Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಪ್ರೊ.ಎಚ್.ಲಿಂಗಪ್ಪ ಸಾಮಾಜಿಕ ಬದ್ದತೆಯುಳ್ಳ ಬರಹಗಾರ : ಡಾ.ಬಂಜಗೆರೆ ಜಯಪ್ರಕಾಶ್

07:44 PM Sep 15, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 15 : ಸಾಮಾಜಿಕ ಬದ್ದತೆ ಬರಹಗಾರನಿಗೆ ಇರಬೇಕು. ಅವಕಾಶ ವಂಚಿತರು ಕೆಲವೊಮ್ಮೆ ರಾಜಿಕಬೂಲಿಗೆ ಒಳಗಾದರೆನ್ನುವ ಅಪವಾದ ಬರುವುದು ಸಹಜ ಎಂದು ಜನಪರ ಹೋರಾಟಗಾರ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್ ಹೇಳಿದರು.

Advertisement

ಐ.ಎಂ.ಎ.ಹಾಲ್‍ನಲ್ಲಿ ರಶ್ಮಿ ಪ್ರಕಾಶನ ಭಾನುವಾರ ಹಮ್ಮಿಕೊಂಡಿದ್ದ ಮನಸ್ವಿ ಪ್ರೊ.ಎಚ್.ಲಿಂಗಪ್ಪನವರ ಬದುಕು-ಬರಹ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರೊ.ಎಚ್.ಲಿಂಗಪ್ಪನವರು ಇಳಿಯ ವಯಸ್ಸಿನಲ್ಲಿಯೂ ಕೃತಿಗಳನ್ನು ಬರೆಯುತ್ತಿರುವುದು ದೊಡ್ಡ ಸಾಧನೆ. ಲೇಖನ ಸಂಗ್ರಹಿಸುವ, ವಿಭಜಿಸುವ, ವಿನ್ಯಾಸ ಆಕರ್ಷಣೀಯವಾದೆ. ದಮನಿತರ ಪರ ಸದಾ ಚಿಂತಿಸುವ ಆಲೋಚನೆಯನ್ನಿಟ್ಟುಕೊಂಡು ಕೃತಿಗಳನ್ನು ಬರೆದಿದ್ದಾರೆ. ಧಮನಿತ, ಶೋಷಣೆಗೆ ಒಳಗಾದವರು ಉನ್ನತ ಸ್ಥಾನಕ್ಕೆ ಹೋದಾಗ ಮಾನವೀಯತೆಯನ್ನು ಮರೆಯುತ್ತಾರೆ. ದೇಶಕ್ಕೆ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಜೀವಿತಾವಧಿಯ ಕೊನೆ ಕಾಲದಲ್ಲಿ ಸಾಕಷ್ಟು ಖಿನ್ನತೆ, ಹಿಂಸೆ ಅನುಭವಿಸಿದರು. ಆಧ್ಯಾತ್ಮಿಕ ಸಾಧನವನ್ನು ಸಮಾಜಕ್ಕೆ ಕೊಡುಗೆಯಾಗಿ ಕೊಡಬೇಕೆಂಬುದು-ಅವರ ಆಸೆಯಾಗಿತ್ತು ಎಂದರು.

ಬರಹಗಾರ ಜಾಗೃತಿಯಿಂದ ಜೀವನದ ಸಾಧನೆ, ವಿಧಾನಗಳನ್ನು ರೂಢಿಸಿಕೊಳ್ಳಬೇಕು. ಅದಕ್ಕಾಗಿ ಕರ್ತವ್ಯ ಪ್ರಜ್ಞೆ ಮುಖ್ಯ. ಆ ವಿಚಾರದಲ್ಲಿ ಪ್ರೊ.ಎಚ್.ಲಿಂಗಪ್ಪ ಸಾಮಾಜಿಕ ಬದ್ದತೆ ಉಳಿಸಿಕೊಂಡಿದ್ದಾರೆ. ಬರವಣಿಗೆಯ ಜೊತೆ ದಲಿತ ಪರ ಚಿಂತಕರು, ಹೋರಾಟಗಾರರು ಎಂದು ಬಣ್ಣಿಸಿದರು.

