For the best experience, open
https://m.suddione.com
on your mobile browser.
Advertisement

ಪ್ರಕೃತಿ ಶಾಲೆಯಲ್ಲಿ 2024ರ ನೂತನ ವರ್ಷದ ಕ್ಯಾಲೆಂಡರ್‌ ಬಿಡುಗಡೆ

11:47 AM Dec 08, 2023 IST | suddionenews
ಪ್ರಕೃತಿ ಶಾಲೆಯಲ್ಲಿ 2024ರ ನೂತನ ವರ್ಷದ ಕ್ಯಾಲೆಂಡರ್‌ ಬಿಡುಗಡೆ
Advertisement

ಸುದ್ದಿಒನ್, ಚಿತ್ರದುರ್ಗ : ನಗರದ ಪ್ರಕೃತಿ ಶಾಲೆಯಲ್ಲಿ ಬಿ.ಇ.ಒ. ನಾಗಭೂಷಣ್‌ರವರು ವಿನೂತನ ಶೈಲಿಯ 2024ರ ನೂತನ ವರ್ಷದ ಕ್ಯಾಲೆಂಡರ್‌ನ್ನು ಬಿಡುಗಡೆ ಮಾಡಿ, ಕಲಿಸುವುದೇ ಶಿಕ್ಷಣದ ಉದ್ದೇಶವಾಗಬೇಕು ಮತ್ತು  ಗುರುಕುಲ ಶಿಕ್ಷಣ ಹಾಗೂ ಇಂದಿನ ಶಾಲಾ ಶಿಕ್ಷಣದ ಬಗ್ಗೆ ವ್ಯತ್ಯಾಸ ತಿಳಿಸಿದರು.

Advertisement

ಶಿಕ್ಷಣ ಸಂಯೋಜಕ ಎಂ.ಆರ್ ನಾಗರಾಜ್,
ಉತ್ತರ ವಲಯದ ಸಿ.ಆರ್.ಪಿಗಳಾದ  ರವಿಶಂಕರ್‌ರವರು ಹಾಗೂ ವಿಷನ್ ಅಕಾಡಮಿಯ ಮುಖ್ಯಸ್ಥ ಲೊಕೇಶ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಕಾರ್ತಿಕ್ ಅವರು ಮಾತನಾಡಿ, ಮಕ್ಕಳಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯಗಳನ್ನು ಕಲಿಸುವುದೇ ಶಿಕ್ಷಣದ ಉದ್ದೇಶವಾಗಬೇಕು ಎಂದು ತಿಳಿಸಿದರು.

Advertisement

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟೆರಿಯನ್ ಪಿ.ಎಚ್.ಎಫ್ ಎಂ.ಕೆ ರವೀಂದ್ರ ವಹಿಸಿಕೊಂಡಿದ್ದರು. ಖಜಾಂಚಿ ಶ್ರೀಮತಿ ಶ್ವೇತ ಕಾರ್ತಿಕ್  ರವರು ಉಪಸ್ಥಿತರಿದ್ದರು.

ಈ ವೇಳೆ ಮುಖ್ಯ ಅತಿಥಿಗಳನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಸಹ ಶಿಕ್ಷಕ ಮಾಮಾ ಜಿಗಣಿರವರು ಎಲ್ಲರನ್ನು ಸ್ವಾಗತಿಸಿದರು. ವಂದನಾರ್ಪಣೆಯನ್ನು ಮುಖ್ಯ ಶಿಕ್ಷಕಿ ಶಶಿಕಲಾ ರವರು ನೆರವೇರಿಸಿದರು. ನಿರೂಪಣೆಯನ್ನು ಸಹ ಶಿಕ್ಷಕಿಯರಾದ ಮಾನಸ ಹಾಗೂ ರಮ್ಯಾರವರು ನಡೆಸಿಕೊಟ್ಟರು.

Tags :
Advertisement