Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಪ್ರತಿಯೊಬ್ಬರು ಒಂದೊಂದು ಗಿಡ ನೆಟ್ಟು ಪೋಷಿಸಿ : ಭಾರತಿ ಬಣಕಾರ್

03:05 PM Oct 05, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ,
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 05 : ಜಯ ಕರ್ನಾಟಕ ಜನಪರ ವೇದಿಕೆಯ ನಾಲ್ಕನೆ ವಾರ್ಷಿಕೋತ್ಸವದ ಅಂಗವಾಗಿ ಸ್ಟೇಡಿಯಂ ಸಮೀಪವಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರ ಕಚೇರಿ ಆವರಣದಲ್ಲಿ ಶುಕ್ರವಾರ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Advertisement

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್ ಗಿಡ ನೆಟ್ಟು ಮಾತನಾಡುತ್ತ ಪರಿಸರ ಸದಾ ಹಸಿರಿನಿಂದ ಕೂಡಿರಬೇಕಾದರೆ ಪ್ರತಿಯೊಬ್ಬರು ಒಂದೊಂದು ಗಿಡ ನೆಟ್ಟು ಪೋಷಿಸಿ ದೊಡ್ಡ ಮರವನ್ನಾಗಿ ಬೆಳೆಸಿದಾಗ ಸಕಲ ಜೀವರಾಶಿಗಳಿಗೂ ಶುದ್ದವಾದ ಗಾಳಿ ದೊರಕುತ್ತದೆ. ಗಿಡ-ಮರಗಳನ್ನು ನಾಶಪಡಿಸುವ ಬದಲು ಹೆಚ್ಚು ಹೆಚ್ಚು ಗಿಡಗಳನ್ನು ನೆಡಬೇಕೆಂದು ಹೇಳಿದರು.

ಜಯ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಬಿ.ಟಿ.ರಾಜೇಂದ್ರ ಮಾತನಾಡಿ ಮನೆಗೊಂದು ಮರ ಊರಿಗೊಂದು ಕೆರೆ, ವೇದಿಕೆಯ ನಡೆ ನಿಸರ್ಗದ ಕಡೆ ಎನ್ನುವ ಚಿಂತನೆಯಿಟ್ಟುಕೊಂಡು ಪ್ರತಿ ವರ್ಷವೂ ಸರ್ಕಾರಿ ಕಚೇರಿ, ಶಾಲಾ ಆವರಣ, ಸಾರ್ವಜನಿಕ ಸ್ಥಳಗಳಲ್ಲಿ ಗಿಡಗಳನ್ನು ನೆಟ್ಟು ಜನತೆಯಲ್ಲಿ ಪರಿಸರ ಸಂರಕ್ಷಿಸುವ ಜಾಗೃತಿ ಮೂಡಿಸುತ್ತಿದ್ದೇವೆಂದು ತಿಳಿಸಿದರು.

ಜಯ ಕರ್ನಾಟಕ ಜನಪರ ವೇದಿಕೆ ಪ್ರಧಾನ ಕಾರ್ಯದರ್ಶಿ ಅಭಿಲಾಶ್, ಬಾಬು, ಗಿರೀಶ್, ತಾಲ್ಲೂಕು ಅಧ್ಯಕ್ಷ ಅಶೋಕ್, ಕಾರ್ಯಾಧ್ಯಕ್ಷ ನಿರಂಜನ್, ಪದಾಧಿಕಾರಿಗಳಾದ ಸತೀಶ್, ಶಿವು, ಮಾರುತಿ, ಸಂದೀಪ್, ರಂಗನಾಥ ಇನ್ನು ಅನೇಕರು ಈ ಸಂದರ್ಭದಲ್ಲಿ ಹಾಜರಿದ್ದರು.

Advertisement
Tags :
bengaluruBharti Bankarchitradurgasuddionesuddione newsಗಿಡ ನೆಟ್ಟು ಪೋಷಿಸಿಚಿತ್ರದುರ್ಗಬೆಂಗಳೂರುಭಾರತಿ ಬಣಕಾರ್ಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article