For the best experience, open
https://m.suddione.com
on your mobile browser.
Advertisement

ಪ್ರೊ.ಡಿ.ಅಂಜಿನಪ್ಪ ಒಬ್ಬ ಪ್ರತಿಭಾವಂತ, ಮಿತ ಭಾಷಿ, ನಿಷ್ಟುರತೆಯ ಸ್ವಭಾವದ ಅಪರೂಪದ ವ್ಯಕ್ತಿ : ಡಾ.ಶಿವಲಿಂಗಪ್ಪ ಮೀರಾಸಾಬಿಹಳ್ಳಿ

05:27 PM Mar 26, 2024 IST | suddionenews
ಪ್ರೊ ಡಿ ಅಂಜಿನಪ್ಪ ಒಬ್ಬ ಪ್ರತಿಭಾವಂತ  ಮಿತ ಭಾಷಿ  ನಿಷ್ಟುರತೆಯ ಸ್ವಭಾವದ ಅಪರೂಪದ ವ್ಯಕ್ತಿ   ಡಾ ಶಿವಲಿಂಗಪ್ಪ ಮೀರಾಸಾಬಿಹಳ್ಳಿ
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

Advertisement

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 26  : ಪ್ರೊ.ಡಿ.ಅಂಜಿನಪ್ಪನವರ ಅಕಾಲಿಕ ನಿಧನ ಸಾಹಿತ್ಯ ಲೋಕಕ್ಕೆ ದೊಡ್ಡ ನಷ್ಟ ಎಂದು ಜಾನಪದ ವಿದ್ವಾಂಸ ಡಾ.ಮೀರಾಸಾಬಿಹಳ್ಳಿ ಶಿವಣ್ಣ ನೊಂದು ನುಡಿದರು.

Advertisement
Advertisement

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಎಂ.ಜಯಣ್ಣ ಚಾರಿಟಬಲ್ ಟ್ರಸ್ಟ್, ಅರುಂಧತಿ ಪ್ರಕಾಶನ, ಪ್ರೊ.ಡಿ.ಅಂಜಿನಪ್ಪ ಒಡನಾಡಿಗಳು ವಿದ್ಯಾರ್ಥಿ ಬಳಗ ಇವರುಗಳ ಸಂಯುಕ್ತಾಶ್ರಯದಲ್ಲಿ ರೋಟರಿ ಬಾಲಭವನದಲ್ಲಿ ಏರ್ಪಡಿಸಲಾಗಿದ್ದ ಪ್ರೊ.ಡಿ.ಅಂಜಿನಪ್ಪ ಜೀವ ಚಿಗುರಿನ ಧ್ಯಾನ ನುಡಿನಮನ,ಕೃತಿಗಳ ಅವಲೋಕನ, ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.

ಪ್ರೊ.ಡಿ.ಅಂಜಿನಪ್ಪ ಆರು ವರ್ಷಗಳ ಅವಧಿಯಲ್ಲಿ ಐದು ಕೃತಿಗಳನ್ನು ಪ್ರಕಟಿಸಿರುವುದು ಸುಲಭದ ಕೆಲಸವಲ್ಲ. ಅನಾರೋಗ್ಯಕ್ಕೆ ತುತ್ತಾಗಿ ಎಲ್ಲರನ್ನು ಅಗಲಿರುವುದು ಬೇಸರ ತಂದಿದೆ. ಅವರ ಅಪ್ರಕಟಿತ ಕೃತಿಗಳನ್ನು ಕುಟುಂಬದವರು ನೀಡಿದರೆ ಪ್ರಕಟಗೊಳಿಸುತ್ತೇನೆ. ನನಗೆ ಪರಮಾತ್ಮ ಶಿಷ್ಯನಾಗಿದ್ದ ಪ್ರೊ.ಡಿ.ಅಂಜಿನಪ್ಪ ನನ್ನ ಮೇಲೆ ಅಪಾರವಾದ ಪ್ರೀತಿ ಗೌರವವಿಟ್ಟುಕೊಂಡಿದ್ದ. ಅದ್ಬುತವಾದ ವ್ಯಕ್ತಿತ್ವ ಆತನದು. ಬೆಂಗಳೂರಿನ ಸಿ.ವಿ.ಜಿ.ಪಬ್ಲಿಕೇಷನ್ ಚಂದ್ರು ಜಿಲ್ಲೆಯ ಅನೇಕ ಲೇಖಕರ ಪುಸ್ತಕಗಳನ್ನು ಪ್ರಕಟಿಸಿದ್ದಾರೆಂದು ಶ್ಲಾಘಿಸಿದರು.