ಜಾನಪದ ವಿದ್ವಾಂಸ ಡಾ.ಪಿ.ಬಿ.ಮೀರಾಸಾಬಿಹಳ್ಳಿ ಶಿವಣ್ಣ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡುತ್ತ ಸಾಹಿತ್ಯಕ್ಕೆ ಸಾಂಸ್ಕøತಿಕ ಬಡತನವಿದೆ. ಕಥೆ, ಕಾದಂಬರಿ ಬರೆಯುವವರಿದ್ದಾರೆ. ಷಟ್ಪದಿಯಲ್ಲಿ ಬರೆಯುವವರು ಕಮ್ಮಿ. ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಗ್ರಂಥದ ಮೂಲಕ ಅಭಿನಂದಿಸುವುದು ಸಂಪ್ರದಾಯ. ನಲವತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರೊ.ಎಚ್.ಲಿಂಗಪ್ಪ ಬರೆದು ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬುದ್ದ, ಬಸವ, ಅಂಬೇಡ್ಕರ್, ಅಲ್ಲಮ, ವಚನಕಾರರನ್ನು ತಮ್ಮ ಬರವಣಿಗೆಯ ಮೂಲಕ ಹೊಸ ಹೊಸ ರೀತಿಯಲ್ಲಿ ವಿಶ್ಲೇಷಿಸಿದ್ದಾರಲ್ಲದೆ ದಲಿತ ವಚನಕಾರರ ಕಡೆ ಹೆಚ್ಚು ಗಮನ ಕೊಟ್ಟಿದ್ದಾರೆ. ಮನಸ್ವಿ ಎಂದರೆ ಮುಕ್ತ. ಇದೊಂದು ಅನುಭವ ಕೊಡುವ ಕೃತಿ ಎಂದು ಪ್ರಶಂಶಿಸಿದರು.

ಬಂಡಾಯ ಸಾಹಿತಿ ಡಾ.ಸಿ.ಶಿವಲಿಂಗಪ್ಪ ಮಾತನಾಡಿ ಸೃಜನಶೀಲ ಮಾರ್ಗದರ್ಶಿ, ಅಭಿವ್ಯಕ್ತಿ ಬರವಣಿಗೆ ಸಮಾಜಕ್ಕೆ ಮುಖ್ಯ. ಬರಹಗಾರನ ಬದುಕು ಅಂತಃಸತ್ವದಿಂದ ಕೂಡಿದಾಗ ಮಾತ್ರ ಅನನ್ಯ, ಆಧರಣೀಯ, ಅನುಕರಣೀಯವಾಗಿರುತ್ತದೆ. ಸಮಾಜ ಸುಧಾರಣೆ ಉನ್ನತೀಕರಣಗೊಳಿಸಲು ಅಭಿನಂದನಾ ಗ್ರಂಥ ನೆರವಾಗಲಿದೆ ಎಂದು ತಿಳಿಸಿದರು.

ಲೇಖಕನ ಬದುಕು-ಬರಹ ಸಮನ್ವಯ ಅನುಸಂಧಾನವಾಗಬೇಕು. ಕೃತಿ ತರುವುದರ ಜೊತೆ ಲೇಖಕನಿಗೆ ಸಾಮಾಜಿಕ ಹೊಣೆಗಾರಿಕೆಯೂ ಇರಬೇಕು. ಪ್ರೊ.ಎಚ್.ಲಿಂಗಪ್ಪನವರ ಬರಹ ಕಲಾತ್ಮಕ, ಸುಂದರ ಸ್ಪೂರ್ತಿದಾಯಕವಾಗಿದೆ ಎಂದು ಹೇಳಿದರು.

ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರೊ.ಜಿ.ಪರಮೇಶ್ವರಪ್ಪ ಮಾತನಾಡಿ ಪ್ರೊ.ಎಚ್.ಲಿಂಗಪ್ಪನವರ ಬದುಕು-ಬರಹದಲ್ಲಿ ತಾಯ್ತನ ಅಡಗಿದೆ. ಬುದ್ದ, ಬಸವ, ಅಂಬೇಡ್ಕರ್‍ರವರಲ್ಲಿದ್ದ ತಾಯ್ತನವನ್ನು ಅಧ್ಯಯನ ಮಾಡಿ ಲೇಖಕರು ಪುಸ್ತಕ ಹೊರ ತಂದಿದ್ದಾರೆ. ಸಮಾನತೆ ತತ್ವ ಈ ಕೃತಿಯಲ್ಲಿದೆ ಎಂದು ಗುಣಗಾನ ಮಾಡಿದರು.

ಸ್ನಾತಕೋತ್ತರ ವಿಭಾಗದ ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಪ್ರಾಸ್ತಾವಿಕವಾಗಿ ಮಾತನಾಡುತ್ತ ಸಾಮಾಜಿಕ ಸಮಾನತೆ, ಮೌಲ್ಯ, ತಳಸಮುದಾಯದ ಗಟ್ಟಿತನ ವಚನ ಸಾಹಿತ್ಯ ಕುರಿತು ಬರೆಯಲು ಮಾತನಾಡಲು ಎಲ್ಲರಿಗೂ ಹಕ್ಕಿದೆ. ಬರವಣಿಗೆಗೆ ನಿರ್ಬಂಧವಿಲ್ಲ. ಬರೆಯಲು ಬಯಲಿದೆ. ಆದರೆ ಬರೆಯುವ ತಾಕತ್ತಿರಬೇಕು. ಪ್ರೊ.ಎಚ್.ಲಿಂಗಪ್ಪನವರು ತಮ್ಮ ಬರವಣಿಗೆ ಮೂಲಕ ಹಾಸ್ಯ, ಮೌಲ್ಯ ಭರಿತ ಸಾಹಿತ್ಯ, ಸಾಮಾಜಿಕ ಬದಲಾವಣೆ ಚರ್ಚೆ ಕುರಿತು ಅನೇಕ ಕೃತಿಗಳನ್ನು ಕೊಟ್ಟಿದ್ದಾರೆ. ಪ್ರತಿಯೊಬ್ಬರು ತಾವು ಬದುಕಿನ ಹಿಂದೆ ಒಮ್ಮೆ ತಿರುಗಿ ನೋಡಿದಾಗ ಅನೇಕ ಪ್ರಸಂಗಗಳು ನೆನಪಿಗೆ ಬರುತ್ತವೆ ಎಂದು ನುಡಿದರು.

