Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಳ್ಳಕೆರೆ‌ಯಲ್ಲಿ ಅತಿಥಿ ಉಪನ್ಯಾಸಕರ ಪ್ರತಿಭಟನೆ : ತಹಶೀಲ್ದಾರ್ ಗೆ ಮನವಿ

09:44 PM Dec 01, 2023 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729

ಸುದ್ದಿಒನ್, ಚಳ್ಳಕೆರೆ, ಡಿಸೆಂಬರ್.01 : ಅತಿಥಿ ಉಪನ್ಯಾಸಕರಾಗಿ ಕಳೆದ ಹಲವು ವರ್ಷಗಳಿಂದ ಕನಿಷ್ಠ ವೇತನಕ್ಕೆ ದುಡಿಯುತ್ತಿದ್ದೇವೆ. ಆದರೆ ನಮಗೆ ಸೇವಾ ಭದ್ರತೆ ಇಲ್ಲದೆ ಉಪನ್ಯಾಸಕರ ಕುಟುಂಬಗಳು ಇಂದು ರಸ್ತೆಗೆ ಬಂದಿವೆ. ಆದ್ದರಿಂದ ರಾಜ್ಯ ಸರಕಾರ ಸಚಿವ ಸಂಪುಟದಲ್ಲಿ ಸೇವಾ  ಖಾಯಂಗೆ  ಶಿಫಾರಸ್ಸು ಮಾಡಬೇಕೆಂದು ಚಳ್ಳಕೆರೆ ನಗರದ ಹೆಚ್ ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ  ಅತಿಥಿ ಉಪನ್ಯಾಸಕರ ಸಂಘದ ಪದಾಧಿಕಾರಿಗಳು ಸೇವಾ ಭದ್ರತೆಗಾಗಿ ಅನಿರ್ದಿಷ್ಟವಾದಿ ಧರಣಿ ನಿರತ ಉಪನ್ಯಾಸಕರು ಇಂದು ತಾಲೂಕು ಕಛೇರಿಗೆ ಪ್ರತಿಭಟನೆ ಮೂಲಕ  ಆಗಮಿಸಿ ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು.

Advertisement

ನಗರದ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾ ಮೆರವಣಿಗೆ ವಾಲ್ಮೀಕಿ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ತಾಲೂಕು ಕಛೇರಿಗೆ ಆಗಮಿಸಿ ಶಿರಸ್ತೆದಾರ್ ಸದಾಶಿವಪ್ಪರವಿಗೆ ಮನವಿ ಪತ್ರ ಸಲ್ಲಿಸಿ ಸರಕಾರಕ್ಕೆ ರವಾನಿಸುವಂತೆ ಒತ್ತಾಯಿಸಿದರು.

ಇನ್ನೂ ಅತಿಥಿ ಉಪನ್ಯಾಸಕರಾದ ರಮೇಶ್ ಮಾತನಾಡಿ, ಸೇವಾ ಖಾಯಂ ಇಲ್ಲದೆ  ಸುಮಾರು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಅತ್ಯಂತ ಕಡಿಮೆ ಗೌರವ ವೇತನ ಪಡೆದು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪ್ರಾಮಾಣಿಕ ಸೇವಿಸಲ್ಲಿಸಿರುವ ಉಪನ್ಯಾಸಕರನ್ನು ಸರ್ಕಾರ ಪರ್ಯಾಯ ಕಲ್ಪಿಸಿ ಕರ್ನಾಟಕ ನಾಗರಿಕ ಸೇವೆಯಲ್ಲಿ ಸೇವಾ ಖಾಯಂ ಕಲ್ಪಿಸಬೇಕು.

ಜಿಓಸಿ ಈ ಭಾಗದಲ್ಲಿ ಸೇವೆ ಸಲ್ಲಿಸಿದವರನ್ನು ಹೇಗೆ ಸೇವೆ ವಿಲೀನ ಮಾಡಲಾಗಿದೆಯೋ ಅದೇ ರೀತಿ ಅತಿಥಿ ಉಪನ್ಯಾಸಕರನ್ನು ಸೇವಾ ವಿಲೀನ ಮಾಡಿಕೊಳ್ಳಬೇಕು.

ಈ ಹಿಂದೆ ನಮ್ಮ ಹಾಗೆಯೇ ಸರ್ಕಾರಿ ಕಾಲೇಜುಗಳಲ್ಲಿ ಹಂಗಾಮಿಯಾಗಿ ಕರ್ತವ್ಯ ನಿರ್ವಹಿಸಿದ ಪದನಾಮ ಬದಲಾದ ಸ್ಥಳೀಯ ಅಭ್ಯರ್ಥಿ ಗುತ್ತಿಗೆ ಆಧಾರಿತ, ಅರೆಕಾಲಿಕ ಉಪನ್ಯಾಸಕರಗಳನ್ನು ಸರ್ಕಾರ ಮಾನವೀಯತೆ ಆಧಾರದ ಮೇಲೆ ಸೂಕ್ತ ಕಾಯ್ದೆ ತಿದ್ದುಪಡಿ ಮಾಡಿ ಪದನಾಮ ಹೊಂದಿರುವವರನ್ನು ಕಾಯಂ ಮಾಡಿರುವ ನಿದರ್ಶನಗಳಿವೆ.

ಅದೇ ಮಾದರಿಯಲ್ಲಿ ಅತಿಥಿ ಉಪನ್ಯಾಸಕರ ಬಗ್ಗೆಯೂ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಒತ್ತಾಯ ಮಾಡಿದರು.

ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಬಸವರಾಜ್, ಯರಿಸ್ವಾಮಿ, ಸುರೇಶ್,  ಮಧು, ಶ್ರೀನಿವಾಸ್, ಅನಿಲ್ ಕುಮಾರ್, ರಮೇಶ್, ಶಿಲ್ಪ , ಸುಪ್ರಿತಾ, ಆಯುಷ್ಯ, ಪೂರ್ಣಿಮಾ, ಪುಷ್ಪಾ,  ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement
Tags :
challakereGuest Lecturerguest lecturersProtestಅತಿಥಿ ಉಪನ್ಯಾಸಕರ ಪ್ರತಿಭಟನೆಚಳ್ಳಕೆರೆತಹಶೀಲ್ದಾರ್
Advertisement
Next Article