For the best experience, open
https://m.suddione.com
on your mobile browser.
Advertisement

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಿಳ್ಳೇಕೆರೆನಹಳ್ಳಿ ಗ್ರಾಮಸ್ಥರ ಪ್ರತಿಭಟನೆ

04:52 PM Dec 21, 2023 IST | suddionenews
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಿಳ್ಳೇಕೆರೆನಹಳ್ಳಿ ಗ್ರಾಮಸ್ಥರ ಪ್ರತಿಭಟನೆ
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

Advertisement

ಸುದ್ದಿಒನ್, ಚಿತ್ರದುರ್ಗ ಡಿ.21 : ತಾಲ್ಲೂಕಿನ ಪಿಳ್ಳೇಕೆರೆನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯನ್ನು ವಸತಿ ರಹಿತರಿಗೆ ವಸತಿ ಸೌಲಭ್ಯ ಮತ್ತು ಗ್ರಾಮದ ಹಿಂದೂಗಳ ರುದ್ರಭೂಮಿಗೆ ನಗರಸಭೆಗೆ ಸೇರಿದ ಜಮೀನನ್ನು ಮಂಜೂರು ಮಾಡಿಕೂಡುವ ಬಗ್ಗೆ ಮತ್ತು ಸದರಿ ಸರ್ಕಾರಿ ಜಮೀನುಗಳನ್ನು ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ ಅಧಿಕಾರಿಗಳನ್ನು ವಜಾ ಮಾಡುವಂತೆ ಆಗ್ರಹಿಸಿ ಇಂದು ನಗರದಲ್ಲಿ ಪ್ರತಿಭಟನೆಯನ್ನು ಪೀಳ್ಳೇಕೇರನಹಳ್ಳಿ ಗ್ರಾಮಸ್ಥರು ನಡೆಸಿದರು.

Advertisement
Advertisement

ಚಿತ್ರದುರ್ಗ ತಾಲ್ಲೂಕು, ಮದಕರಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಪಿಳ್ಳೇಕೆರೆನಹಳ್ಳಿ ಗ್ರಾಮವು ಚಿತ್ರದುರ್ಗ ನಗರಕ್ಕೆ ಹೊಂದಿಕೊಂಡಿದ್ದು, ಇಲ್ಲಿ ಪರಿಶಿಷ್ಟ ಜಾತಿ/ಪಂಗಡ, ಹಿಂದುಳಿದ ವರ್ಗ ಹಾಗೂ ಸರ್ವಜನಾಂಗದವರು ವಾಸವಾಗಿದ್ದು, ಸರ್ಕಾರಿ ಹಿರಿಯ ಹಿರಿಯ ಪ್ರಾಥಮಿಕ ಪಾಠಶಾಲೆಯಿದ್ದು, ಮಲ್ಲಾಪುರ ಕೆರೆ ಹಂಚಿನ ಮುಳುಗಡೆ ಸಮೀಪವಾಗಿದ್ದು, ಈ ಸರ್ಕಾರಿ ಶಾಲೆಯನ್ನು ಚಿತ್ರದುರ್ಗ ನಗರಸಭೆಗೆ ಸೇರಿದ ಪಿಳ್ಳೇಕೆರೆನಹಳ್ಳಿ ಗ್ರಾಮದ ರಿ.ಸ.ನಂ.38/1 ರಲ್ಲಿ 4 ಎಕರೆ 28 ಗುಂಟೆ ರಿ.ಸ.ನಂ.38/2 4 ಎಕರೆ 36 ಗುಂಟೆ ಜಮೀನಿದ್ದು, ಸರ್ಕಾರಿ ಶಾಲೆಯು ಕೆರೆ ಹಂಚಿನ ಮುಳಗಡೆ ಹಂತದಲ್ಲಿರುವುದರಿಂದ ಈ ನಗರಸಭೆಗೆ ಸೇರಿದ ಜಾಗದಲ್ಲಿ ಸರ್ಕಾರಿ ಶಾಲೆಯನ್ನು ವರ್ಗಾಯಿಸಬೇಕೆಂದು ಮತ್ತು ಪಿಳ್ಳೇಕೆರೆನಹಳ್ಳಿ ಗ್ರಾಮದ ಹಿಂದೂಗಳಿಗೆ ರುದ್ರಭೂಮಿಯನ್ನು, ಉಳಿದ ಜಾಗದಲ್ಲಿ ಪಿಳ್ಳೇಕೆರೆನಹಳ್ಳಿ ಗ್ರಾಮದ ವಸತಿರಹಿತರಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡಬೇಕು ಮುಖ್ಯವಾಗಿ ಚಿತ್ರದುರ್ಗ ನಗರಸಭೆಗೆ ಸೇರಿದ ರಿ.ಸ.ನಂ.38/1 ರಲ್ಲಿ 4 ಎಕರೆ 28 ಗುಂಟೆ ಮತ್ತು ರಿ.ಸ.ನಂ.38/2 ರಲ್ಲಿ 4 ಎಕರೆ 36 ಗುಂಟೆ ಜಮೀನನ್ನು ಸರ್ಕಾರಿ ಅಧಿಕಾರಿಗಳು ಈ ಜಾಗವನ್ನು ದಿನಾಂಕ:19.06.2023 ರಂದು ಪೌತಿ ಖಾತೆ ಮೂಲಕ ಖಾಸಗಿಯವರಿಗೆ ಪಹಣಿ ಇತರೆ ದಾಖಲೆಗಳನ್ನು ಮಾಡಿಕೊಟ್ಟಿರುತ್ತಾರೆ. ಇದು 17.03.1947 ರಂದು ನಗರಸಭೆಗೆ ಆಕ್ಟೇರ್ ಆಗಿರುತ್ತದೆ.

