Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಬಿ ಎನ್ ಚಂದ್ರಪ್ಪ ಪರ ಮತಯಾಚನೆ ಮಾಡಿ, ಮೋದಿ, ಅಮಿತ್ ಶಾ ವಿರುದ್ಧ ಗುಡುಗಿದ ಸಿದ್ದರಾಮಯ್ಯ

07:31 PM Apr 23, 2024 IST | suddionenews
Advertisement

ಚಿತ್ರದುರ್ಗ: ಈ ತಿಂಗಳ 26 ಕ್ಕೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಅಭ್ಯರ್ಥಿ ಬಿಎನ್ ಚಂದ್ರಪ್ಪ ರನ್ನ ಹೆಚ್ಚು ಮತಗಳಿಂದ ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡ್ತೀನಿ. ಕಳೆದ 10 ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿದೆ ಮೋದಿಯವರು ಪ್ರಧಾನಿಯಾಗಿದ್ದಾರೆ. ಈ ೧೦ ವರ್ಷದಲ್ಲಿ ರೈತರು ಹಿಂದುಳಿದವರ ಪರವಾಗಿ ಏನು ಮಾಡಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ.

Advertisement

 

ಸಿಎಂ ಸಿದ್ದರಾಮಯ್ಯ ಮಾತನಾಡಿದ್ದು, 4ನೇ ತಾರೀಖು ಚಿತ್ರದುರ್ಗಕ್ಕೆ ಬಂದಿದ್ದೆ. ಬಿಎನ್ ಚಂದ್ರಪ್ಪ ಪರ ಮತಯಾಚನೆ ಮಾಡಿದ್ದೆ. ಪ್ರಿಯಾಂಕಾ ಗಾಂಧಿಯವರು ನಮ್ಮ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಲು ಬಂದಿದ್ದಾರೆ. ಅವರಿಗೆ ಕರ್ನಾಟಕ ಜನತೆಯ ಪರವಾಗಿ ನಾನು ಸ್ವಾಗತ ಮಾಡ್ತೀನಿ ಎಂದಿದ್ದಾರೆ‌.

Advertisement

 

ನಾನು ಬಿಜೆಪಿ ಸರ್ಕಾರ ಟೀಕೆ ಮಾಡಬೇಕು ಅಂತ ಹೇಳ್ತಿಲ್ಲ. ಆದ್ರೆ ಅವರ ಕೊಟ್ಟ ಮಾತು 10 ವರ್ಷವಾದ್ರು ಈಡೇರಿಸಿಲ್ಲ. ಮೋದಿಗೆ ಕರ್ನಾಟಕ ನೆನಪಾಗೋದು ಚುನಾವಣಾ ಸಮಯದಲ್ಲಿ ಮಾತ್ರ. ವಿಧಾನಸಭೆ ಮತ್ತು ಲೋಕಸಭಾ ಚುನಾವಣಾ ಸಮಯದಲ್ಲಿ ಮಾತ್ರ ಬಂದಿದ್ದರು. ಪ್ರವಾಹ ಬಂದಾಗ ಬರಗಾಲ ಬಂದಾಗಲೂ ಸಹ ಮೋದಿ ಬಂದು ಕರ್ನಾಟಕ ಜನರ ಕಷ್ಟ ಕೇಳಿಲ್ಲ. ಮೋದಿನೂ ಬಂದಿಲ್ಲ ಅಮಿತ್ ಶಾ ಸಹ ಬಂದಿರಲ್ಲ. ಈಗ ಚುನಾವಣಾ ಅಂತ ಬರ್ತಿದ್ದಾರೆ.

 

ನರೇಂದ್ರ ಮೋದಿ ಅಲೆ ಎಲ್ಲಿಯೂ ಇಲ್ಲ. ಯಾಕೆ ಅಂದ್ರೆ ಅವರು ಹೇಳುವ ಸುಳ್ಳು ಜನರಿಗೆ ಅರ್ಥ ಆಗಿದೆ. ಕರ್ನಾಟಕದಲ್ಲಿ ಅಲೆ ಇರೋದು ಗ್ಯಾರಂಟಿ ಅಲೆ. 2013 ರಿಂದ‌ 2108 ರಲ್ಲಿ ನಮ್ಮ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯನ್ನ ನಾವು 165 ರಲ್ಲಿ 158 ಈಡಿರಿಸಿದ್ದೇವೆಮ. ನಾವು ಕೊಟ್ಟ ಮಾತಿನಂತೆ ನಡೆದಿದ್ದೇವೆ. ಬಿಜೆಪಿ ಪ್ರಣಾಳಿಕೆ ಕೊಟ್ಟ ಭರವಸೆ ಈಡಿರಿಸಿಲ್ಲ. 600 ಭರವಸೆಯಲ್ಲಿ ೬೦ % ಸಹ ಈಡಿರಿಸಿಲ್ಲ. ವಿದೇಶದಲ್ಲಿ ಕಪ್ಪು ಹಣ ತಂದು 100 ದಿನಗಳಲ್ಲಿ ಎಲ್ಲಾ ಅಕೌಂಟ್ ಗೆ ಜಮಾ ಮಾಡ್ತೀನಿ ಎಂದಿದ್ದರು. 15 ಲಕ್ಷ ಇರಲಿ 15 ಪೈಸೆ ಸಹ ನೀವು ಕೊಟ್ಟಿಲ್ಲ. 2 ಕೋಟಿ ಉದ್ಯೋಗ ಕೊಡ್ತೀನಿ ಎಂದ್ರು ಕೊಟ್ಟಾರಾ..? ಎಂದು ಪ್ರಶ್ನೆ ಮಾಡಿದ್ದಾರೆ.

Advertisement
Tags :
Amit ShahBN ChandrappaCM SiddaramaiahNarendra modiPollingSiddaramaiahಅಮಿತ್ ಶಾಬಿ.ಎನ್.ಚಂದ್ರಪ್ಪಮತಯಾಚನೆಮುಖ್ಯಮಂತ್ರಿ  ಸಿದ್ದರಾಮಯ್ಯಮೋದಿ
Advertisement
Next Article