೆಯಾಗಿದೆ ಎಂದರು.

Advertisement

ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ಅವರು ಮಾತನಾಡಿ, ಸ್ವಚ್ಛತಾ ಹೀ ಸೇವಾ ಪಾಕ್ಷಿಕದ ಅರ್ಥಪೂರ್ಣ ವಾಗಿದೆ. ನಗರಸಭೆಯಲ್ಲಿ ಸ್ವಚ್ಛತಾ ಸೆಲ್ಪಿ ಪಾಯಿಂಟ್‌ಗಳನ್ನು ಸ್ಥಾಪಿಸಿ, ಸಾರ್ವಜನಿಕರಿಗೆ ಸೆಲ್ಫಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

Advertisement

ಸಾರ್ವಜನಿಕರಲ್ಲಿ ಸ್ವಚ್ಛತೆಯ ಜಾಗೃತಿ ಮೂಡಿಸಲು ಸೆ.14 ರಿಂದ ಅಕ್ಟೋಬರ್ 2 ರವರೆಗೆ ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಅಂದೋಲನ ನಡೆಯುತ್ತಿದ್ದು, ಸ್ವಚ್ಛತೆಯ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಶಾಲಾ-ಕಾಲೇಜು, ದೇವಾಲಯ, ಆಸ್ಪತ್ರೆ, ಉದ್ಯಾನವನಗಳಲ್ಲಿ ವಿವಿಧ ಬಗೆಯ ಕಾರ್ಯಕ್ರಮಗಳನ್ನು ಆಯೋಜಿಸಿ ಯಶಸ್ವಿಯಾಗಿದ್ದೇವೆ ನಾವೆಲ್ಲರೂ ಸೇರಿ ಚಿತ್ರದುರ್ಗ ನಗರವನ್ನು ಪರಿಪೂರ್ಣ ಸ್ವಚ್ಛತೆ, ಸುಂದರ ನಗರ ನಿರ್ಮಾಣಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಋಷಿ ಸಂಸ್ಕೃತಿ ಗುರುಕುಲ ಮಹಾಸಂಸ್ಥಾನದ ಆಡಳಿತಾಧಿಕಾರಿ ಮಾಲತೇಶ್ ಅರಸ್ ಮಾತನಾಡಿ, ಉದ್ಯಾನವನಗಳ ಉಳಿವಿನ ಮೂಲಕ ನಗರ ಶುದ್ದವಾಗುತ್ತದೆ. ತಾಯಿಯ ಹೆಸರಿಗೆ ಒಂದು ಗಿಡ ಪರಿಕಲ್ಪನೆ ಅತ್ಯಂತ ಶ್ರೇಷ್ಠವಾದುದು ಎಲ್ಲರೂ ಪಾರ್ಕಿನಲ್ಲಿ ಗಿಡ ನೆಟ್ಟು ಪೋಷಿಸಿದರೇ ನಿಮಗೆ ಉತ್ತಮ ಆರೋಗ್ಯ ಲಭಿಸುತ್ತದೆ. ನಗರಸಭೆ ಅಧಿಕಾರಿಗಳ ಪರಿಸರ ಕಾರ್ಯ ಅತ್ಯಂತ ಶ್ಲಾಘನೀಯ. ಗುರುಕುಲದ ಮೂಲಕ ಆಯುರ್ವೇದ ವನ ನಿರ್ಮಾಣ ಗುರಿ ಹೊಂದಲಾಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಜನರಲ್ಲಿ ಪರಿಸರದ ಪ್ರಜ್ಞೆಯ ಜೊತೆ ನೈರ್ಮಲ್ಯ ಶುಚಿತ್ವ ಕುರಿತು ಅರಿವು ಮೂಡಿಸುವ ಉದ್ದೇಶ ಉತ್ತಮವಾಗಿದೆ ಎಂದರು.

