ಚಿತ್ರದುರ್ಗಕ್ಕೆ ಪ್ರಿಯಾಂಕ ಗಾಂಧಿ ಭೇಟಿ..ಅಭ್ಯರ್ಥಿ ಚಂದ್ರಪ್ಪಗೆ ಅನುಕೂಲವೆಂದ ಮಾಜಿ ಸಚಿವ ಆಂಜನೇಯ
ಲೋಕಸಭಾ ಚುನಾವಣೆಯ ಹಿನ್ನೆಲೆ ಪ್ರಿಯಾಂಕ ಗಾಂಧಿ ತಮ್ಮ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಇಂದು ಚಿತ್ರದುರ್ಗಕ್ಕೆ ಆಗಮಿಸುತ್ತಿದ್ದು, ಬಿ ಎನ್ ಚಂದ್ರಪ್ಪ ಪರ ಮತಯಾಚನೆ ಮಾಡಲಿದ್ದಾರೆ.
ಈ ಬಗ್ಗೆ ಮಾಜಿ ಸಚಿವ ಹೆಚ್ ಆಂಜನೇಯ ಮಾತನಾಡಿ, ಪ್ರಿಯಾಂಕಾ ಗಾಂಧಿ ಬರುವುದರಿಂದ ಮತಗಳ ಹೆಚ್ಚು ಬರುತ್ತವೆ. ಸ್ವಯಂ ಪ್ರೇರಿತವಾಗಿ ಜನ ಬರ್ತಾ ಇದ್ದಾರೆ. ನಮ್ಮ ಅಭ್ಯರ್ಥಿ ಒಳ್ಳೆಯ ವ್ಯಕ್ತಿತ್ವದವರು, ಜಿಲ್ಲೆಯಲ್ಲಿ ಕೆಲಸ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ದೂರದಿಂದ ಬಂದಿದ್ದಾರೆ ಅವರ ಬಗ್ಗೆ ನಾನು ಕಾಮೆಂಟ್ ಮಾಡುವುದಿಲ್ಲ. ಬಿಜೆಪಿ ಕುತಂತ್ರದಿಂದ ಕೆಲವರು ನಕಲಿ ಜಾತಿ ಪ್ರಮಾಣ ಪತ್ರ ವೈರಲ್ ಮಾಡಿಸಿದ್ದರು. ಹಿಂದೆ ಗೆದ್ದಿರುವದರಿಂದ ಮಾದಿಗ ಅಂತ ಜನರಿಗೆ ಗೊತ್ತಿದೆ. ಈಗ ಎಲ್ಲವೂ ಸರಿ ಹೋಗಿದೆ ಎಂದು ಬಿ ಎನ್ ಚಂದ್ರಪ್ಪ ಬಗ್ಗೆ ಮಾತನಾಡಿದ್ದಾರೆ.
ಮಹಾನ್ ನಾಯಕಿ ಇಂದಿರಾ ಗಾಂಧಿಯವರ ಪ್ರತಿರೂಪ ಇಂದಿರಾ ಗಾಂಧಿಯವರು ನಮ್ಮ ಚಿತ್ರದುರ್ಗಕ್ಕೆ ಬರ್ತಿದ್ದಾರೆ. ಈ ಚುನಾವಣಾ ಪ್ರಚಾರದಲ್ಲಿ ಪ್ರಿಯಾಂಕಾ ಗಾಂಧಿ ಭಾಗಿಯಾಗುವುದರಿಂದ ನಮ್ಮ ಅಭ್ಯರ್ಥಿ ಗೆಲುವಿಗೆ ಅನುಕೂಲವಾಗಲಿದೆ. ಪ್ರಿಯಾಂಕಾ ಗಾಂಧಿ ನೋಡಲು ಸ್ವಯಂಪ್ರೇರಿತವಾಗಿ ಜನ ಬರ್ತಿದ್ದಾರೆ. ಗೃಹ ಲಕ್ಷ್ಮಿ ಯೋಜನೆಯನ್ನ ಪ್ರಿಯಾಂಕಾ ಗಾಂಧಿಯವರೇ ಉದ್ಘಾಟನೆ ಮಾಡಿದ್ರು. ಇವತ್ತಿನ ಸಮಾವೇಶದಲ್ಲಿ ಗೃಹ ಲಕ್ಷ್ಮಿಯರು ಫಲಾನುಭವಿಗಳು ಬರ್ತಿದ್ದಾರೆ. ಪ್ರಿಯಾಂಕಾ ಗಾಂಧಿ ಜೊತೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಜಿಲ್ಲೆಯ ಎಲ್ಲಾ ನಮ್ಮ ಶಾಸಕರು ಬರ್ತಿದ್ದಾರೆ ಎಂದಿದ್ದಾರೆ.
ಪ್ರಿಯಾಂಕ ಗಾಂಧಿ ಮೊದಲು ಚಿತ್ರದುರ್ಗಕ್ಕೆ ಭೇಟಿ ನೀಡಿ, ಬಳಿಕ ಸಂಜೆ ವೇಳೆಗೆ ಬೆಂಗಳೂರಿಗೆ ಆಗಮಿಸಿ, ಬೆಂಗಳೂರು ದಕ್ಚಿಣದ ಅಭ್ಯರ್ಥಿ ಸೌಮ್ಯಾರೆಡ್ಡಿ ಪರವಾಗಿ ಮತಯಾಚನೆ ಮಾಡಲಿದ್ದಾರೆ.