For the best experience, open
https://m.suddione.com
on your mobile browser.
Advertisement

ಪಂಡಿತಾರಾಧ್ಯ ಶ್ರೀಗಳಿಗೆ ಡಾ. ಎಂ ಎಂ ಕಲಬುರ್ಗಿ ಪ್ರಗತಿಪರ ಚಿಂತಕ ಪ್ರಶಸ್ತಿ

08:17 PM Feb 06, 2024 IST | suddionenews
ಪಂಡಿತಾರಾಧ್ಯ ಶ್ರೀಗಳಿಗೆ ಡಾ  ಎಂ ಎಂ ಕಲಬುರ್ಗಿ ಪ್ರಗತಿಪರ ಚಿಂತಕ ಪ್ರಶಸ್ತಿ
Advertisement

ಸಾಣೇಹಳ್ಳಿ: ಪ್ರಗತಿಪರ ಚಿಂತಕ ಡಾ. ಎಂ ಎಂ ಕಲಬುರಗಿ ಅವರ ಪ್ರಶಸ್ತಿಯನ್ನು ಪಂಡಿತಾರಾಧ್ಯ ಶ್ರೀಗಳಿಗೆ ನೀಡಲಾಗಿದೆ. ಧಾರವಾಡದ ಮಜ್ಜಿಗೆ ಪಂಚಪ್ಪ ಸಮುದಾಯ ಸಭಾಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

Advertisement
Advertisement

ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಪಂಡಿತಾರಾಧ್ಯ ಶ್ರೀಗಳು, ಪ್ರಶಸ್ತಿಯ ಬಗ್ಗೆ ಆಸಕ್ತಿಯೂ ಇಲ್ಲ. ನಿರಾಸಕ್ತಿಯೂ ಇಲ್ಲ. ಪ್ರಶಸ್ತಿಯನ್ನು ಸ್ವೀಕಾರ ಮಾಡಿದರೂ ದೊಡ್ಡವರಾಗುವುದಿಲ್ಲ. ತಿರಸ್ಕಾರ ಮಾಡಿದರೂ ದೊಡ್ಡವರಾಗುವುದಿಲ್ಲ. ಅದನ್ನು ಗೌರವದಿಂದ ಸ್ವೀಕಾರ ಮಾಡುವ ಮನಸ್ಥಿತಿಯನ್ನು ಬೆಳೆಸಿಕೊಂಡು ತಮ್ಮ ಜವಾಬ್ದಾರಿಗಳನ್ನು ಹೆಚ್ಚಿಸಿಕೊಳ್ಳಬೇಕು. ಅದರಿಂದ ತನ್ನ ವ್ಯಕ್ತಿತ್ವ ಗಟ್ಟಿಕೊಳಿಸಿಕೊಳ್ಳಬೇಕು ಎಂದು ಹೇಳಿದರು.

Advertisement

Advertisement
Advertisement

ಇತ್ತೀಚಿನ‌ ದಿನಗಳಲ್ಲಿ ಸ್ವಾಮಿಗಳ ಸಂಖ್ಯೆ ಹೆಚ್ಚಾಗಿವೆ. ಆದರೆ ಸ್ವಾಮಿಗಳ ಘನತೆ, ಗೌರವ ಕಡಿಮೆಯಾಗುತ್ತಿರುವುದು ವಿಷಾದದ ಸಂಗತಿ. ಕೆಲವು ಸ್ವಾಮಿಗಳನ್ನು ನೋಡಿದರೆ ಸ್ವಾಮಿಗಳಿಗಿಂತ ಸಂಸಾರಿಗಳೆ ಎಷ್ಟೋ ವಾಸಿ ಎನಿಸುವುದು. ನಮ್ಮ ದೀಕ್ಷಾ ಗುರುಗಳಾದ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳವರು ಬಸವಣ್ಣನವರನ್ನು ಗೃಹಸ್ಥ ಜಗದ್ಗುರು ಎಂದು ಕರೆಯುತ್ತಿದ್ದರು. ಬಸವಣ್ಣನವರ ತತ್ವಗಳನ್ನು ಉಸಿರಾಗಿಸಿಕೊಂಡು ನಡೆ -ನುಡಿಗಳನ್ನು ಬದುಕಿನುದ್ದಕ್ಕೂ ಸಿದ್ಧಾಂತಗಳನ್ನಾಗಿ ಮಾಡಿಕೊಂಡರು ಎಂದಿದ್ದಾರೆ.

