For the best experience, open
https://m.suddione.com
on your mobile browser.
Advertisement

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ ಕಲ್ಪಿಸಿ : ಎ.ಬಿ.ವಿ.ಪಿ ಆಗ್ರಹ

03:58 PM Jan 16, 2024 IST | suddionenews
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ ಕಲ್ಪಿಸಿ   ಎ ಬಿ ವಿ ಪಿ ಆಗ್ರಹ
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

Advertisement

ಸುದ್ದಿಒನ್, ಚಿತ್ರದುರ್ಗ ಜ. 16 : ಜಿಲ್ಲೆಯಲ್ಲಿ ಬರುವ ಗ್ರಾಮಗಳಿಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ ಬಿಡುವ ಬಗ್ಗೆ ಹಾಗೂ ಪ್ರಸ್ತುತ ಮಾರ್ಗದ ಸಂಚಾರದಲ್ಲಿರುವ ಬಸ್ ಸರಿಯಾದ ಸಮಯಕ್ಕೆ ಸಂಚರಿಸುವಂತೆ ಸೂಕ್ತ ಕ್ರಮ ವಹಿಸಿ ಹಾಗೂ ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿನಿ ಸುಚಿತ್ರ ಇವರಿಗೆ ಪರಿಹಾರ ವ್ಯವಸ್ಥೆ ಕಲ್ಪಿಸಿಕೊಡುವಂತೆ ಎ.ಬಿ.ವಿ.ಪಿ ಆಗ್ರಹಿಸಿ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಪ್ರತಿಭಟನೆಯನ್ನು ನಡೆಸಿತು.

Advertisement

ಚಿತ್ರದುರ್ಗ ಜಿಲ್ಲೆಯಲ್ಲಿ ಬರುವ ಎಲ್ಲಾ ಗ್ರಾಮಗಳಲ್ಲಿ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಇರುವುದಿಲ್ಲ. ಆದ ಕಾರಣ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಶಾಲಾ ಕಾಲೇಜುಗಳಿಗೆ ಹೋಗಲು ತುಂಬಾ ತೊಂದರೆಯಾಗುತ್ತಿದ್ದು, ಇದರ ಜೊತೆಗೆ ಎಲ್ಲಾ ಬಸ್‍ಗಳು ರಾಷ್ಟ್ರೀಯ ಹೆದ್ದಾರಿಯ ಮಾರ್ಗದಲ್ಲಿ ಬರುತ್ತಿದ್ದು, ಇದನ್ನು ತಡೆದು ಹಳ್ಳಿಗಳ ಸರ್ವೀಸ್ ರಸ್ತೆಯ ಮಾರ್ಗದ ನಿಲ್ದಾಣಗಳಲ್ಲಿ ಬಸ್ ನಿಲ್ಲುವಂತೆ ಸೂಚಿಸಲು ಸಂಬಂಧಪಟ್ಟ ಚಾಲಕರಿಗೆ ಮತ್ತು ಕಂಡಕ್ಟರ್‍ಗಳಿಗೆ ಸೂಚಿಸಬೇಕು ಹಾಗೂ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಎ.ಬಿ.ವಿ.ಪಿ ಆಗ್ರಹಿಸಿತು.

ವಿಜಾಪುರ ಗೊಲ್ಲರಹಟ್ಟಿಯಲ್ಲಿ ಬೆಳಿಗ್ಗೆ 9.00ಗಂಟೆಗೆ ಸಿರಿಗೆರೆ ಸರ್ಕಾರಿ ಬಸ್ ನಿಲ್ಲಿಸದ ಕಾರಣ ವಿದ್ಯಾರ್ಥಿಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತು ಮತ್ತೊಂದು ಬಸ್‍ಗೆ ಕಾಯುತ್ತಿದ್ದಾಗ ಹಿಂಬದಿಯಲ್ಲಿ ಲಾರಿ ಬಂದು ವಿದ್ಯಾರ್ಥಿನಿಗೆ ಅಪಘಾತ ಮಾಡಿದ್ದು, ಆ ವಿದ್ಯಾರ್ಥಿನಿಯು ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ತಾವುಗಳು ಈ ವಿದ್ಯಾರ್ಥಿನಿಯ ಕುಟುಂಬಕ್ಕೆ ಪರಿಹಾರ ವ್ಯವಸ್ಥೆ ಕಲ್ಪಿಸಬೇಕು. ವಿಜಾಪುರ ಗೊಲ್ಲರಹಟ್ಟಿ ದಾವಣಗೆರೆ (ಸ್ನೇಹಮಹಿ) ಸೆಟ್ಲು ಬಸ್‍ಗಳು ಈ ಗ್ರಾಮಕ್ಕೆ ನಿಲ್ಲಸಬೇಕೆಂದು ಸೂಚಿಸಬೇಕು.

ಹಿರೇಕಬ್ಬಿಗೆರೆ ಗೊಲ್ಲರಹಟ್ಟಿ, ಕಬ್ಬಿಗೆರೆ, ಅಡವಿಗೊಲ್ಲರಹಳ್ಳಿ ಈ ಗ್ರಾಮಗಳಿಗೆ ಬೆಳಗ್ಗೆ 8.00ಕ್ಕೆ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸಬೇಕುಜಾಲಿಕಟ್ಟೆ, ಈರಜ್ಜನಹಟ್ಟಿ, ಸೊಲ್ಲಾಪುರ, ಈ ಗ್ರಾಮಗಳಿಗೆ ಬಸ್‍ಗಳ ವ್ಯವಸ್ಥೆ ಇರುವುದಿಲ್ಲ. ತುರ್ತಾಗಿ ಬಸ್‍ಗಳ ವ್ಯವಸ್ಥೆ ಕಲ್ಪಿಸುವುದು. ಹಿರಿಯೂರು, ಹುಳಿಯೂರು ಮಾರ್ಗದ ಗ್ರಾಮಗಳಿಗೆ ಬೆಳಗ್ಗೆ 8.00ಕ್ಕೆ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸಬೇಕು.ಸಿರಿಗೆರೆ ಮಾರ್ಗದ ಬರುವ ಗ್ರಾಮಗಳಿಗೆ ಬೆಳಗ್ಗೆ 8.00ಕ್ಕೆ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಸಿದ್ದೇಶ್‍ಯಾದವ್, ರಾಜ್ಯ ಕಾರ್ಯಕಾರಣಿ ಕನಕರಾಜ್, ಸುದರ್ಶನ್, ಮಹಿಳಾ ಪ್ರಮುಖ್ ಚೈತ್ರ, ಚಂದನ, ಸಾಮಾಜಿಕ ಜಾಲತಾಣ ಚಿತ್ರಸ್ವಾಮಿ, ಕಾರ್ಯಕರ್ತರಾದ ಗೌರಿಶಂಕರ, ಸುದೀಪ್, ಮಧು, ಕಾಟಲಿಂಗ, ಮನೋಜ್, ಮನೋಜ್.ಕೆ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advertisement
Tags :
Advertisement