Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ದೇಶ ಪ್ರಗತಿ ಹೊಂದಿರುವುದು ಕಾಯಕ ಜೀವಿಗಳಿಂದಲೇ ಹೊರೆತು ರಾಜಕಾರಣಿಗಳಿಂದಲ್ಲ : ಬಸವಪ್ರಭು ಸ್ವಾಮೀಜಿ

04:55 PM Jun 30, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಜೂನ್.30 :
ನಮ್ಮ ದೇಶ ಪ್ರಗತಿಯನ್ನು ಹೊಂದಿರುವುದು ಕಾಯಕ ಜೀವಿಗಳಿಂದಲೇ ಹೊರೆತು ರಾಜಕಾರಣಿಗಳಿಂದ ಅಲ್ಲ ಎಂದು ಮುರುಘಾರಾಜೇಂದ್ರ ಬೃಹನ್ಮಠದ ಉಸ್ತುವಾರಿ ಶ್ರೀಗಳಾದ ಬಸವಪ್ರಭು ಶ್ರೀಗಳು ತಿಳಿಸಿದರು.

Advertisement

ನಗರದ ಮೆಜೆಸ್ಟಿಕ್ ಕಟ್ಟಡದಲ್ಲಿ ಭಾನುವಾರ ನೂತನವಾಗಿ ಪ್ರಾರಂಭಿಸಲಾದ ಶ್ರಮಜೀವಿ ಕಟ್ಟಡ ಮತ್ತು ಕೂಲಿ ಕಾರ್ಮಿಕ ಸೇವಾ ಪಡೆಯ ರಾಜ್ಯ ಸಮಿತಿಯ ಸಂಘದ ನೂತನ ಕಚೇರಿಯ ಉದ್ಘಾಟನೆ, ಶಾಸಕರಾದ ಕೆ.ಸಿ.ವಿರೇಂದ್ರ ಪಪ್ಪಿಯವರ 50ನೇ ಹುಟ್ಟು ಹಬ್ಬ ಹಾಗೂ ಆದಿ ಜಾಂಬವ ಅಭೀವೃದ್ದಿ ನಿಗಮಕ್ಕೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜಿ.ಎಸ್.ಮಂಜುನಾಥ್‍ರವರಿಗೆ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಕೂಲಿ ಕಾರ್ಮಿಕರು ಶ್ರಮ ಜೀವಿಗಳಾಗಿದ್ದಾರೆ. ಕಾಯಕದ ಮೇಲೆ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. 12ನೇ ಶತಮಾನದಲ್ಲಿ ಬಸವಣ್ಣರವರು ಕಾಯಕ ಜನರನ್ನು ಕೂಡಿಸಿಕೊಂಡು ಅನುಭವ ಮಂಟಪವನ್ನು ನಿರ್ಮಾಣ ಮಾಡಿದರು. ದಿನ ನಿತ್ಯದ ಕಾಯಕದ ನಂತರ ಸಭೆಯನ್ನು ನಡೆಸಿದ ಶರಣರು ತಮ್ಮ ಅನುಭವನ್ನು ಮಂಟಪದಲ್ಲಿ ಹಂಚುವುದರ ಮೂಲಕ ವಚನಗಳನ್ನು ಬರೆದಿದ್ದಾರೆ. ಇಂದಿನ ಸಂವಿಧಾನ 12ನೇ ಶತಮಾನದ ಅನುಭವ ಮಂಟಪವಾಗಿದೆ ಅಲ್ಲಿ ಎಲ್ಲಾ ಜಾತಿಯವರು ಎಲ್ಲಾ ಕೆಲಸವನ್ನು ಮಾಡುವವರು ಸಹಾ ಇದು ಅವರಿಗೆ ಸಮಾನತೆಯನ್ನು ನೀಡಲಾಗಿತು. ಅಂದಿನ ಸರ್ವರಿಗೂ ಸಮಪಾಲು ಸಮಬಾಳು ಎಂಬ ಇಂದಿನ ವಾಕ್ಯ 12ನೇ ಶತಮಾನದಲ್ಲಿಯೇ ಇತ್ತು ಎಂದರು.

