For the best experience, open
https://m.suddione.com
on your mobile browser.
Advertisement

ಕಣ್ಮೇಶ್‍ ಅವರಿಗೆ ಪಿ.ಆರ್.ತಿಪ್ಪೇಸ್ವಾಮಿ ರಾಜ್ಯ ಮಟ್ಟದ ಪ್ರಶಸ್ತಿ : ಸೆಪ್ಟೆಂಬರ್‌ 20 ರಂದು ಮುಖ್ಯಮಂತ್ರಿಗಳಿಂದ ಪ್ರಶಸ್ತಿ ಪ್ರದಾನ

06:45 PM Sep 17, 2024 IST | suddionenews
ಕಣ್ಮೇಶ್‍ ಅವರಿಗೆ ಪಿ ಆರ್ ತಿಪ್ಪೇಸ್ವಾಮಿ ರಾಜ್ಯ ಮಟ್ಟದ ಪ್ರಶಸ್ತಿ   ಸೆಪ್ಟೆಂಬರ್‌ 20 ರಂದು ಮುಖ್ಯಮಂತ್ರಿಗಳಿಂದ ಪ್ರಶಸ್ತಿ ಪ್ರದಾನ
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

Advertisement

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 17 : ಎಸ್.ಜೆ.ಎಂ.ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದಲೂ ಕೆಲಸ ಮಾಡುತ್ತಿರುವ ಚಿತ್ರಕಲಾವಿದ ಸಿ.ಕಣ್ಮೇಶ್‍ರವರಿಗೆ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹರ್ತಿಕೋಟೆಯ ಪಿ.ಆರ್.ತಿಪ್ಪೇಸ್ವಾಮಿ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಸೆ.20 ರಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರದಾನ ಮಾಡುತ್ತಿರುವುದು ಜಿಲ್ಲೆಗೆ ಹೆಮ್ಮೆ ಎಂದು ನಾಗರಾಜ್‍ಬೇದ್ರೆ ತಿಳಿಸಿದರು.

Advertisement

ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎಸ್.ಜೆ.ಎಂ.ಚಿತ್ರಕಲಾ ಶಾಲೆಯಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿರುವ ಸಿ.ಕಣ್ಮೇಶ್‍ರವರು ಬಡುಕಟ್ಟು ಸಮುದಾಯ ಹಾಗೂ ಜಾನಪದಕ್ಕೆ ಸಂಬಂಧಿಸಿದಂತೆ ಹೆಚ್ಚು ಚಿತ್ರಕಲೆಗಳನ್ನು ರಚಿಸಿ ಕಲೆಗಾಗಿಯೇ ಜೀವನವನ್ನು ಮುಡುಪಾಗಿಟ್ಟಿದ್ದಾರೆಂದು ಹೇಳಿದರು.

Advertisement

ಪ್ರಕಾಶ್ ರಾಮನಾಯ್ಕ ಮಾತನಾಡಿ ಪಿ.ಆರ್.ತಿಪ್ಪೇಸ್ವಾಮಿ ಕೇವಲ ಜಾನಪದ ಕಲಾವಿದರಷ್ಟೆ ಅಲ್ಲ. ಲಲಿತಕಲಾ ಅಕಾಡೆಮಿ ಅಧ್ಯಕ್ಷರಾಗಿ ಜಾನಪದ ವಸ್ತುಗಳನ್ನು ಸಂಗ್ರಹಿಸಿ ಮುಂದಿನ ಪೀಳಿಗೆಗೆ ಉಳಿಸಿದ್ದಾರೆ. ಚಿತ್ರಕಲೆಗೆ ಸಂಬಂಧಿಸಿದಂತೆ ಅನೇಕ ಪುಸ್ತಕಗಳನ್ನು ಬರೆದು ಕಾಲೇಜುಗಳಿಗೆ ನೀಡಿದ್ದಾರೆ. ಧಮಸ್ಥಳದಲ್ಲಿರುವ ಮ್ಯೂಸಿಯಂನಲ್ಲಿ ಪಿ.ಆರ್.ತಿಪ್ಪೇಸ್ವಾಮಿರವರ ಸಂಗ್ರಹಗಳು ಇಂದಿಗೂ ಇವೆ. ಅವಿವಾಹಿತರಾಗಿದ್ದುಕೊಂಡು ಕಲೆಗಾಗಿಯೇ ಜೀವನವನ್ನು ಮುಡುಪಾಗಿಟ್ಟ ಪಿ.ಆರ್.ತಿಪ್ಪೇಸ್ವಾಮಿ ಪ್ರಶಸ್ತಿ ಸಿ.ಕಣ್ಮೇಶ್‍ಗೆ ಸಿಕ್ಕಿರುವುದು ಅವರ ಪರಿಶ್ರಮಕ್ಕೆ ತಕ್ಕ ಫಲ. ಪ್ರಶಸ್ತಿಯು 25 ಸಾವಿರ ರೂ.ನಗದು, ಸ್ಮರಣಿಕೆಯನ್ನೊಳಗೊಂಡಿರುತ್ತದೆ ಎಂದರು.

ಜಾನಪದ ಹಾಡುಗಾರ ಹರೀಶ್ ಮಾತನಾಡುತ್ತ ಜನಪದ ಚಿತ್ರಗಳ ಮೂಲಕ ಕಲೆಯನ್ನು ಚಿತ್ರಿಸುವ ಅದ್ಬುತ ಕಲಾವಿದ ಪಿ.ಕಣ್ಮೇಶ್‍ಗೆ ಪಿ.ಆರ್.ತಿಪ್ಪೇಸ್ವಾಮಿ ರಾಜ್ಯ ಮಟ್ಟದ ಪ್ರಶಸ್ತಿ ದೊರಕಿರುವುದು ಇಡಿ ಚಿತ್ರಕಲೆಗೆ ಸಂದ ಗೌರವ ಎಂದು ಬಣ್ಣಿಸಿದರು.

ಪ್ರಸನ್ನಕುಮಾರ್ ಮಾತನಾಡಿ ಪಿ.ಆರ್.ತಿಪ್ಪೇಸ್ವಾಮಿ ಜಿಲ್ಲೆಯ ಹೆಮ್ಮೆಯ ಕಲಾವಿದರು. ಅಂತಹವರ ಹೆಸರಿನಲ್ಲಿ ಪಿ.ಕಣ್ಮೇಶ್ ರಾಜ್ಯದ ಮುಖ್ಯಮಂತ್ರಿಯಿಂದ ಪ್ರಶಸ್ತಿ ಸ್ವೀಕರಿಸುವುದು ಅವರ ಕಲೆಗೆ ಸಿಕ್ಕ ಗರಿಮೆ ಎಂದು ಗುಣಗಾನ ಮಾಡಿದರು.

ಸೈಯದ್ ಖುದ್ದೂಸ್, ರಮೇಶ, ತಿಮ್ಮಾರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Tags :
Advertisement