ಇದೆ ವೇಳೆ ಗದಗಿನ ತೋಟದಾರ್ಯ ಮಠದ ಸಿದ್ಧರಾಮ ಮಹಾಸ್ವಾಮಿಗಳು ಮಾತನಾಡಿ, ಪಂಡಿತಾರಾಧ್ಯ ಶ್ರೀಗಳು ಪ್ರಗತಿಪರ ಚಿಂತನೆಗೆ ಹೆಸರಾದವರು. ಈ‌ ಪ್ರಶಸ್ತಿ ಶ್ರೀಗಳಿಗೆ ಕೊಟ್ಟು ಪ್ರಶಸ್ತಿಗೆ ನ್ಯಾಯವನ್ನು ಒದಗಿಸಿದ್ದಾರೆ. ಕಲ್ಬುರ್ಗಿಯವರು ದೈಹಿಕವಾಗಿ ಇಲ್ಲದಿದ್ದರೂ ಅವರ ಚಿಂತನೆಗಳು ಇನ್ನು ಉಳಿದಿವೆ. ಪ್ರಗತಿಪರ ಚಿಂತನೆಯನ್ನು ನಿರಂತರವಾಗಿ ಕೆಲಸ ಮಾಡಬೇಕಾಗಿದೆ. ಕಲ್ಬುರ್ಗಿಯವರ ವಿಚಾರಧಾರೆಗಳನ್ನು ಸಮಾಜದಲ್ಲಿ ಬಿತ್ತುವ ಕೆಲಸ ಆಗಬೇಕು. ಎಂ ಎಂ ಕಲ್ಬುರ್ಗಿ ಪ್ರಗತಿಪರ ಚಿಂತಕ ಪ್ರಶಸ್ತಿ ಪಡೆದುಕೊಳ್ಳುವುದಕ್ಕೂ ಅರ್ಹತೆ ಇರಬೇಕು. ಅಂತಹ ಅರ್ಹತೆ ಪಂಡಿತಾರಾಧ್ಯ ಶ್ರೀಗಳಿಗೆ ಇದೆ. ಬಸವಾದಿ ಶಿವಶರಣರ ವೈಜ್ಞಾನಿಕ, ವೈಚಾರಿಕ ವಿಚಾರಗಳನ್ನು ಪ್ರತಿಬಿಂಬಿಸುವ ಕಾರ್ಯ ಪಂಡಿತಾರಾಧ್ಯ ಶ್ರೀಗಳಿಂದ ಆಗ್ತಾ ಇದೆ. ಕಲ್ಬುರ್ಗಿಯವರ ಯೋಜನೆ ಮತ್ತು ಯೋಚನೆಗಳನ್ನು ಅಕ್ಷರಶಃ ಕಾರ್ಯರೂಪಕ್ಕೆ ಪಂಡಿತಾರಾಧ್ಯ ಶ್ರೀಗಳು ತರುತ್ತಿರುವುದು ಶ್ಲಾಘನೀಯ ಎಂದರು.

ನಾಡೋಜ ಗೊ ರು ಚನ್ನಬಸಪ್ಪ ಮಾತನಾಡಿ, ಭಾರತದಂತಹ ರಾಷ್ಟ್ರದಲ್ಲಿ ಸಂಶೋಧನೆ ಮಾಡುವುದು ಅಷ್ಟು ಸುಲಭವಲ್ಲ. ಭಾರತೀಯ ಸಂಶೋಧಕ ಅನೇಕ ಯಜ್ಞಕುಂಡಗಳನ್ನು ದಾಟಬೇಕಾಗುತ್ತದೆ ಇವು ಕಲ್ಬುರ್ಗಿಯರ ಮಾತುಗಳು. ಪ್ರಶಸ್ತಿ ಎನ್ನುವುದು ಪ್ರತಿಷ್ಠೆ, ಗೌರವಕ್ಕೆ, ಅನನ್ಯತೆಗೆ, ಮನ್ನಣೆಗೆ ಸಂದ ಗೌರವ. ಪ್ರಶಸ್ತಿ ಮೂರು ಅಂಶಗಳನ್ನು ಒಳಗೊಂಡಿದೆ. ಪ್ರಶಸ್ತಿ ಪ್ರವರ್ತಕ, ಪ್ರಶಸ್ತಿ ಪ್ರಯುಕ್ತ, ಪ್ರಶಸ್ತಿ ಪುರಸ್ಕೃತರು. ಈ ಸಮಾರಂಭದಲ್ಲಿ ಮೂರೂ ಸಂಗಮಗೊಂಡಿವೆ. ಪ್ರಶಸ್ತಿ ಪುರಸ್ಕೃತರು ತಮ್ಮ ಮಠವನ್ನು ಶರಣ ತತ್ವ ಪ್ರಸಾರದ ವೈಚಾರಿಕ ಮಠವನ್ನಾಗಿ ಮಾಡಿದರು ಎಂದರು.

Advertisement
Tags :
Advertisement