ಬಸವಣ್ಣರವರು ಹುಟ್ಟಿದಕ್ಕಿಂತ ಸಮಾಜದಲ್ಲಿ ಅಷ್ಠಾಗಿ ಸರಿಯಿರಲಿಲ್ಲ, ದಲಿತರು ರಸ್ತೆಯಲ್ಲಿ ಓಡಾಡುವ ಹಾಗೇ ಇರಲ್ಲಿಲ್ಲ. ಓಡಾಡಿದರು ಸಹಾ ಹಿಂದೆ ಕಸವರಿಕೆಯನ್ನು ಕಟ್ಟಿಕೊಂಡು ಕೈಯಲ್ಲಿ ಮಡಿಕೆಯನ್ನು ಇಟ್ಟುಕೊಂಡು ಹೋಗಬೇಕಿತ್ತು, ಬಸವಣ್ಣರವರು ಬಂದ ಮೇಲೆ ಇದಕ್ಕೆ ಮುಕ್ತಿಯನ್ನು ಹಾಡಲಾಯಿತು, ಶ್ರಮ ಜೀವಿಗಳಿಗೆ ಮಾನತ್ಯೆಯನ್ನು ನೀಡಲಾಯಿತು. ಒಂದು ಜಾತಿಯವರು ಶ್ರೇಷ್ಠ ಉಳಿದವರು ಕನಿಷ್ಠ ಎಂಬ ಭಾವನೆ ಮೂಡಿತ್ತು. ಸಮಾನತೆ ಇರಲಿಲ್ಲ, ವರ್ಗ, ವರ್ಣ ಬೇದ ಇತ್ತು ಇದನ್ನು ಹೋಗಲಾಡಿಸಲಿ ಬಸವಣ್ಣ ರವರು ಶ್ರಮವನ್ನು ಹಾಕಿದ ಪರಿಣಾಮ ಇಂದು ನಾವುಗಳು ಆರಾಮದ ಜೀವನವನ್ನು ಸಾಗಿಸುತ್ತಿದೆವೆ ಎಂದು ಶ್ರೀಗಳು ತಿಳಿಸಿದರು.

ಬಸವಣ್ಣರವರ ತತ್ವ ಆದರ್ಶಗಳನ್ನು ಬದುಕಿನಲ್ಲಿ ಆಳವಡಿಸಿಕೊಳ್ಳದಿದ್ದರೆ ಆವುಗಳನ್ನು ಆಚರಣೆಗೆ ತರಾದಿದ್ದರೆ ಉದ್ದಾರವಾಗಲು ಸಾಧ್ಯವಿಲ್ಲ, ಕಾಯಕದಿಂದಲೇ ಲಕ್ಷ್ಮೀ ಒಲಿಯುತ್ತಾಳೆ ಬೇರೆ ಕೆಟ್ಟ ಮಾರ್ಗಗಳಿಂದ ಆಕೆ ಒಲಿಯುವುದಿಲ್ಲ, ಕಾಯಕದಿಂದ ಮಾತ್ರ ಜೀವನ ಪ್ರಗತಿಯನ್ನು ಕಾಣಲು ಸಾಧ್ಯವಿದೆ. ದುಡಿದ ಹಣದಲ್ಲಿ ಪ್ರಸಾದವನ್ನು ನೀಡಿ ಬೇರೆಯವರಿಗೆ ದಾನವನ್ನು ಮಾಡುವುದರ ಮೂಲಕ ಬದುಕನ್ನು ಸಾರ್ಥಕ ಮಾಡಿಕೊಳ್ಳಿ ಎಂದ ಅವರು, ಸರ್ಕಾರವೂ ಸಹಾ ಶ್ರಮ ಜೀವಿಗಳ ಕಡೆಗೆ ನೋಡಬೇಕಿದೆ ಅವರಿಗೆ ಅಗತ್ಯವಾದ ಸೌಲಭ್ಯಗಳನ್ನು ನೀಡಬೇಕಿದೆ, ಸಹಾಯವನ್ನು ಮಾಡುವುದರ ಮೂಲಕ ಅವರು ಆರ್ಥೀಕ ಮಟ್ಟವನ್ನು ಸುಧಾರಿಸಬೇಕಿದೆ ಎಂದು ಬಸವಪ್ರಭು ಶ್ರೀಗಳು ತಿಳಿಸಿದರು.

ಸಮಾರಂಭದ ಸಾನಿಧ್ಯವನ್ನು ಬಸವನಾಗ್ತಿದೇವ ಶ್ರೀಗಳು, ಸರ್ದಾರ್ ಸೇವಾಲಾಲ್ ಶ್ರೀಗಳು, ಸಂಗಾಮನಂದ ಶ್ರೀಗಳು ವಹಿಸಿದ್ದರು. ಈ ಕಾರ್ಯಕ್ರಮವನ್ನು ಶ್ರಮಜೀವಿ ಕಟ್ಟಡ ಮತ್ತು ಕೂಲಿ ಕಾರ್ಮಿಕ ಸೇವಾ ಪಡೆಯ ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜನ್, ಉಪಾಧ್ಯಕ್ಷರಾದ ತಿಪ್ಪೇಸ್ವಾಮಿ, ಕಾರ್ಯದರ್ಶಿ ಶಿವಕುಮಾರ್ ಸಹ ಕಾರ್ಯದರ್ಶಿ ನಾಗರಾಜ್, ನಿರ್ದೇಶಕರಾದ ಸೋಮಶೇಖರ್, ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಲಲಿತಾ ಕೃಷ್ಣಮೂರ್ತಿ, ಭಾಗವಹಿಸಿದ್ದರು.

Advertisement
Tags :
basava prabhu swamijibengaluruchitradurgacountrypoliticiansProgresssuddionesuddione newsಕಾಯಕ ಜೀವಿಚಿತ್ರದುರ್ಗದೇಶಪ್ರಗತಿಬೆಂಗಳೂರುರಾಜಕಾರಣಿಶ್ರೀಬಸವಪ್ರಭು ಸ್ವಾಮೀಜಿಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article