ಈ ಜಮೀನಿನಲ್ಲಿ 2005 ರವರೆಗೆ ನಗರಸಭೆ ಹರಾಜು ಮುಖಾಂತರ ಸೊಪ್ಪು ಬೆಳೆಯಲು, ತರಕಾರಿ ಬೆಳೆಯಲು ಮಂಜೂರು ಮಾಡುತ್ತಾ ಬಂದಿರುತ್ತದೆ. ಅಧಿಕಾರಿಗಳ ಕೈ ತಪ್ಪಿನಿಂದ ಮೂಲ ವಾರಸುದಾರರ ಆಕ್ಟೇರ್ ಆಗಿರುವಂತಹ ಹೆಸರೇ ಪಹಣಿಯಲ್ಲಿ ಚಾಲ್ತಿಯಲ್ಲಿರುವುದರಿಂದ ಅಧಿಕಾರಿಗಳು ಶಾಮೀಲಾಗಿ ಖಾಸಗಿಯವರಿಗೆ ಖಾತೆ ಮಾಡಿಕೊಟ್ಟಿರುತ್ತಾರೆ.

ಜಮೀನಿನಲ್ಲಿ ಪೀಳ್ಳೇಕೆರನಹಳ್ಳಿ ಗ್ರಾಮದ ಹಿಂದುಗಳು ಸುಮಾರು 50 ವರ್ಷದಿಂದ ರುದ್ರಭೂಮಿಯಾಗಿ ಬಳಸಿಕೊಂಡು ಬಂದಿರುತ್ತೇವೆ. ಉಳಿದ ಜಮೀನಿನಲ್ಲಿ ಸುಮಾರು ವರ್ಷಗಳಿಂದ ವಸತಿ ನಹಿತ ಜನರು ಗುಡಿಸಲುಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಆದ್ದರಿಂದ ತಾವುಗಳು ಸರ್ಕಾರಿ ಶಾಲೆ ಮತ್ತು ಹಿಂದೂಗಳಿಗೆ ರುದ್ರಭೂಮಿ, ವಸತಿ ರಹಿತರಿಗೆ ವಸತಿ ಕಲ್ಪಿಸಿಕೊಡಬೇಕೆಂದು ಮತ್ತು ಸರ್ಕಾರಿ ಜಾಗವನ್ನು ಅಕ್ರಮವಾಗಿ ಖಾಸಗಿಯವರಿಗೆ ಪರಭಾರೆ ಮಾಡಿರುವಂತಹ ಅಧಿಕಾರಿಗಳನ್ನು ವಜಾಗೊಳಿಸಬೇಕೆಂದು ಈ ಮೂಲಕ ಪಿಳ್ಳೇಕೆರೆನಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಈ ಪ್ರತಿಭಟನೆಯ ನೇತೃತ್ವವನ್ನು ಪ್ರಕಾಶ್ ವಹಿಸಿದ್ದರು.  ಈಶಣ್ಣ, ಚನ್ನಣ್ಣ, ಭರತ್, ಶ್ರೀನಿವಾಸ್, ಅನುಸೂಯಮ್ಮ. ಲಕ್ಷ್ಮೀದೇವಿ, ನಾಗವೇಣಿ, ಪ್ರಸನ್ನ, ಪಾಲೇಶ್, ಸುಶ್ಮೀತ ಸೇರಿದಂತೆ ಇತರರು ಭಾಗವಹಿಸಿದ್ದರು.

Advertisement
Tags :
Advertisement