ಟಾರ್ಗೆಟ್ ಯುವ ವೇದಿಕೆ ಅಧ್ಯಕ್ಷ ಸಿದ್ದರಾಜು ಜೋಗಿ ಮಾತನಾಡಿ, ಸ್ವಚ್ಛತೆ ಎಂಬುದು ನಮ್ಮ ಮನೆಗಳಲ್ಲಿ ಆಗುವುದಷ್ಟೇ ಅಲ್ಲ. ಪ್ರತಿಯೊಬ್ಬರ ಮನೆ ಮನಗಳಲ್ಲಿಯೂ ಸ್ವಚ್ಚವಾದಗಲೇ ಪರಿಸರ ಶುದ್ಧವಾಗಲಿದೆ. ಮಹಾತ್ಮ ಗಾಂಧೀಜಿಯವರು ಸ್ವಚ್ಚ ಭಾರತದ ಕನಸನ್ನು ಹೊಂದಿದ್ದು ಅದನ್ನು ನನಸು ಮಾಡೋಣ. ನೀವು ನೆಡುವ ಗಿಡ ಮರವಾಗಲಿ ಹಾಗೆ ಕಾಪಾಡಿ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಸುಮಿತಾ ರಾಘವೇಂದ್ರ, ಪೌರಾಯುಕ್ತರಾದ ಎಂ.ರೇಣುಕಾ ಎಲ್ಲಾ ನಗರಸಭೆ ಸಿಬ್ಬಂದಿ ವರ್ಗ, ರೈತ ಮುಖಂಡರಾದ ತಿಪ್ಪೇಸ್ವಾಮಿ, ಋಷಿ ಸಂಸ್ಕೃತಿ ಗುರುಕುಲ ಮಹಾಸಂಸ್ಥಾನದ ಆಡಳಿತಾಧಿಕಾರಿ ಮಾಲತೇಶ್ ಅರಸ್, ಟಾರ್ಗೆಟ್ ಯುವ ವೇದಿಕೆ ಸಿದ್ದರಾಜು, ದೇವರಾಜ್ , ನಗರಸಭೆ ಪರಿಸರ ಅಭಿಯಂತರರಾದ ಜಾಫರ್, ಆರೋಗ್ಯ ನಿರೀಕ್ಷಕರುಗಳಾದ ಬಾಬುರೆಡ್ಡಿ, ಭಾರತಿ, ರುಕ್ಮಿಣಿ, ನಾಗರಾಜು, ಹೀನಾ ಕೌಸರ್, ನಿರ್ಮಲ, ಪೌರ ಕಾರ್ಮಿಕರು ಭಾಗವಹಿಸಿದ್ದರು.ಮತ್ತು ಅನೇಕ ಪರಿಸರ ಪ್ರೇಮಿಗಳು, ಸ್ಥಳೀಯರು ಹಾಜರಿದ್ದರು.

ಪ್ರಸ್ತುತ ವಾತಾವರಣದಲ್ಲಿ ಪ್ಲಾಸ್ಟಿಕ್ ಎಂಬುದು ಹೇರಳವಾಗಿ ಬೆರತು ಹೋಗಿದೆ. ಇದರಿಂದ ಕ್ಯಾನ್ಸರ್, ಹೃದಯಾಘಾತ ಮುಂತಾದ ಮಾರಣಾಂತಿಕ ಖಾಯಿಲೆಗಳು ಹರಡುತ್ತಿವೆ. ಹಾಗಾಗಿ ಇದರಿಂದ ಮುಕ್ತವಾಗಲು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು. ಕಸವನ್ನು ಎಲ್ಲೆಂದರಲ್ಲಿ ಎಸೆಯದೇ ಹಸಿಕಸ-ಒಣಕಸ ವಿಂಗಡಿಸಿ ನಗರಸಭೆ ವಾಹನಗಳಿಗೆ ನೀಡುವ ಮೂಲಕ ನಾವೆಲ್ಲರೂ ಮುಂದಿನ ಪೀಳಿಗೆಗೆ ಸುಂದರ ಹಾಗೂ ಸ್ವಚ್ಚವಾದ ವಾತವಾರಣ ಉಳಿಕೊಳ್ಳಬೇಕು ಎಂದು ಆಯುಕ್ತರಾದ ಎಂ.ರೇಣುಕಾ ಮನವಿ ಮಾಡಿದರು.

ಚಿತ್ರದುರ್ಗ ನಗರಸಭೆ ನೇತೃತ್ವದಲ್ಲಿ ಐಯುಡಿಪಿ ಬಡಾವಣೆಯ ಸಾಧಿಕ್ ನಗರ ಪಾರ್ಕ್ ಸ್ವಚ್ಚತಾ ಕಾರ್ಯ ಮತ್ತು ಸಸಿ ನೆಡುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ನಗರಸಭೆ ಅಧ್ಯಕ್ಷರಾದ ಸುಮಿತಾ ರಾಘವೇಂದ್ರ, ಪೌರಾಯುಕ್ತರಾದ ಎಂ.ರೇಣುಕಾ ಎಲ್ಲಾ ನಗರಸಭೆ ಸಿಬ್ಬಂದಿ ವರ್ಗ, ರೈತ ಮುಖಂಡರಾದ ತಿಪ್ಪೇಸ್ವಾಮಿ, ಋಷಿ ಸಂಸ್ಕೃತಿ ಗುರುಕುಲ ಮಹಾಸಂಸ್ಥಾನದ ಆಡಳಿತಾಧಿಕಾರಿ ಮಾಲತೇಶ್ ಅರಸ್, ಟಾರ್ಗೆಟ್ ಯುವ ವೇದಿಕೆ ಸಿದ್ದರಾಜು, ಮತ್ತು ಸಿಬ್ಬಂದಿ ಗಳು ಇದ್ದರು.

Tags :
Advertisement