ಪಿಎಂ ವಿಶ್ವಕರ್ಮ ಯೋಜನೆ ಪ್ರಧಾನಿ ಮೋದಿ ಗ್ಯಾರೆಂಟಿ, ಕಾಂಗ್ರೆಸ್‍ನಂತ ಪೊಳ್ಳು ಗ್ಯಾರೆಂಟಿಯಲ್ಲ : ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.27 : ಲೋಕಸಭಾ ಚುನಾವಣೆ ಇನ್ನು ಮೂರ್ನಾಲ್ಕು ತಿಂಗಳಲ್ಲಿ ನಡೆಯುವುದರಿಂದ ಎಲ್ಲರೂ ಪಕ್ಷದ ಸಂಘಟನೆಯಲ್ಲಿ ತೊಡಗಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ ಕರೆ ನೀಡಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಕರೆಯಲಾಗಿದ್ದ ಪದಾಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕಾಗಿದೆ. ಈ ನಿಟ್ಟಿನಲ್ಲಿ ಪಕ್ಷದ ಕೆಲಸ ಮಾಡಲು ಮಾನಸಿಕವಾಗಿ ಸಿದ್ದರಿರಬೇಕು. ವಿಶ್ವಕರ್ಮ ಸಮಾಜದವರು ಸಾಲಕ್ಕಾಗಿ ಅರ್ಜಿಗಳನ್ನು ಹಾಕಿದ್ದಾರೆ.
ಮಂಡಲ ಅಧ್ಯಕ್ಷರುಗಳು ಬೂತ್ ಮಟ್ಟಕ್ಕೆ ತೆಗೆದುಕೊಂಡು ಹೋದಾಗ ಮಾತ್ರ ನಮ್ಮ ಸಾಂಪ್ರದಾಯಿಕ ಕುಶಲಕರ್ಮಿಗಳನ್ನು ಆರ್ಥಿಕವಾಗಿ ಬಲಪಡಿಸಲು ನೆರವು ನೀಡಿದಂತಾಗುತ್ತದೆ. ಈ ಯೋಜನೆಯಡಿಯಲ್ಲಿ ಅಕ್ಕಸಾಲಿಗರು, ಕಮ್ಮಾರರು, ಇಸ್ತ್ರಿಅಂಗಡಿಯವರು, ಕರಕುಶಲಕರ್ಮಿಗಳು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ವರ್ಗದವರು ಸೇರಿದಂತೆ ದೇಶಾದ್ಯಂತ ಮೂವತ್ತು ಲಕ್ಷ ಕುಟುಂಬಗಳಿಗೆ ಅನುಕೂಲವಾಗಲಿದೆ. ನಿಮ್ಮ ನಿಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಬೇಕೆಂದು ಸೂಚಿಸಿದರು.
ಕೇಂದ್ರ ಸರ್ಕಾರವು ಹದಿಮೂರು ಸಾವಿರ ಕೋಟಿ ರೂ.ಗಳ ಯೋಜನೆ ಜಾರಿಗೊಳಿಸಿದೆ. ಕುಶಲಕರ್ಮಿಗಳು ಈ ಯೋಜನೆಯಡಿಯಲ್ಲಿ ಬಯೋಮೆಟ್ರಿಕ್ ಆಧಾರಿತ ಪಿ.ಎಂ.ವಿಶ್ವಕರ್ಮ ಫೋರ್ಟ್‍ಲ್ ಬಳಸಿಕೊಂಡು ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಉಚಿತವಾಗಿ ನೊಂದಾಯಿಸಬಹುದಾಗಿದೆ ಎಂದು ಹೇಳಿದರು.