ಬದುಕು-ಬರಹಕ್ಕೆ ನಂಟಿದೆ. ಆದರೆ ಮನುಷ್ಯ ಸ್ವಾರ್ಥಿ, ಏಕಾಂಗಿ, ಒಂಟಿಯಾಗಿ ಬದುಕುತ್ತಿದ್ದಾನೆ. ಮನುಷ್ಯ-ಮನುಷ್ಯರ ನಡುವಿನ ಸಂಬಂಧ ಪ್ರಸ್ತುತ ಸಮಾಜಕ್ಕೆ ಮುಖ್ಯ ಎಂದು ಹೇಳಿದರು.

ಲೇಖಕ ಪ್ರೊ.ಎಚ್.ಲಿಂಗಪ್ಪ ಮಾತನಾಡಿ ಬುದ್ದ, ಬಸವ ಪ್ರಜ್ಞೆ, ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮಾರ್ಗದಲ್ಲಿ ನಂಬಿಕೆಯಿಟ್ಟುಕೊಂಡು ಇಲ್ಲಿಯವರೆಗೂ ಎಲ್ಲಾ ಕೃತಿಗಳನ್ನು ಬರೆದುಕೊಂಡು ಬರುತ್ತಿದ್ದೇನೆ. ನನ್ನ ಬರವಣಿಗೆಗೆ ಗುರುಗಳು, ಶಿಷ್ಯಂದಿರು, ಅಭಿಮಾನಿಗಳ ಸಹಕಾರವಿದೆ, ಕುಂಟುಬದ ಪ್ರೋತ್ಸಾವಿರುವುದರಿಂದ ನಲವತ್ತಕ್ಕೂ ಹೆಚ್ಚು ಕೃತಿಗಳನ್ನು ಬರೆಯಲು ಅವಕಾಶವಾಯಿತೆಂದು ಎಲ್ಲರನ್ನು ಸ್ಮರಿಸಿಕೊಂಡರು.

ಡಾ.ಬಿ.ಎಂ.ಗುರುನಾಥ್ ಮತ್ತು ಜಾನಪದ ಹಾಡುಗಾರ ಹರೀಶ್ ಇವರುಗಳು ಪ್ರಾರ್ಥಿಸಿದರು. ಇತಿಹಾಸ ಪ್ರಾಧ್ಯಾಪಕ ಎಸ್.ಎನ್.ಮಹಂತೇಶ್ ನಿರೂಪಿಸಿದರು.

ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ, ಶ್ರೀಮತಿ ಯಶೋದ ಬಿ.ರಾಜಶೇಖರಪ್ಪ, ಟಿ.ವಿ.ಸುರೇಶ್‍ಗುಪ್ತ, ಜಿ.ಎಸ್.ಉಜ್ಜಿನಪ್ಪ, ದೊಡ್ಡಮಲ್ಲಯ್ಯ, ಬಿ.ಪಿ.ತಿಪ್ಪೇಸ್ವಾಮಿ

ಮುದ್ದುರಂಗಪ್ಪ, ಸಹಾಯಕ ಪ್ರಾಧ್ಯಾಪಕ ಸಂಜೀವಕುಮಾರ್ ಪೋತೆ, ಲಕ್ಷ್ಮಿಕಾಂತ್ ಸೇರಿದಂತೆ ಪ್ರೊ.ಎಚ್.ಲಿಂಗಪ್ಪನವರು ಅಪಾರ ಅಭಿಮಾನಿಗಳು ಹಾಗೂ ಕುಟುಂಬದವರು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು.

 

Advertisement
Tags :
bengaluruchitradurgadr. Banjagere JayaprakashProf. H. LingappaSocially Committed Writersuddionesuddione newsಚಿತ್ರದುರ್ಗಡಾ.ಬಂಜಗೆರೆ ಜಯಪ್ರಕಾಶ್ಪ್ರೊ.ಎಚ್.ಲಿಂಗಪ್ಪಬೆಂಗಳೂರುಸಾಮಾಜಿಕ ಬದ್ದತೆಯುಳ್ಳ ಬರಹಗಾರಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article