For the best experience, open
https://m.suddione.com
on your mobile browser.
Advertisement

ಹಿಂದಿನ ಶಾಸಕರು ಚಿತ್ರದುರ್ಗ ನಗರವನ್ನು ಹಾಳು ಮಾಡಿದ್ದಾರೆ, ನೀವು ಸರಿ ಮಾಡಿ : ಶಾಸಕ ವೀರೇಂದ್ರ ಅವರಿಗೆ ಜಿ.ಎಸ್.ಮಂಜುನಾಥ್ ಮನವಿ

06:19 PM Aug 16, 2024 IST | suddionenews
ಹಿಂದಿನ ಶಾಸಕರು ಚಿತ್ರದುರ್ಗ ನಗರವನ್ನು ಹಾಳು ಮಾಡಿದ್ದಾರೆ  ನೀವು ಸರಿ ಮಾಡಿ   ಶಾಸಕ ವೀರೇಂದ್ರ ಅವರಿಗೆ ಜಿ ಎಸ್ ಮಂಜುನಾಥ್ ಮನವಿ
Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552

Advertisement
Advertisement

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್.16  : ಹಿಂದಿನ ಶಾಸಕರು ನಗರವನ್ನು ಕೆಡಿಸಿ ಕಲ್ಲು ಹಾಕಿದ್ದಾರೆ. ರಿಪೇರಿ ಮಾಡುವ ಶಕ್ತಿ ನಿಮ್ಮಲ್ಲಿದೆ. ನಗರಸಭೆ, ಜಿಲ್ಲಾಡಳಿತ, ಜನಸಮೂಹವೆ ನಿಮ್ಮ ಬೆಂಬಲಕ್ಕಿದೆ ಎಂದು ಆದಿಜಾಂಬವ ಅಭಿವೃದ್ದಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿಯವರಲ್ಲಿ ಭಿನ್ನವಿಸಿಕೊಂಡರು.

ಕೆಳಗೋಟೆಯಲ್ಲಿರುವ ಬೇಡರಕಣ್ಣಪ್ಪ ದೇವಸ್ಥಾನದ ಪಕ್ಕದಲ್ಲಿನ ಅಂಬೇಡ್ಕರ್ ಸಮುದಾಯ ಭವನದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

Advertisement

ಅವೈಜ್ಞಾನಿಕ ಯುಜಿಡಿ ಗಳು ಬದಲಾಗಬೇಕು. ನಗರದ ಬಹುತೇಕ ಕಡೆ ಪಿಟ್‍ಗಳಿವೆ. ಕೆನೆಕ್ಷನ್ ಇಲ್ಲ. ಹಾಗಾಗಿ ಎಲ್ಲಾ ಕಡೆ ಯುಜಿಡಿ. ಚೇಂಬರ್‍ಗಳು ತುಂಬಿ ರಸ್ತೆಯಲ್ಲಿ ನೀರು ಹರಿಯುತ್ತಿದೆ. ಮಣ್ಣಿನ ರೋಡುಗಳೆ ಕಣ್ಣಿಗೆ ಕಾಣದಂತಾಗಿದೆ. ಎಲ್ಲಾ ಕಡೆ ಸಿಮೆಂಟ್ ರೋಡ್‍ಗಳಾಗಿವೆ. ಅದಕ್ಕಾಗಿ ಹದಗೆಟ್ಟಿರುವ ನಗರವನ್ನು ಸರಿಮಾಡಿ ಎಂದು ಶಾಸಕರಲ್ಲಿ ಜಿ.ಎಸ್.ಮಂಜುನಾಥ್ ಮನವಿ ಮಾಡಿದರು.

Advertisement

ಭೀಮಪ್ಪನಾಯಕ ನಗರಸಭೆ ಅಧ್ಯಕ್ಷರಾಗಿದ್ದಾಗ ಊರು ಕಟ್ಟೋಣ ಜಮೀನು ಕೊಡಿ ಎಂದು ಕೇಳಿದ್ದರಿಂದ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗದವರು ನಾಲ್ಕುನೂರು, ಐದು ನೂರು ರೂ.ಗೆ ಎಕರೆಯಂತೆ ಭೂಮಿ ನೀಡಿದವರು ಇಂದು ಅನಾಥರಾಗಿದ್ದಾರೆ.

ಚಿತ್ರದುರ್ಗ ಶಾಸಕರನ್ನು ಬದಲಾವಣೆ ಮಾಡಬೇಕೆಂದು ತೀರ್ಮಾನಿಸಿ ಎಲ್ಲಾ ಜಾತಿ ವರ್ಗದವರು ಒಟ್ಟಾಗಿ ನಿಮ್ಮನ್ನು ಗೆಲ್ಲಿಸಿದ್ದಾರೆ. ಉಚಿತ ಗ್ಯಾರೆಂಟಿ ಸ್ಕೀಂಗಳನ್ನು ನಿಲ್ಲಿಸಲ್ಲ ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇವರುಗಳು ರಾಜ್ಯದ ಜನತೆಗೆ ಅಭಯ ನೀಡಿದ್ದಾರೆ. ಸಮುದಾಯ ಭವನದ ಮೇಲ್ಬಾಗದಲ್ಲಿ ಗ್ರಂಥಾಲಯ ಮಾಡೋಣ ಇದರಿಂದ ಮಕ್ಕಳ ಓದಿಗೆ ಅನುಕೂಲವಾಗುತ್ತದೆ. ಅದಕ್ಕೆ ಬೇಕಾದ ನೆರವು ನೀಡುವುದಾಗಿ ತಿಳಿಸಿದರು.