ವಿಕಸಿತ ಭಾರತ ಕಾರ್ಯಕ್ರಮ ಪ್ರತಿ ಗ್ರಾಮಗಳಲ್ಲಿಯೂ ಯಶಸ್ವಿಗೊಳಿಸಬೇಕಾಗಿರುವುದರಿಂದ ಕಾರ್ಯಕರ್ತರು ಮನೆ ಮನೆಗೆ ಹೋಗಿ ಜನತೆಯಲ್ಲಿ ಅರಿವು ಮೂಡಿಸಬೇಕು. ವಿಶ್ವಕರ್ಮ ಯೋಜನೆ ಎಲ್ಲಾ ಸಮುದಾಯಗಳ ಬಡವರಿಗೆ ತಲುಪಬೇಕು. ಆಗ ಮಾತ್ರ ಸರ್ಕಾರದ ಯೋಜನೆಗಳು ಸಫಲವಾಗಲು ಸಾಧ್ಯ. ಈ ನಿಟ್ಟಿನಲ್ಲಿ ಮಂಡಲ ಅಧ್ಯಕ್ಷರು ತಮ್ಮ ಜವಾಬ್ದಾರಿಯನ್ನು ಅರಿತು ಪಕ್ಷದ ಕೆಲಸ ಮಾಡಬೇಕೆಂದು ತಾಕೀತು ಮಾಡಿದರು.
ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ ವಿಶ್ವಕರ್ಮ ಯೋಜನೆ ಎಲ್ಲಾ ಸಮುದಾಯದ ಬಡವರಿಗೆ ತಲುಪಬೇಕಾಗಿದೆ. ಇದೊಂದು ಅತ್ಯುತ್ತಮ ಯೋಜನೆಯಾಗಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದವರು ಇದರ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ. ಕಾಂಗ್ರೆಸ್‍ನಂತ ಪೊಳ್ಳು ಗ್ಯಾರೆಂಟಿಯಲ್ಲ. ನಮ್ಮ ದೇಶದ ಪ್ರಧಾನಿ ಮೋದಿ ಗ್ಯಾರೆಂಟಿ ಇದು ಎಂದು ಹೇಳಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೈಪಾಲ್, ರಾಜೇಶ್ ಬುರುಡೆಕಟ್ಟೆ, ನರೇಂದ್ರ, ಯುವ ಮುಖಂಡರಾದ ಎಂ.ಸಿ.ರಘುಚಂದನ್, ಜಿ.ಎಸ್.ಅನಿತ್‍ಕುಮಾರ್, ಸಿದ್ದಾರ್ಥ ಗುಂಡಾರ್ಪಿ, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸುರೇಶ್‍ಸಿದ್ದಾಪುರ, ನವೀನ್ ಚಾಲುಕ್ಯ, ಸಂಪತ್‍ಕುಮಾರ್, ಕೆ.ಮಲ್ಲಿಕಾರ್ಜುನ್, ಕಲ್ಲೇಶಯ್ಯ, ರಾಮರೆಡ್ಡಿ, ಕಿರಣ, ವೆಂಟಕೇಶ್ ಯಾದವ್, ನಾಗರಾಜ್‍ಬೇದ್ರೆ, ದಗ್ಗೆಶಿವಪ್ರಕಾಶ್, ಶಿವಣ್ಣಾಚಾರ್, ತಿಪ್ಪೇಸ್ವಾಮಿ(ಓಬವ್ವ) ಮಂಡಲ ಅಧ್ಯಕ್ಷರಾದ ಡಾ.ಮಂಜುನಾಥ್, ಶೈಲೇಶ್‍ಕುಮಾರ್, ಸಿದ್ದೇಶ್, ವಿಶ್ವನಾಥ್, ಎ.ರೇಖ, ಕಾಂಚನ, ಶಂಭು, ಮನೋಜ್, ಚಂದ್ರಶೇಖರ್, ವೀರೇಶ್‍ಜಾಲಿಕಟ್ಟೆ, ವಿರುಪಾಕ್ಷ, ಯಶವಂತ್, ಬೋರಯ್ಯ, ನಾಗರಾಜ್, ಪಾಂಡು, ವೀಣ, ಮಹಾಂತೇಶ್ ಸೇರಿದಂತೆ ಪದಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.