Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಪ್ರಕೃತಿ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆ ಶಾಲೆಯಲ್ಲಿ ಸಂಭ್ರಮದ 75 ಗಣರಾಜ್ಯೋತ್ಸವ

11:02 AM Jan 26, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ಜನವರಿ.26 :  ಪ್ರಕೃತಿ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆ ಶಾಲೆಯಲ್ಲಿ 75 ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿಸಲಾಯಿತು.

Advertisement

ಶಾಲೆಯ ಉಪಾಧ್ಯಕ್ಷ ಮತ್ತು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ರೋಟೆರಿಯನ್ ಪಿ.ಎಚ್.ಎಫ್ ಉಮೇಶ್ ವಿ ತುಪ್ಪದ ತಮ್ಮ ಅಧ್ಯಕ್ಷತೆಯ ನುಡಿಯಲ್ಲಿ ಸಂವಿಧಾನದ ಹಾಗೂ ಕಾನೂನಿನ ಬಗ್ಗೆ ನಮ್ಮ ಜೀವನದಲ್ಲಿ ಹೇಗೆ ಪಾಲಿಸಬೇಕೆಂದು ತಿಳಿಸಿಕೊಟ್ಟರು.


ನಿಖಿತಾ ಮತ್ತು ತಂಡದವರು ದೇಶಭಕ್ತಿ ಗೀತೆ ಹಾಡುವುದರ ಮೂಲಕ ಪ್ರಾರ್ಥನೆಯನ್ನು ಕಾರ್ಯಕ್ರಮವನ್ನು ಪ್ರಾರಂಭಿಸಿದರು.
ಗಣ್ಯರೆಲ್ಲರಿಗೂ ಶಾಲಾ ಶಿಕ್ಷಕಿಯಾದ ತೇಜಸ್ವಿನಿ ಸ್ವಾಗತವನ್ನು ಕೋರಿದರು. ಪಥ ಸಂಚಲನ ಕಾರ್ಯಕ್ರಮವನ್ನು ಶಿಕ್ಷಕಿ ರಮ್ಯಾ  ತಂಡಗಳ ಪರಿಚಯದ ಮೂಲಕ ಬಂದಂತಹ ಅತಿಥಿಗಳಿಗೆ ಪರಿಚಿಸಿ ಕೊಟ್ಟರು. ಹಾಗೂ ಧ್ವಜಾರೋಹಣ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಮಕ್ಕಳು ರಾಷ್ಟ್ರಗೀತೆಯ ಹಾಡುವದರ ಮೂಲಕ ಧ್ವಜಕ್ಕೆ ಗೌರವವನ್ನು ಸಲ್ಲಿಸಿದರು.
Advertisement

6ನೇ ತರಗತಿಯ ವಿದ್ಯಾರ್ಥಿ ವರುಣ್  ಮತ್ತು 5 ನೇ ತರಗತಿಯ ಮಹಮ್ಮದ್ ಅರ್ಬಾಸ್ ಗಣರಾಜ್ಯೋತ್ಸವದ ಬಗ್ಗೆ ಭಾಷಣವನ್ನು ಮಾಡಿದರು.

ಶಾಲೆಯ ಶಿಕ್ಷಕಿಯಾದ ಶ್ರೀಮತಿ ರೇಷ್ಮಾ ಸಂವಿಧಾನದ ಸಮಿತಿಯ ಬಗ್ಗೆ ಹಾಗೂ ಭಾರತದಲ್ಲಿರುವ ವಿವಿಧತೆಯಲ್ಲಿ ಏಕತೆಯ ಬಗ್ಗೆ ತಿಳಿಸಿಕೊಟ್ಟರು.

ದೇಶದ ಸೈನಿಕರನ್ನು ನೆನಪಿಸಿಕೊಳ್ಳುತ್ತಾ ನಮ್ಮ ಶಾಲೆಯ 4ನೇ ತರಗತಿಯ ವಿದ್ಯಾರ್ಥಿಯಾದ ಶ್ರೀನಿಧಿ ದೇಶಭಕ್ತಿ ಗೀತೆಯನ್ನು ಹಾಡಿದರು. ಅಧ್ಯಾಪನ ಮಕ್ಕಳಿಂದ ದೇಶಭಕ್ತಿ ಗೀತೆಯ ನೃತ್ಯವನ್ನು ಮಾಡಿದರು. ಕಾರ್ಯದರ್ಶಿಗಳಾದಂತಹ ಕಾರ್ತಿಕ್ ಎಂ ರವರು ವಂದನಾರ್ಪಣೆಯನ್ನು ನಡೆಸಿಕೊಟ್ಟರು. 7ನೇ ತರಗತಿಯ ಮಕ್ಕಳದಂತಹ ಕುಮಾರಿ ಹೇಮಲತಾ ವೈ ಹಾಗೂ ಸೈಯದ್ ಫರಾನ್ ಈ ಕಾರ್ಯಕ್ರಮದ ನಿರೂಪಣೆಯನ್ನು ನೆರವೇರಿಸಿದರು.

ಈ ಕಾರ್ಯಕ್ರಮಕ್ಕೆ ಟ್ರಸ್ಟಿಗಳಾದ ಮಾರುತಿ ಮೋಹನ್, ಡಾ. ಮಧುಸೂಧನ, ಡಾ.ಶ್ವೇತ ಕಾರ್ತಿಕ್  ಮತ್ತು  ಮುಖ್ಯ ಶಿಕ್ಷಕಿಯಾದ ಶ್ರೀಮತಿ ಶಶಿಕಲಾ ಎಂ. ಎಸ್ ರವರು  ಸಿಹಿ ವಿತರಿಸುವುದರ ಮೂಲಕ ಈ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

Advertisement
Tags :
75 ಗಣರಾಜ್ಯೋತ್ಸವchitradurgaPrakruthi schoolsuddioneಚಿತ್ರದುರ್ಗಪ್ರಕೃತಿ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಸುದ್ದಿಒನ್
Advertisement
Next Article