For the best experience, open
https://m.suddione.com
on your mobile browser.
Advertisement

ಚಿತ್ರದುರ್ಗದಲ್ಲಿ ಅಕ್ಟೋಬರ್ 20ರಂದು ವಿದ್ಯುತ್ ವ್ಯತ್ಯಯ

06:44 PM Oct 19, 2024 IST | suddionenews
ಚಿತ್ರದುರ್ಗದಲ್ಲಿ ಅಕ್ಟೋಬರ್ 20ರಂದು ವಿದ್ಯುತ್ ವ್ಯತ್ಯಯ
Advertisement

Advertisement

ಚಿತ್ರದುರ್ಗ. ಅ.19: ಚಿತ್ರದುರ್ಗ ನಗರ ಉಪವಿಭಾಗ ಘಟಕ-1ರ ವ್ಯಾಪ್ತಿಯಲ್ಲಿ ಬರುವ ಎಫ್-1 ನಗರ ಮತ್ತು ಎಫ್-2 ಕೆಳಗೋಟೆ 66/11ಕೆ.ವಿ ಮಾರ್ಗದ ಕೆ.ಇ.ಬಿ ಕಾಲೋನಿ ಮತ್ತು  ಎಸ್.ಪಿ ಕಚೇರಿ ಬಳಿ ಇರುವ 250/100 ಪರಿವರ್ತಕಗಳನ್ನು ಸ್ಥಳಾಂತರಿಸಲು ಮತ್ತು ತುರ್ತು ಕೆಲಸ ನಿರ್ವಹಿಸಲು ಅ.20ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯವಾಗಲಿದೆ.

ವಿದ್ಯುತ್ ನಿಲುಗಡೆಗೊಳಪಡುವ ಪ್ರದೇಶಗಳು: ಎಫ್-1 ನಗರ: ಆರ್.ಟಿ.ಓ ಕಚೇರಿ, ಬಿ.ಎಲ್.ಗೌಡ ಲೇಔಟ್, ತಿಪ್ಪಜ್ಜಿ ಸರ್ಕಲ್, ಡಿ.ಸಿ.ಸರ್ಕಲ್, ಅಮೋಘ ಹೋಟೆಲ್, ಪ್ರವಾಸಿ ಮಂದಿರ, ಗಾಂಧಿ ಸರ್ಕಲ್, ಎಸ್.ಬಿ.ಎಂ ಸರ್ಕಲ್, ಲಕ್ಮೀ ಬಜಾರ್, ಅಸಾರ್ ಮೊಹಲ್ಲಾ, ಖಾಜಿ ಮೊಹಲ್ಲಾ, ಚಿಕ್ಕಪೇಟೆ  ಹಾಗೂ ಸುತ್ತಮುತ್ತಲಿನ ಪ್ರದೇಶ.
ಎಫ್-2 ಕೆಳಗೋಟೆ: ಕೆಇಬಿ ಕಾಲೋನಿ, ಎಸ್.ಆರ್.ಲೇಔಟ್, ಎಸ್.ಪಿ ಆಫೀಸ್, ಭುವನೇಶ್ವರಿ ಸರ್ಕಲ್, ಮುನ್ಸಿಪಲ್ ಕಾಲೋನಿ, ಕೆಳಗೋಟೆ, ಯುನಿಟಿ ಕಾಂಪ್ಲೆಕ್ಸ್, ಪೊಲೀಸ್ ಬಾರ್ ಲೈನ್, ನಗರಸಭೆ, ತರಾಸು ರಂಗಂದಿರ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
Advertisement

Tags :
Advertisement