For the best experience, open
https://m.suddione.com
on your mobile browser.
Advertisement

ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿ, ಇತರರಿಗೆ ಮಾದರಿಯಾಗಿ : ಎನ್.ಸಿ.ರಘು

06:02 PM Jun 15, 2024 IST | suddionenews
ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿ  ಇತರರಿಗೆ ಮಾದರಿಯಾಗಿ   ಎನ್ ಸಿ ರಘು
Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

Advertisement

ಚಿತ್ರದುರ್ಗ ಜೂ. 15 : ಸಂಘ ಸಂಸ್ಥೆಗಳಿಂದ ಪಡೆದ ಸಾಲವನ್ನು ಸರಿಯಾದ ರೀತಿಯಲ್ಲಿ ಸದುಪಯೋಗ ಮಾಡಿಕೊಳ್ಳಿ, ತಮ್ಮ ಆದಾಯದ ಮಿತಿಯನ್ನು ಹೆಚ್ಚಳ ಮಾಡಿಕೊಳ್ಳಿ ಅದೇ ರೀತಿ ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿಯನ್ನು ಮಾಡುವುದರ ಮೂಲಕ ಮುಂದಿನ ಜನರಿಗೆ ಮಾದರಿಯಾಗುವಂತೆ ಬಿ.ಎಸ್.ಎಸ್. ಮೈಕ್ರೋ ಫೈನಾನ್ಸ್ ಲಿಮಿಟೆಡ್‍ನ ಉತ್ತರ ಕರ್ನಾಟಕ ವಲಯದ ಮುಖ್ಯಸ್ಥರಾದ ಎನ್.ಸಿ.ರಘು ಕರೆ ನೀಡಿದರು.

ಚಿತ್ರದುರ್ಗ ನಗರದ ದಾವಣಗೆರೆ ರಸ್ತೆಯಲ್ಲಿನ ರೈಲ್ವೆ ನಿಲ್ದಾಣದ ಬಳಿಯಲ್ಲಿನ ಬಿ.ಎಸ್.ಎಸ್. ಮೈಕ್ರೋ ಫೈನಾನ್ಸ್ ಲಿಮಿಟೆಡ್‍ನ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗರ್ಭಿಣೀಯರಿಗೆ, ಬಾಣಂತಿಯರಿಗೆ ಪೌಷ್ಟಿಂಕ ಆಹಾರ ವಿತರಣೆ ಹಾಗೂ ಉಚಿತ ಆರೋಗ್ಯ ಮತ್ತು ಕಣ್ಣು ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಾನವನಿಗೆ ಕಣ್ಣು ಅತಿ ಮುಖ್ಯವಾದ ಅಂಗವಾಗಿದೆ ಅದು ಇಲ್ಲದಿದ್ದರೆ ಪ್ರಪಂಚವನ್ನು ಕಾಣಲು ಸಾಧ್ಯವಿಲ್ಲ,  ಇದರ ರಕ್ಷಣೆ ಆಗತ್ಯವಾಗಿದೆ ಏನಾದರೂ ಆದರೆ ನಿರ್ಲಕ್ಷ್ಯ ಮಾಡಬಾರದು ಶೀಘ್ರವಾಗಿ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆಯನ್ನು ಪಡೆಯಬೇಕೆಂದು ತಿಳಿಸಿದರು.

Advertisement

ನಮ್ಮಲ್ಲಿ ಹಲವಾರು ಸಂಘ ಸಂಸ್ಥೆಗಳು ಹಣಕಾಸಿನ ವ್ಯವಹಾರವನ್ನು ಮಾಡುತ್ತಿದ್ದಾರೆ. ಇದರಲ್ಲಿ ಸಾಲವನ್ನು ಪಡೆದವರು ಅದನ್ನು ಸರಿಯಾದ ರೀತಿಯಲ್ಲಿ ಉಪಯೋಗವನ್ನು ಮಾಡಿಕೊಳ್ಳಬೇಕಿದೆ ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಬೇಕಿದೆ. ಸಾಲವನ್ನು ಪಡೆದು ದುಂದು ವೆಚ್ಚ ಮಾಡಬಾರದು, ಅದೇ ರೀತಿ ಪಡೆದ ಸಾಲವನ್ನು ಸಕಾಲದಲ್ಲಿ ಮರು ಪಾವತಿಯನ್ನು ಮಾಡುವುದರ ಮೂಲಕ ಬೇರೆಯವರಿಗೆ ಮಾದರಿಯಾಗಬೇಕಿದೆ ಎಂದು ತಿಳಿಸಿ, ಬಿ.ಎಸ್.ಎಸ್. ಮೈಕ್ರೋ ಫೈನಾಸ್ಸ್ ಲಿಮಿಟೆಡ್ ಸಹಾ ಹಲವಾರು ಉಪಯುಕ್ತವಾದ ಕಾರ್ಯಕ್ರಮಗಳನ್ನು ಮಾಡುತ್ತಿದೆ, ಶಾಲೆಗಳನ್ನು ದತ್ತು ಪಡೆದ ಅಲ್ಲಿ ಮೂಲಭೂತ ಸೌಕರ್ಯವನ್ನು ನೀಡುತ್ತಿದೆ. ಆರೋಗ್ಯ ಶಿಬಿರವನ್ನು ನಡೆಸುವುದರ ಮೂಲಕ ತನ್ನ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸುತ್ತಿದೆ ಎಂದರು.

