Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಅಂತರ್ಜಲ ಬಳಕೆಗೆ ಅನುಮತಿ ಕಡ್ಡಾಯ : ಜಿಲ್ಲಾಧಿಕಾರಿ ಟಿ.ವೆಂಕಟೇಶ್

06:02 PM Nov 28, 2024 IST | suddionenews
Advertisement

ಚಿತ್ರದುರ್ಗ. ನ.28: ಕೃಷಿ ಹೊರತುಪಡಿಸಿ, ವಾಣಿಜ್ಯ, ಕೈಗಾರಿಕೆ ಹಾಗೂ ಗಣಿಗಾರಿಕೆ ಸಂಬಂಧಿಸಿದ ಸ್ಥಳಗಳಲ್ಲಿ ಕೊಳವೆ ಬಾವಿ ಕೊರೆದು ಅಂತರ್ಜಲ ಬಳಕೆ ಮಾಡಲು, ಕಡ್ಡಾಯವಾಗಿ ಜಿಲ್ಲಾ ಅಂರ್ತಜಲ ಸಮಿತಿಯಿಂದ ಅನುಮತಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು.

Advertisement


ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಜರುಗಿದ ಜಿಲ್ಲಾ ಅಂರ್ತಜಲ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಂರ್ತಜಲ ಸಮಿತಿಯಿಂದ ಅಧಿಕೃತವಾಗಿ ನೊಂದಣಿಯಾದ ರಿಗ್ (ಬೋರ್‍ವೆಲ್ ಕೊರೆಯವ ಲಾರಿ) ವಾಹನಗಳು ಮಾತ್ರ ಕೊಳವೆ ಬಾವಿ ಕೊರೆಯಬೇಕು. ನೊಂದಣಿ ಅವಧಿ ಪೂರ್ಣಗೊಂಡ ವಾಹನ ಮಾಲಿಕರು, ಕೂಡಲೇ ನೊಂದಣಿ ನವೀಕರಿಸಿಕೊಳ್ಳಬೇಕು. ವಾಣಿಜ್ಯ ಸ್ಥಳಗಳ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಾಗ ಜಿಲ್ಲಾ ಅಂರ್ತಜಲ ಸಮಿತಿಯಿಂದ ನಿರಾಕ್ಷೇಪಣ ಪತ್ರ ಪಡೆದ ಬಗ್ಗೆ ಬೆಸ್ಕಾಂ ಅಧಿಕಾರಿಗಳು ಖಚಿತ ಪಡಿಸಿಕೊಳ್ಳಬೇಕು. ಅನುಪಯುಕ್ತ ಹಾಗೂ ವಿಫಲ ಕೊಳವೆ ಬಾವಿಗಳನ್ನು ಮುಚ್ಚಲಾಗಿದೆಯೇ ಎಂಬುದರ ಬಗ್ಗೆ ತಹಶೀಲ್ದಾರ್, ತಾ.ಪಂ. ಇಓ ಹಾಗೂ ಪಿಡಿಓಗಳು ತಪಾಸಣೆ ನಡೆಸಬೇಕು. ರೈತರು ವಿಫಲ ಕೊಳವೆ ಬಾವಿಗಳ ಕೇಸಿಂಗ್ ಪೈಪ್‍ನ್ನು ತೆಗೆಯುವುದರಿಂದ, ಇಂತಹ ಸ್ಥಳಗಳು ಅವಘಡಗಳಿಗೆ ಕಾರಣವಾಗುತ್ತವೆ. ಹೀಗಾಗಿ ವಿಫಲ ಕೊಳವೆ ಬಾವಿಗಳನ್ನು ಸೂಕ್ತ ರೀತಿಯಲ್ಲಿ ಮುಚ್ಚಲು ಕ್ರಮ ಕೈಗೊಳ್ಳಬೇಕು. ರೈತರಿಗೆ ಈ ಬಗ್ಗೆ ತಿಳುವಳಿಕೆ ನೀಡುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.

ಸಭೆಯಲ್ಲಿ  ಜಿ.ಪಂ.ಸಿಇಒ ಎಸ್.ಜೆ.ಸೋಮಶೇಖರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಬಸವನಗೌಡ ಪಾಟೀಲ್, ಹಿರಿಯ ಭೂ ವಿಜ್ಞಾನಿ ಬಸಂತ್ ಸೇರಿಂದತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Advertisement
Tags :
bengaluruchitradurgaDC Venkatesh TDistrict Collector T. Venkatesh noticeground waterkannadaKannadaNewsmandatorypermissionsuddionesuddionenewsಅಂತರ್ಜಲಅನುಮತಿ ಕಡ್ಡಾಯಕನ್ನಡಕನ್ನಡವಾರ್ತೆಕನ್ನಡಸುದ್ದಿಚಿತ್ರದುರ್ಗಜಿಲ್ಲಾಧಿಕಾರಿ ಟಿ.ವೆಂಕಟೇಶ್ಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್ಸೂಚನೆ
Advertisement
Next Article