For the best experience, open
https://m.suddione.com
on your mobile browser.
Advertisement

ಮಕ್ಕಳ ಬೆಳವಣಿಗೆಗೆ ಪೋಷಕರ ಹೊಣೆಗಾರಿಕೆ ಮಹತ್ವದ್ದಾಗಿದೆ : ಹೆಚ್.ಬಿಲ್ಲಪ್ಪ

07:35 PM Feb 24, 2024 IST | suddionenews
ಮಕ್ಕಳ ಬೆಳವಣಿಗೆಗೆ ಪೋಷಕರ ಹೊಣೆಗಾರಿಕೆ ಮಹತ್ವದ್ದಾಗಿದೆ   ಹೆಚ್ ಬಿಲ್ಲಪ್ಪ
Advertisement

ಸುದ್ದಿಒನ್, ಹೊಸದುರ್ಗ, ಫೆಬ್ರವರಿ. 24 : ಸರ್ಕಾರಿ ಶಾಲೆಗಳಿಂದ ವಿದ್ಯಾರ್ಥಿಗಳ ಜ್ಞಾನ ಮತ್ತು ವ್ಯಕ್ತಿತ್ವ ವಿಕಾಸವಾಗುತ್ತದೆ. ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಶಾಲೆಗಳ ಹೊಣೆಗಾರಿಕೆ ಬಹುಮುಖ್ಯವಾದರೂ, ಪೋಷಕರು ಜವಾಬ್ದಾರಿಯೂ ಸಮಾನವಾಗಿದೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಹೆಚ್.ಬಿಲ್ಲಪ್ಪ ತಿಳಿಸಿದರು.

Advertisement
Advertisement

ತಾಲ್ಲೂಕಿನ ಬೋಕಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶುಕ್ರವಾರ ರಾತ್ರಿ ನಡೆದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

Advertisement

ಮಕ್ಕಳು ಮತ್ತು ಪೋಷಕರು ಉತ್ಸಾಹದಿಂದ ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಶಾಲೆಯಲ್ಲಿ ಶಿಕ್ಷಕರು ಉತ್ತಮವಾದ ಬೋಧನೆಯನ್ನು ಮಾಡುವುದರ ಮೂಲಕ ಮಕ್ಕಳನ್ನು ದೇಶದ ಮುಂದಿನ ಉತ್ತಮ ಪ್ರಜೆಗಳಾಗಿ ನಿರ್ಮಾಣ ಮಾಡಬೇಕು ಎಂದರು.

Advertisement
Advertisement

ಕ್ಷೇತ್ರ ಶಿಕ್ಷಣಾಧಿಕಾರಿ ಸೈಯದ್ ಮೋಸಿನ್ ಮಾತನಾಡಿ, ಶಾಲೆ ಅಭಿವೃದ್ಧಿಯಾಗಬೇಕಾದರೆ, ಸಮುದಾಯದ ಹಿರಿಯ ವಿದ್ಯಾರ್ಥಿಗಳ ಸಹಕಾರ ಅಗತ್ಯ. ಸರ್ಕಾರ ಲಕ್ಷಾಂತರ ಹಣ ನೀಡಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದೆ. ಶಿಕ್ಷಕರು ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು. ಗ್ರಾಮೀಣ ಭಾಗದ ಬೋಕಿಕೆರೆ ಶಾಲೆಯ  ವಿದ್ಯಾರ್ಥಿಗಳು ಮೆಡಿಕಲ್ ಮತ್ತು ಇಂಜನಿಯರಿಂಗ್ ಸೇರಿದಂತೆ ಉನ್ನತ  ಶಿಕ್ಷಣ ಪಡೆದು ಸಾಧನೆಗೈದ ವಿದ್ಯಾರ್ಥಿಗಳನ್ನು ಗುರುತಿಸಿ, ಸನ್ಮಾನ ಮಾಡಿರುವುದು ಔಚಿತ್ಯ ಪೂರ್ಣವಾಗಿದೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಂಗಮ್ಮ,  ಸದಸ್ಯರಾದ ಬಳ್ಳೆಕೆರೆ ಕುಮಾರ್, ಮಂಜುಳ ಆನಂದ, ಕರಿಯಪ್ಪ,  ಎಂ.ಹೆಚ್.ಕೃಷ್ಣಮೂರ್ತಿ, ರಾಗಿ ಶಿವಮೂರ್ತಿ, ಧರ್ಮಸ್ಥಳದ ಸಂಘದ ಚಂದ್ರಶೇಖರ್, ಸ್ವಾಮಿ, ನಿವೃತ್ತ ಪ್ರಾಚಾರ್ಯ ಮಲ್ಲಪ್ಪ, ಜಂತಿಕೊಳಲು ನಾಗೇಶಪ್ಪ, ಹರೀಶ ಬಾಬು, ಮಠ ಶಿವು, ಮಹೇಶ್ವರಪ್ಪ, ಮಂಜಪ್ಪ, ರಾಮಚಂದ್ರಪ್ಪ,
ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ಶ್ರೀನಿವಾಸ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪರಮೇಶ್ವರಪ್ಪ, ಪಿಡಿಒ ಜಯಪ್ಪ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ  ಮಂಜುನಾಥ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸುತ್ತಮುತ್ತಲ ಗ್ರಾಮಗಳನ್ನು ನೂರಾರು ಜನರು ಪಾಲ್ಗೊಂಡಿದ್ದರು.

Advertisement
Tags :
Advertisement