ಬಿ.ಎಸ್.ಎಸ್. ಮೈಕ್ರೋ ಫೈನಾನ್ಸ್ ಲಿಮಿಟೆಡ್‍ನ ಸಹಾಯಕ ವ್ಯವಸ್ಥಾಪಕರಾದ ಪ್ರಶಾಂತ್ ಕುಮಾರ್ ಮಾತನಾಡಿ, 1999ರಲ್ಲಿ ಬಿ.ಎಸ್.ಎಸ್. ಸಂಘದ ರೀತಿಯಲ್ಲಿ ಎನ್.ಜಿ.ಓ ರೀತಿಯಲ್ಲಿ ಪ್ರಾರಂಭವಾಯಿತು. 2008ರಲ್ಲಿ ಕಂಪನಿಯಾಗಿ ಮಾರ್ಪಾಡಾಯಿತು. 2018ರಲ್ಲಿ ಕೋಟ್ಯಾಕ್ ಮಹೇಂದ್ರ ಬ್ಯಾಂಕ್ ಹೊಂದಾಣಿಕೆಯಾಯಿತು. ಇದು 12 ರಾಜ್ಯಗಳಲ್ಲಿ ಕೆಲಸ ಮಾಡುತ್ತಿದ್ದು ಇದರಲ್ಲಿ 18500 ಜನ ಕೆಲಸಗಾರರಿದ್ದಾರೆ. 25 ಲಕ್ಷ ಜನ ಸಾಲವನ್ನು ಪಡೆದಿದ್ದಾರೆ.

ಈ ಸಂಸ್ಥೆ ಬಡ ಜನ ಅರ್ಥಿಕವಾಗಿ ಬೆಳಯಲು ಸಹಾಯವನ್ನು ಮಾಡುತ್ತಿದೆ. ಜನರ ಪ್ರಗತಿಯನ್ನು ಗುರಿಯಾಗಿರಿಸಿಕೊಂಡಿದೆ. ದೇಶದಿಂದ ಬಡತನವನ್ನು ಹೋಗಲಾಡಿಸಲು ಮುಂದಾಗಿದೆ. ಸಂಸ್ಥೆಗಳಿಸಿದ ಆದಾಯದಲ್ಲಿ ಶೇ.2ರಷ್ಟನ್ನು ಜನರ ಕಲ್ಯಾಣಕ್ಕಾಗಿ ವೆಚ್ಚ ಮಾಡುತ್ತಿದೆ. ಇದಕ್ಕಾಗಿ 7 ಕೋಟಿ ಹಣವನ್ನು ಮೀಸಲಿರಿಸಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಆಯ್ದ 24 ಗ್ರಾಮಗಳಲ್ಲಿ ಆರೋಗ್ಯ ಶಿಬಿರವನ್ನು ಮಾಡುವುದರ ಮೂಲಕ ಜನರಲ್ಲಿ ಆರೋಗ್ಯದ ಬಗ್ಗೆ ಅರಿವನ್ನು ಮೂಡಿಸಲಾಗುತ್ತಿದೆ. ವ್ಯವಸಹಾರದ ಜೊತೆಗೆ ಸೇವೆಯನ್ನು ಸಹಾ ಮಾಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಬಿ.ಎಸ್.ಎಸ್. ಮೈಕ್ರೋ ಫೈನಾನ್ಸ್ ಲಿಮಿಟೆಡ್‍ನ ಪ್ರಧಾನ ವ್ಯವಸ್ಥಾಪಕರಾದ ಪಂಡಿತ್ ಜಿ.ಪಾಟೀಲ್, ದಾವಣಗೆರೆ ವಲಯದ ಮುಖ್ಯಸ್ಥರಾದ ದೇವರಾಜ್, ಹಿರಿಯ ವ್ಯವಸ್ಥಾಪಕರಾದ ದೀಕ್ಷಿತ್ ಭಾಗವಹಿಸಿದ್ದರು.ಮ ಇದೆ ಸಂದರ್ಭದಲ್ಲಿ ಗರ್ಭಿಣೀಯರಿಗೆ, ಬಾಣಂತಿಯರಿಗೆ ಪೌಷ್ಟಿಂಕ ಆಹಾರ ಹಾಗೂ ಉಚಿತ ಆರೋಗ್ಯ ಮತ್ತು ಕಣ್ಣು ತಪಾಸಣೆಯನ್ನು ನಡೆಸಲಾಯಿತು.

Tags :
Advertisement