ಸಾಹಿತಿ ಹಾಗೂ ಚಿಂತಕರಾದ ಡಾ.ಶಿವಲಿಂಗಪ್ಪ ಮೀರಾಸಾಬಿಹಳ್ಳಿ ಮಾತನಾಡಿ ಪ್ರೊ.ಡಿ.ಅಂಜಿನಪ್ಪ ಒಬ್ಬ ಪ್ರತಿಭಾವಂತ ಮಿತ ಭಾಷಿ, ನಿಷ್ಟುರತೆಯ ಸ್ವಭಾವ. ಗಮನಾರ್ಹವಾದ ಹೊಸತನದ ವಿಮರ್ಶಕ. ಅವರ ಕೃತಿಗಳನ್ನು ಓದಿದಾಗ ಬರವಣಿಗೆಯ ಎಂತಹ ಸಾಮರ್ಥ್ಯ ಶಕ್ತಿ ಇತ್ತು ಎನ್ನುವುದು ಗೊತ್ತಾಗುತ್ತದೆ. ಮಿಮರ್ಶಕನಿಗೆ ಮುಕ್ತಾಯವಿಲ್ಲದ ಅಧ್ಯಯನ ಬೇಕು. ಬರಹಗಾರನಿಗೆ ಹಾಗೂ ವಿಮರ್ಶಕನಿಗೆ ಸಾಮಾಜಿಕ ಹೊಣೆಗಾರಿಕೆಯಿರಬೇಕು. ಕವಿ, ಲೇಖಕ ಕೃತಿಗಳನ್ನು ರಚಿಸಬೇಕಾದರೆ ಮುಖ್ಯವಾದ ಕಾರಣಗಳಿರುತ್ತವೆ. ವಿಮರ್ಶಯೆ ಪಥವನ್ನು ಪ್ರೊ.ಡಿ.ಅಂಜಿನಪ್ಪ ತಾನೇ ಸೃಷ್ಟಿಕೊಂಡವನು. ಸಮ ಸಮಾಜ ಸಾಮಾಜಿಕ ನ್ಯಾಯದ ಪರಿಕಲ್ಪನೆ ಕೃತಿಯಲ್ಲಿರಬೇಕು ಎಂದರು.

ಕೃತಿಗಳ ಅವಲೋಕನ ಹಾಗೂ ಕವನ ಸಂಕಲನ ಅರ್ಪಣೆ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಹಾಗೂ ಚಿಂತಕ ಪ್ರೊ.ಹೆಚ್.ಲಿಂಗಪ್ಪ ಮಾತನಾಡಿ
ಪ್ರೊ.ಡಿ.ಅಂಜಿನಪ್ಪ ವಿಮರ್ಶಯಲ್ಲಿ ಡಿ.ಆರ್.ನಾಗರಾಜ್‍ರವರಿಗೆ ಸರಿಗಟ್ಟುವಂತಹ ಪ್ರಮುಖರಾಗಿದ್ದರು. ಮೌನವಾಗಿದ್ದರೂ ಅಲ್ಪ ಕಾಲದಲ್ಲಿಯೇ ಅಗಾಧವಾದ ಸಾಹಿತ್ಯ ರಚಿಸುವಲ್ಲಿ ಅಸಾಧಾರಣ ಸೇವೆ ಸಲ್ಲಿಸಿದ್ದಾರೆ. ಅವರು ಆಯ್ಕೆ ಮಾಡಿಕೊಂಡಿದ್ದು, ವಿಮರ್ಶೆ ಮತ್ತು ವೈಚಾರಿಕತೆ. ಮೈಸೂರಿನ ರೇವಯ್ಯ ಅರಿವೆಯವರ ಮುಂದಿನ ಭಾಗವಾಗಿದ್ದರು ಎಂದು ಗುಣಗಾನ ಮಾಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ, ಸಾಹಿತಿ ಮೋದೂರು ತೇಜ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ತುಮಕೂರು ಜಿಲ್ಲೆ ಮಧುಗಿರಿಯ ಎಂ.ಆರ್.ಮಂಜುನಾಥ್ ಬಿ.ಎಂ.ಗುರುನಾಥ್ ಇವರುಗಳು ಮಾತನಾಡಿದರು.

ಜಿ.ಎಸ್.ಉಜ್ಜಿನಪ್ಪ, ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ, ಡಾ.ಲೋಕೇಶ್ ಅಗಸನಕಟ್ಟೆ, ಪ್ರೊ.ಟಿ.ವಿ.ಸುರೇಶ್‍ಗುಪ್ತ ಇನ್ನು ಅನೇಕರು ಸಮಾರಂಭದಲ್ಲಿದ್ದರು.

Advertisement
Tags :
Advertisement