ಹತ್ತು ಮಂದಿಯಿರುವ ಸ್ತ್ರೀಶಕ್ತಿ ಸಂಘಕ್ಕೆ ಎರಡುವರೆ ಲಕ್ಷ ರೂ.ನೆರವು ನೀಡುವ ಅವಕಾಶವಿದೆ. ನೇರ ಸಾಲ ಕೊಡಬಹುದು. ಜಮೀನು ಇದ್ದವರಿಗೆ ಬೋರ್‍ವೆಲ್ ಕೊರೆಸಿ ಕೊಡೋಣ. ಚಿಕ್ಕ ವಯಸ್ಸಿನ ಶಾಸಕ ಕೆ.ಸಿ.ವೀರೇಂದ್ರಪಪ್ಪಿರವರಿಗೆ ರಾಜಕೀಯದಲ್ಲಿ ಒಳ್ಳೆ ಭವಿಷ್ಯವಿದೆ. ಲಿಂಗಾಯಿತ ಮತಗಳನ್ನು ಕಾಂಗ್ರೆಸ್‍ಗೆ ತರುವ ಶಕ್ತಿ ಅವರಲ್ಲಿದೆ. ಎಲ್ಲರೂ ಶಾಸಕರ ಬೆಂಬಲಕ್ಕೆ ನಿಲ್ಲಬೇಕು ಎಂದು ಹೇಳಿದರು.

ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದ ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಸ್ಲಂ ಬೋರ್ಡ್‍ನಿಂದ 48 ಫಲಾನುಭವಿಗಳು ಸಿ.ಕೆ.ಪುರದಿಂದ ಆಯ್ಕೆಯಾಗಿದ್ದಾರೆ.

ದೇವಸ್ಥಾನ ಕಟ್ಟುವುದಕ್ಕಿಂತ ಗ್ರಂಥಾಲಯಗಳನ್ನು ತೆರೆದರೆ ಪುಸ್ತಕಗಳನ್ನು ಓದುವುದರಿಂದ ಮಕ್ಕಳ ಜ್ಞಾನ ಹೆಚ್ಚುತ್ತದೆ. ವಿಜೃಂಭಣೆಯಿಂದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಬದಲು ಗ್ರಂಥಾಲಯಕ್ಕೆ ಒಂದು ಪುಸ್ತಕ ಕೊಡಿ ಎಂದು ಸಿ.ಕೆ.ಪುರ ನಿವಾಸಿಗಳಲ್ಲಿ ವಿನಂತಿಸಿದರು.

ನನ್ನ ಉದ್ಯಮ ನೋಡಿಕೊಳ್ಳಲು ಬೇರೆ ಬೇರೆ ಕಡೆ ಹೋಗುವುದು ಅನಿವಾರ್ಯ. ತಿಂಗಳಲ್ಲಿ ಹದಿನೆಂಟರಿಂದ ಇಪ್ಪತ್ತು ದಿನ ಕ್ಷೇತ್ರದಲ್ಲಿರುತ್ತೇನೆ. ನನ್ನ ವ್ಯವಹಾರ ನೋಡಿಕೊಂಡು ಇದ್ದಿದ್ದರೆ ಸುಖವಾಗಿರುತ್ತದೆ. ಜನಸೇವೆ ಮಾಡಬೇಕೆಂಬ ಹಂಬಲದಿಂದ ರಾಜಕೀಯಕ್ಕೆ ಬಂದಿದ್ದೇನೆ. ಇಲ್ಲೊಂದು ವ್ಯಾಯಾಮ ಶಾಲೆ ತೆರೆಯಬೇಕೆಂಬ ಬೇಡಿಕೆಯಿದೆ. ಆರೋಗ್ಯಪೂರ್ಣವಾಗಿರಿ. ಕೆಟ್ಟ ಚಟಗಳಿಗೆ ಬಲಿಯಾಗಬೇಡಿ ಎಂದು ಕರೆ ನೀಡಿದರು.

ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯ ಹೆಚ್.ಅಂಜಿನಪ್ಪ, ನಗರಸಭೆ ಮಾಜಿ ಸದಸ್ಯರುಗಳಾದ ಪ್ರಕಾಶ್, ತಿಪ್ಪೇಸ್ವಾಮಿ, ಅಂಗಡಿ ಮಂಜುನಾಥ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಕಾಶ್, ತುಮಕೂರು ನಗರಸಭೆ ಸದಸ್ಯ ಅಬ್ದುಲ್, ಕೆಡಿಪಿ. ಸದಸ್ಯ ಕೆ.ಬಿ.ನಾಗರಾಜ್, ವಿಜಯಣ್ಣ, ಸುಧಾಕರ್, ನ್ಯಾಯವಾದಿ ಬೀಸ್ನಳ್ಳಿ ಜಯಣ್ಣ ವೇದಿಕೆಯಲ್ಲಿದ್ದರು.

Tags :
Advertisement